ಧಾರ್ಮಿಕ ಕಾರ್ಯ ನೆಮ್ಮದಿಗೆ ಸಾಕಾರ – ಗುರುಪಾದ ಮಹಾಸ್ವಾಮೀಜಿ
ಸಾಮೂಹಿಕವಾಗಿ ಮಾಡಿದ ಕಾರ್ಯಕ್ಕೆ ಬಲ ಜಾಸ್ತಿ- ಗುರುಪಾದ ಮಹಾಸ್ವಾಮೀಜಿ
ಸಾಮೂಹಿಕವಾಗಿ ಮಾಡಿದ ಕಾರ್ಯಕ್ಕೆ ಬಲ ಜಾಸ್ತಿ- ಗುರುಪಾದ ಮಹಾಸ್ವಾಮೀಜಿ
ಧಾರ್ಮಿಕ ಕಾರ್ಯ ನೆಮ್ಮದಿಗೆ ಸಾಕಾರ
ಧರ್ಮಸ್ಥಳ ಸಂಸ್ಥೆಯಿಂದ ಸಾಮೂಹಿಕವಾಗಿ ಸತ್ಯ ನಾರಾಯಣ ಪೂಜೆ
yadgiri, ಶಹಾಪುರಃ ಧರ್ಮಸ್ಥಳ ಸಂಸ್ಥೆ ಕೆಲಸ ಮಾಡದ ಕ್ಷೇತ್ರಗಳಿಲ್ಲ ಆಡು ಮುಟ್ಟದ ತಪ್ಪಲ್ಲವಿಲ್ಲ ಎಂಬಂತ ಪ್ರಸ್ತುತ ಧರ್ಮಸ್ಥಳ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಯಶಸ್ವಿಯಾಗಿ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದೆ ಎಂದು ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಮಹಾಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಫಕೀರೇಶ್ವರ ಮಠದ ಸಭಾಂಗಣದಲ್ಲಿ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಬಿ.ಸಿ. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ ಪೂಜೆ ಹಾಗೂ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪುರಾಣದಲ್ಲಿ ತಿಳಿಸಿರುವಂತೆ ಸತ್ಯ ನಾರಾಯಣ ಪೂಜೆ ಕೈಗೊಂಡ ಭಕ್ತರ ಇಷ್ಟಾರ್ಥವನ್ನು ಶ್ರೀಮನ್ನಾರಾಯಣ ಅನುಗ್ರಹಿಸಲಿದ್ದಾನೆ. ಇದು ಸತ್ಯ ಕೂಡ. ಸಾಕಷ್ಟು ಭಕ್ತರ ವೃಂದ ಇದರಿಂದ ಸಂತುಷ್ಟತೆಯನ್ನು ಕಂಡುಕೊಂಡಿದ್ದಾರೆ.
ಧಾರ್ಮಿಕತೆ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ಅಲ್ಲದೆ ಮನಸ್ಸಿನಲ್ಲಿ ಹುಟ್ಟುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು.
ಬಾಲ್ಯದಿಂದಲೇ ಮಕ್ಕಳು ಧಾರ್ಮಿಕ ಕಾರ್ಯ, ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಿದಲ್ಲಿ ಬದುಕಿನಲ್ಲಿ ಅವರಿಗೆ ಎದುರಾಗವು ಕಷ್ಟ ಸಂಕಷ್ಟಗಳನ್ನು ಎದುರಿಸುವ ಶಕ್ತಿ ಮೈಗೂಡಿಸಿಕೊಳ್ಳಲಿದ್ದಾರೆ. ಧರ್ಮಸ್ಥಳ ಸಂಸ್ಥೆ ಸಮಾಜದ ಉನ್ನತೀಕರಣಕ್ಕೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ನಾಗರಿಕರ ಉತ್ತಮ ಜೀವನಕ್ಕೆ ಬೇಕಾದ ಅಡಿಪಾಯವನ್ನು ಸಂಸ್ಥೆ ಹಾಕುವಲ್ಲಿ ನಿರಂತರ ಶ್ರಮವಜಹಿಸುತ್ತಿರುವದು ನಮ್ಮ ನಾಡಿನ ಪುಣ್ಯ. ನಾಡಿನಾದ್ಯಂತ ನಾಗರಿಕರ ವಿಕಾಸಕ್ಕಾಗಿ ಅವರು ಬದುಕಿನ ಸುಂದರತೆಗಾಗಿ ಬೇಕಾದ ಮೂಲ ಸೌಲಭ್ಯ ಕಲ್ಪಿಸುವದು ಸೇರಿದಂತೆ ಪ್ರತಿಯೊಬ್ಬರು ಸುಂದರ ಬದುಕು ಕಟ್ಟಿಕೊಳ್ಳಲು ಸ್ವಾವಲಂಬಿಯಾಗಿ ಬದುಕಲು ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದು ಎಂದರು.
ಸಂಸ್ಥೆಯ ಜಿಲ್ಲಾ ಯೋಜನಾ ನಿರ್ದೇಶಕ ಕಮಲಾಕ್ಷ ಮತ್ತು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಮಾತನಾಡಿದರು.ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಎಎಸ್‍ಐ ಮರೆಪ್ಪ ಅಕ್ಕಿ, ಶಂಕರ ಗುತ್ತರಗಿ, ತಾಲೂಕು ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್, ಮೇಲ್ವಿಚಾರಕ ಶ್ರೀಕಾಂತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂರಾರು ಜೋಡಿಗಳು ಸಾಮೂಹಿಕವಾಗಿ ಸತ್ಯ ನಾರಾಯಣ ಪೂಜೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.