ಕಥೆ

5 ಕೋಟಿ ಸಸಿ ನೆಟ್ಟವರಾರು.? 10 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ಕಲ್ಪಿಸಿದವರಾರು.?

10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಕಾರಣರಾದವರು.. 5 ಕೋಟಿ ಗಿಡಗಳನ್ನು ನೆಟ್ಟವರು ಯಾರು ಗೊತ್ತೆ.?

ನಮ್ಮ ರಾಜ್ಯದಲ್ಲಿ ಮಠಗಳು ಒಂದು ರೀತಿಯ ಶಿಕ್ಷಣ ಕ್ರಾಂತಿಯನ್ನೇ ಮಾಡುತ್ತಿವೆ.. ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಶಿಕ್ಷಣವನ್ನು ನೀಡುತ್ತಿವೆ.. ಅದರಲ್ಲೊಂದು ಆದಿಚುಂಚನಗಿರಿಯ ಸಂಸ್ಥಾನ.. ಇಲ್ಲಿದೆ ನೋಡಿ ಆ ಮಹಾನ್ ವ್ಯಕ್ತಿಯ ಚರಿತ್ರೆ..

ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟಿದ್ದು ಜನವರಿ 18 1945 ರಂದು.. ಬಾನಂದೂರಿನ ಚಿಕ್ಕ ಲಿಂಗೇಗೌಡ, ಹಾಗೂ ಮೋಟಮ್ಮ ನವರ ೬ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಗಾಧರಯ್ಯನವರಿಗೆ, ಮೂರು ಜನ ಸೋದರಿಯರು, ಮತ್ತು ೨ ಜನ ಸಹೋದರರು ಇದ್ದಾರೆ.

ಆದಿ ಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು.

ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಯವರ ಮಠದ ವ್ಯಾಪ್ತಿಯಲ್ಲಿ 1 ಮಿಲಿಯನ್ ಗಿಂತ ಹೆಚ್ಚಿನ ಸಂಖೆಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ.

ಒಕ್ಕಲಿಗ ಮಠದ ಅಧಿಪತಿಯಾದರೂ ಎಲ್ಲ ಮತಗಳ ಬಗ್ಗೆ ಅವರಿಗೆ ಅಪಾರ ಗೌರವ ಹಾಗೂ ಆದರವಿತ್ತು. ದಲಿತರ ಉದ್ಧಾರಕ್ಕಾಗಿ ಶಿಕ್ಷಣ ಒದಗಿಸಲೆಂದು ಶಿಕ್ಷಣ ಸಮೂಹವನ್ನೇ ನಿರ್ಮಿಸಿ ಒಂದು ಕ್ರಾಂತಿಯನ್ನು ಮಾಡಿದರು.

ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಬಡ ಜನರ ಸೇವೆಯನ್ನು ಮಾಡಿದರು.

ಹಸಿರು ಕ್ರಾಂತಿ ಹರಿಕಾರ ರೆಂದು ಹೆಸರುಗಳಿಸಿದ ಶ್ರೀಗಳು ೫ ಕೋಟಿಗಿಡಗಳನ್ನು ನೆಡುವ ಮೂಲಕ ಒಂದು ಹೊಸ ವಿಕ್ರಮವನ್ನು ಸ್ಥಾಪಿಸಿದ್ದಾರೆ. ರಮಾನಾಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದರು. ಬಿ.ಎಸ್ ಸಿ. ಪದವೀಧರರು. ೭೧ ನೇ ಪೀಠಾಧ್ಯಕ್ಷರಾಗಿ ೩೯ ವರ್ಷಗಳ ಕಾಲ ನಡೆಸಿರುವ ಕಾರ್ಯ ಅಪಾರ.
ಇವರಿಗೆ ನಮ್ಮ ನಮನ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button