ಕಥೆ

ಹಣ ಸಂಗ್ರಹ ಸರಿಯಲ್ಲ, ಸಕಾಲದಲ್ಲಿ ಹಣ ಉಪಯೋಗಿಸಿ

ತ್ಯಾಗದಲ್ಲೇ ಸುಖ

ಒಂದು ಭವ್ಯ ನಗರ, ಹೊರವಲಯದಲ್ಲಿನ ಪಾಳು ದೇಗುಲ. ಅಲ್ಲಿ ಒಬ್ಬ ಸಾಧು. ದೇವರಲ್ಲಿ ಅಚಲ ನಂಬಿಕೆ ಅವರಿಗೆ ಸದಾ ಹಿತೋಪದೇಶ ಮಾಡುತ್ತಿದ್ದ. ಜನರೆಲ್ಲ ಬಂದು ವಂದಿಸಿ ಪಾದ ಕಾಣಿಕೆ ಹಾಕುತ್ತಿದ್ದರು.

ಹೀಗೆ ಒಂದು ತಿಂಗಳಾಯಿತು. ಬೇರೆ ಊರಿನತ್ತ ಹೋಗಲು ನಿರ್ಧರಿಸಿದ. ಆಗ ಶಿಷ್ಯರು ಒಪ್ಪಲಿಲ್ಲ. ಈ ನಗರದ ಜನರು ಬಹಳ ಉದಾರಿಗಳು. ಕೈ ತುಂಬ ಹಣ ಕೊಡುತ್ತಿದ್ದಾರೆ. ಇನ್ನು ಸ್ವಲ್ಪ ದಿನ ಇಲ್ಲೇ ಉಳಿದರೆ ದೊಡ್ಡ ಮೊತ್ತದ ಹಣವನ್ನೇ ಸಂಗ್ರಹಿಸಬಹುದು’ ಎಂದು ಒತ್ತಾಯಿಸಿದರು.

ಆಗ ಸಾಧು “ಸಂಗ್ರಹ ಯಾವಾಗಲೂ ಒಳ್ಳೆಯದಲ್ಲ. ಹಣ ಸಂಗ್ರಹದಿಂದ ಶಾಂತಿ ನೆಮ್ಮದಿ ಖಂಡಿತ ಹಾಳಾಗುತ್ತದೆ” ಎಂಬ ಸಾಧುವಿನ ಮಾತಿಗೆ ಹೂಂಗುಟ್ಟಿದರು.

ಅವನ ಮಾತಿಗೆ ಎಲ್ಲರೂ ಒಮ್ಮೆ ಬೇರೆ ಊರಿಗೆ ಪಯಣ ಹೊರಟರು. ಮಾರ್ಗದ ಮಧ್ಯೆ ನದಿ ಇತ್ತು. ದೋಣಿಗೆ ಹಣ ಕೊಡಬೇಕಿತ್ತು. ಶಿಷ್ಯನು ಹಣ ಕೊಡಲು ಸುತಾರಾಂ ಒಪ್ಪಲಿಲ್ಲ. ಕತ್ತಲಾಗುತ್ತ ಬಂದಿತು. ಸಾಧು ಶಿಷ್ಯನಿಗೆ ಸ್ವರ ಏರಿಸಿ ಹಣ ಕೊಡುವಂತೆ ಗದರಿಸಿದ.

ನಾವಿಕ ನದಿ ದಾಟಿಸಿದ. ಆಗಲೇ ಆ ಶಿಷ್ಯ ರೇಗುತ್ತಲೇ ಸಾಧುವಿನತ್ತ “ನೋಡಿ ಮಹಾರಾಜ್, ಹಣದ ಮಹಿಮೆ! ಹಣವನ್ನು ಕೂಡಿಡುವುದು ಸರಿಯಲ್ಲ ಎಂದು ಹೇಳಿದಿರಿ. ಆದರೆ ಈಗ ಹಣದಿಂದಷ್ಟೇ ಪರಿಹಾರ ಒದಗಿದ್ದು, ಅರ್ಥವಾಯಿತಲ್ಲವೇ?” ಎಂದು ತಾನೇ ಗೆದ್ದಂತೆ ನಟಿಸಿದ.

ತಕ್ಷಣವೇ ಸಾಧು ಹೇಳಿದರು “ನಿನ್ನ ಆಲೋಚನೆ ಶುದ್ಧ ತಪ್ಪು ಹಣವನ್ನು ಸಂಗ್ರಹಿಸಿಟ್ಟುಕೊಂಡುದರಿಂದ ಈಗ ಸುಖ ಸಿಕ್ಕಲೇ ಇಲ್ಲ. ಹಣವನ್ನು ಸಕಾಲದಲ್ಲೇ ಖರ್ಚು ಮಾಡಿದ್ದರಿಂದಲೇ ಸುಖ ಸಿಕ್ಕಿದ್ದು ತಾನೇ? ಸುಖ ಎಂಬುದು ತ್ಯಾಗದಲ್ಲಷ್ಟೇ ಇರುವುದು. ಈ ಸತ್ಯ ಬೇಗ ಮನ ಮುಟ್ಟಲಿ” ಆಗಲೇ ಶಿಷ್ಯರಿಗೆಲ್ಲ ಜ್ಞಾನೋದಯವಾಯಿತು.

ನೀತಿ :– ಹಣದಿಂದಾಗಿ ಮನೋಚಾಂಚಲ್ಯ ಹೆಚ್ಚುತ್ತದೆ. ಇದೊಂದು ಮನೋದಾರ್ಡ್ಯತೆ ಕಾಯ್ದಿಕೊಳ್ಳುವ ಬಗೆ. ಹೊಂದಿ ಬಾಳಿದಾಗ ಯಶಸ್ಸು ಖಂಡಿತ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button