ಪ್ರಮುಖ ಸುದ್ದಿ

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಅಗತ್ಯ – ಗದ್ದುಗೆ

ಗಾಂಧಿ ಸ್ಮರಣೆ ಮತ್ತು ದುಶ್ಚಟ ವಿರುದ್ಧ ಜಾಗೃತಿ

ಗಾಂಧಿ ಸ್ಮರಣೆ ಮತ್ತು ದುಶ್ಚಟ ವಿರುದ್ಧ ಜಾಗೃತಿ

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಅಗತ್ಯ – ಗದ್ದುಗೆ

yadgiri, ಶಹಾಪುರಃ ಪ್ರಸ್ತುತ ಕಾಲದಲ್ಲಿ ಯುವ ಸಮೂಹ ಶೋಕಿಗಾಗಿ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಯುವಕರು ದಶ್ಚಟದಿಂದ ಬದುಕು ಹಾಳು ಮಾಡುಕೊಳ್ಳುತ್ತಿದ್ದು, ದುಶ್ಚಟ ವಿರುದ್ಧ ಜಾಗೃತಿ ಕಾರ್ಯಕ್ರಮ ಹಾಕಿಕೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜೊತೆ ನಾಗರಿಕರು ಕೈಜೋಡಿಸುವ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಾಥ್ ನೀಡಬೇಕಿದೆ ಎಂದು ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.
ನಗರದ ಹಿಂಗುಲಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಇಲ್ಲಿನ ಬಸವೇಶ್ವರ ನಗರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಹಯೋಗದೊಂದಿಗೆ ನಡೆದ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದುಶ್ಚಟ ವಿರುದ್ಧ ಹೋರಾಟಕ್ಕೆ ಮೊದಲು ಮಹಿಳೆಯರ ಪಾತ್ರ ಬಹುಮುಖ್ಯವಿದೆ. ಮಹಿಳೆಯ ಪತಿಯಾಗಲಿ ಮಕ್ಕಳಾಗಲಿ ದುಶ್ಚಟವನ್ನು ಕಲಿತ ಆರಂಭದಲ್ಲಿಯೇ ಆತನ ಮೇಲೆ ಒತ್ತಡ ಹಾಕಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದುಶ್ಚಟದಿಂದ ಹೊರ ಬರುವಂತೆ ಮಾಡಬೇಕು. ದುಶ್ಚಟದಿಂದ ಬದುಕು ಬರ್ಬಾದ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಮಕ್ಕಳನ್ನು, ಪತಿಯರನ್ನು ಕಳೆದುಕೊಂಡು ಮಾತೆಯರು, ಸಹೋದರ, ಸಹೋದರಿಯರು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಇದೊಂದು ಉತ್ತಮ ಕಾರ್ಯಕ್ರಮ ಇದರಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ನಾವೆಲ್ಲ ಅಳವಡಿಸಿಕೊಂಡು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಮಹಾತ್ಮರ, ಶರಣ ಸಂತರ ಚರಿತ್ರೆಗಳನ್ನು ಬಾಲ್ಯದಿಂದಲೇ ತಿಳಿಸುವ ಮೂಲಕ ಉತ್ತಮ ಸಂಸ್ಕಾರ ನೀಡಬೇಕೆಂದರು. .
ಸಂಸ್ಥೆಯ ಕಲ್ಬುರ್ಗಿಯ ಆಡಳಿತ ಯೋಜನಾಧಿಕಾರಿ ಪ್ರದೀಪ್ ಹೆಗಡೆ ಕಾರ್ಯಕ್ರಮ ಕುರಿತು ಸವಿವರವಾಗಿ ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆವಹಿಸಿದ್ದರು. ತಾಲೂಕಿನ ಯೋಜನಾಧಿಕಾರಿ ಕಲ್ಲಪ್ಪ ಎ. ಯಾವಗಲ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ, ನಗರಸಭೆ ಸದಸ್ಯ ಸತೀಶ ಪಂಚಭಾವಿ, ತುಳಜಾರಾಮ, ಕಾಶಿಲಿಂಗಪ್ಪ, ವೆಂಕಟೇಶ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button