“ಹಣೆಬರಹ” ಅದ್ಭುತ ಕಥೆ ಓದಿ
ಹಣೆಬರಹ
ಒಂದು ಸಾರಿ ರಂಗಯ್ಯ ಎಂಬುವನು ತನ್ನ ಜಾತಕವನ್ನು ತೋರಿಸಿ ತನ್ನ ಕಣ್ಣುಗಳು ತನ್ನ ಕೈಯಾರೆ ಹೋಗುತ್ತವೆ ಎಂದು ತಿಳಿದುಕೊಂಡು ಅಲ್ಲಿಂದಾಚೆಗೆ ಬಹಳ ಜಾಗೂರಕನಾಗಿ ಇರತೊಡಗಿದನು.
ಕಟ್ಟಿಗೆ ಕಡಿಯಲು ಹೋದರೆ, ಮುಳ್ಳೋ, ಸಿಬುರೋ ಏನಾದರೂ ತಗುಲೀತು ಎಂದು ಹೆದರಿ ಕಟ್ಟಿಗೆ ತರಲು ಹೋಗುತ್ತಿರಲಿಲ್ಲ. ಆ ಊರಿನ ಬಹಳ ಮಂದಿ ಹತ್ತಿರದ ಬೆಟ್ಟದಲ್ಲಿ ಕಲ್ಲು ಹೊಡೆದು ಜೀವಿಸುತ್ತಿದ್ದರು ಇವನು ಮಾತ್ರ ಆ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಹುಲ್ಲು ಕುಯಿದು ಮಾರಿ ಜೀವಿಸುತ್ತಿದ್ದನು. ಒಂದು ದಿನ ದಟ್ಟವಾಗಿ ಹುಲ್ಲು ಬೆಳೆದ ಜಾಗದಲ್ಲಿ ಹುಲ್ಲು ಕುಯ್ಯುತ್ತಿರುವಾಗ ಎಡಗೈ ಹೆಬ್ಬೆರಳನ್ನು ಹಾವು ಕಚ್ಚಿತು. ತಕ್ಷಣ ರಂಗಯ್ಯನು ವಿಷಯವೇರಿತೆಂದು ಹೆಬ್ಬೆರಳನ್ನು ಕತ್ತರಿಸಿಕೊಂಡನು.
ಒಂದು ವಾರದ ನಂತರ ಪುನಃ ಅದೇ ಜಾಗದಲ್ಲಿ ಹುಲ್ಲು ಕುಯ್ಯಲು ಬಂದಾಗ ತಾನು ಕತ್ತರಿಸಿ ಎಸೆದಿದ್ದ ತನ್ನ ಹೆಬ್ಬೆರಳು ಅಲ್ಲಿಯೇ ಕಂಡಿತು. ಕುತೂಹಲದಿಂದ ಅದನ್ನು ಎತ್ತಿಕೊಂಡನು. ಅದು ಹಸಿರು ನೀಲಿ ದ್ರವದಿಂದ ತುಂಬಿ ಉಬ್ಬಿಕೊಂಡಿತ್ತು.
ಅದನ್ನು ತೆಗೆದುಕೊಂಡು ಹಿಸುಕಿ ನೋಡಿದನು ಆ ದ್ರವವು ಹಿಸುಕಿದೊಡನೆ ಝಲ್ಲೆಂದು ಹಾರಿ ಅವನ ಕಣ್ಣುಗಳಿಗೆ ಬಿತ್ತು ಕ್ಷಣಕಾಲ ವಿಲವಿಲನೆ ಒದ್ದಾಡಿ ಕಣ್ಣುಗಳನ್ನು ಉಜ್ಜಿಕೊಂಡನು. ಆ ದ್ರವದ ಪ್ರಭಾವದಿಂದ ಕಣ್ಣುಗಳು ಹಿಂಗಿಹೋದವು ಎಷ್ಟು ಎಚ್ಚರ ವಹಿಸಿದರೂ ತಾನೆ ಏನು? ಹಣೆ ಬರಹದಿಂದ ಪಾರಾಗಲಾರೆವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.