ತಂದೆಯ ಅಂತಿಮ ಸಂದೇಶದಲ್ಲಿ ಅಡಗಿತ್ತು ಅಪಾರ ಸಂಪತ್ತು

ದಿನಕ್ಕೊಂದು ಕಥೆ
ಅಂತಿಮ ಸಂದೇಶ
ಮುತ್ತಯ್ಯ ಶ್ರೀಮಂತ ವ್ಯಾಪಾರಿ, ಐವರು ಪುತ್ರಿಯರಾದ ಮೇಲೆ ಒಬ್ಬ ಪುತ್ರ ಅವರಿಗೆ ಮುತ್ತಯ್ಯ ವೃದ್ಧರಾದಂತೆ ಮಗನನ್ನು ಹತ್ತಿರ ಕರೆದು ‘ನಾನು ಒಂದೊಮ್ಮೆ ನಿಧನನಾದರೂ ನಿನ್ನ ಭವಿಷ್ಯ ಭವ್ಯವಾಗಲು ಒಂದು ಚೀಟಿಯಲ್ಲಿ ದಾರಿ ಬರೆದಿಡುವೆ. ಅದನ್ನು ಓದಿ ಪರಿಪಾಲಿಸಿ ಮೇಲೇರು’ ಎಂದನು.
ಮುತ್ತಯ್ಯ ಒಂದೇ ವಾರದಲ್ಲಿ ತೀರಿ ಹೋದ. ಆತ ಕೊಟ್ಟ ಕಾಗದಲ್ಲಿ ಕೆಲವು ವಾಕ್ಯಗಳಿದ್ದವು. ಆದರೆ ಮಗನಿಗೆ ವಿಶೇಷ ಆರ್ಥವೇನೂ ಕಂಡು ಬರಲಿಲ್ಲ. ಮತ್ತೊಂದು ವರ್ಷದಲ್ಲಿ ಮದುವೆಯಾಗಿ ಸಂಸಾರವೂ, ವ್ಯವಹಾರವೂ ವರ್ಧಿಸಿತು.
ಆದರೆ ನಷ್ಟದ ಮೇಲೆ ನಷ್ಟ ಉಂಟಾಗಿ ಬದುಕು ದುರ್ಭರವೇ ಆಯಿತು. ಸಾಲಗಾರರ ಪೀಡೆ ಹೆಚ್ಚಿತು. ಆಗ ತಂದೆ ಕೊಟ್ಟ ಚೀಟಿಯ ಬಗ್ಗೆ ನೆನಪಾಗಿ ನೋಡಿದಾಗ “ಒಂದಡಿಯಲ್ಲಿ ನಿನ್ನನ್ನು ನೋಡು; ಎರಡಡಿಗಳಲ್ಲಿ ನನ್ನನ್ನು ನೋಡು; ಮೂರಡಿಗಳಲ್ಲಿ ಮುಕ್ಕಣ್ಣನ ನೋಡು; ನಾಲ್ಕಡಿಗಳಲ್ಲಿ ಚತುರ್ಮುಖನ ನೋಡು. ಬಾಗಿ ಭೂಮಾತೆಯನ್ನು ಅಂಜಲಿಯಲ್ಲಿ ತೆಗೆದುಕೊಂಡು ಸುಖವಾಗಿರು” ಎಂದೆಲ್ಲ ಇತ್ತು.
ತಲೆ ಬಿಸಿಯಾಗಿ ಮಗನು ಮನೆ ತುಂಬ ಓಡಾಡಿದನು. ತಂದೆಯ ರೂಮಿಗೆ ಬಂದು ಚೆನ್ನಾಗಿ ಪರೀಕ್ಷಿಸಿದನು. ಅಡಿಕೋಲನ್ನು ತಂದು ಅಳೆದಾಗ ಒಂದಡಿಯಲ್ಲಿ ಗೋಡೆಯೂ ಅಲ್ಲಿಂದ ಎರಡಡಿಯಲ್ಲಿ ಮುತ್ತಯ್ಯನದೆ ಭಾವಚಿತ್ರವೂ, ಮಂಚದಿಂದ ಮೂರಡಿಗಳಲ್ಲಿ ಶಿವದೇವರ ವಿಗ್ರಹವೂ, ಅಲ್ಲಿಂದ ನಾಲ್ಕಡಿಗಳಲ್ಲಿ ಬ್ರಹ್ಮನ ಚಿತ್ರವೂ ಇತ್ತು. ಅಲ್ಲಿಯೇ ಕೆಳಗೆ ಬಾಗಿ ಭೂಮಿಯನ್ನು ಅಗೆದು ನೋಡುವೆ ಎಂದು ಚುರುಕಾದ.
ನಿಜ, ಬೆಳ್ಳಿ, ಚಿನ್ನದ ನಾಣ್ಯಗಳು ತುಂಬಿದ ದೊಡ್ಡ ಪಾತ್ರೆಯೇ ಅಲ್ಲಿತ್ತು. ಆ ಸಂಪತ್ತಿನಿಂದ ಮನಃ ವ್ಯಾಪಾರ ಆರಂಭಿಸಿದ. ಜಾಣ್ಮೆಯಿಂದ ವ್ಯವಹರಿಸಿ ಬೇಗ ಇನ್ನಷ್ಟು ಸಂಪತ್ತಿನ ಒಡೆಯನೂ ಆದ.
ನೀತಿ :– ತಂದೆಯ ಮಾತಿನಂತೆ ಮಕ್ಕಳು ಕರ್ತವ್ಯಪರಿಪಾಲಿಸಿದರೆ ಭವ್ಯ, ದಿವ್ಯ ಜೀವನ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.