ಪ್ರಮುಖ ಸುದ್ದಿ

ಧರ್ಮಸ್ಥಳ ಸಂಸ್ಥೆಯಿಂದ ವಿವಿಧಡೆ ಸೇವಾ ಸಿಂಧು ಕೇಂದ್ರ

10,501 ಉಚಿತ ಇ-ಶ್ರಮ ಕಾರ್ಡ್, 1250 ಪ್ಯಾನ್ ಕಾರ್ಡ್, 598 ಕೆವೈಸಿ ಅಪ್ಡೇಟ್

ಧರ್ಮಸ್ಥಳ ಸಂಸ್ಥೆಯಿಂದ ವಿವಿಧಡೆ ಸೇವಾ ಸಿಂಧು ಕೇಂದ್ರ

10,501 ಉಚಿತ ಇ-ಶ್ರಮ ಕಾರ್ಡ್, 1250 ಪ್ಯಾನ್ ಕಾರ್ಡ್, 598 ಕೆವೈಸಿ ಅಪ್ಡೇಟ್

yadgiri, ಶಹಾಪುರಃ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯಿಂದ ತಾಲೂಕಿನ ವಿವಿಧಡೆ 18 ಸೇವಾಕೇಂದ್ರಗಳನ್ನು ತೆರೆಯಲಾಗಿದ್ದು, ಆ ಮೂಲಕ ಗ್ರಾಮೀಣ ಭಾಗದ, ರೈತಾಪಿ ಜನರಿಗೆ ಇದುವರೆಗೂ 10,501 ಇ-ಶ್ರಮ ಕಾರ್ಡ್, 1250 ಪ್ಯಾನ್ ಕಾರ್ಡ್ ಹಾಗೂ 598 ಕೆವೈಸಿ ಅಪ್ಡೇಟ್ ಕಾರ್ಯವನ್ನು ಉಚಿತವಾಗಿ ಮಾಡಿಕೊಡಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ನಿದೇಶಕ ಕಮಲಾಕ್ಷ ತಿಳಿಸಿದರು.

ನಗರದ ಧರ್ಮಸ್ಥಳ ಸಂಸ್ಥೆಯ ಶಾಖೆಯಲ್ಲಿ ನಡೆದ ಗ್ರಾಮ ಮಟ್ಟದ ಕಾರ್ಯನಿರ್ವಾಹಕರ ಆಯ್ಕೆಯ ನೇರ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಮೊದಲು 18 ಕೇಂದ್ರಗಳ ಜೊತೆಗೆ ಇನ್ನೂ 15 ಹೊಸ ಸೇವಾ ಸಿಂಧು ಕೇಂದ್ರಗಳನ್ನು ತೆರೆಯಲಾಗಿದ್ದು, ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಕಾರ್ಯನಿರ್ವಾಹಕರನ್ನು ನೇರವಾಗಿ ಸಂದರ್ಶಿಸಿ ನೇಮಿಸಲಾಗುತ್ತದೆ. ನೇಮಕಗೊಂಡವರು ಸಮರ್ಪಕವಾಗಿ ಸಂಸ್ಥೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು. ಸಂಸ್ಥೆಯಲ್ಲಿ ಯಾವುದೇ ಕೆಲಸವಿರಲಿ ಸೇವಾ ಮನೋಭಾವದಿಂದ ಮಾಡಬೇಕು.

ಇಲ್ಲಿವರೆಗೂ 18 ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರ ಅಗತ್ಯತೆಗೆ ತಕ್ಕಂತೆ ಪ್ಯಾನ್ ಕಾರ್ಡ್, ಇ-ಶ್ರಮ ಕಾರ್ಡ್‍ಗಳನ್ನು ಮಾಡಿಕೊಡಲಾಗಿದೆ. ಸೇವೆ ಇನ್ನಷ್ಟು ಪ್ರಗತಿದಾಯಕಗೊಳಿಸಲು 15 ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ 6 ವರ್ಷಗಳಿಂದ ಸ್ವ-ಸಹಾಯ ಸಂಘ, ಪ್ರಗತಿ ಬಂಧು ಸಂಘಗಳ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಜನ ಸಾಮಾನ್ಯರನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ. ಅದರಂತೆಯೇ ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ ಸೇವಾ ಸಿಂಧು ಕೇಂದ್ರಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಅವಕಾಶ ದೊರಕಿದೆ.

ಸಂಸೈಯ ಎಲ್ಲರೂ ಆಯಾ ಕೆಲಸಗಳನ್ನು ಸೇವಾ ಮನೋಭಾವದೊಂದಿಗೆ ಅಚ್ಚುಕಟ್ಟಾಗಿ ಮಾಡುವ ಮೂಲಕ ಸಂಸ್ಥೆ ಯಶಸ್ವಿಯ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಒಟ್ಟು ತಾಲೂಕಿನಲ್ಲಿ ಇನ್ಮುಂದೆ 33 ಕೇಂದ್ರಗಳು ಕೆಲಸ ಮಾಡಲಿವೆ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಪ್ರದೀಪ್ ಆರ್.ಹೆಗ್ಡೆ, ಸಿಎಸ್‍ಸಿ ಜಿಲ್ಲಾ ನೋಡಲ್ ಅಧಿಕಾರಿ ಸಚಿನ್, ತಾಲೂಕಿನ ಹಣಕಾಸು ಪ್ರಬಂಧಕ ಮಾರುತಿ, ನೋಡಲ್ ಅಧಿಕಾರಿಗಳು ಸೇರಿದಂತೆ ನೇರ ಸಂದರ್ಶನಕ್ಕೆ ಆಯ್ಕೆಯಾಗಿರುವ ವಿಎಲ್‍ವಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button