ಏಸುಕ್ರಿಸ್ತನಾಗಬೇಕಾದರೆ ಏನು ಮಾಡಬೇಕು.? ಕಪಾಳಕ್ಕೆ ಹೊಡೆದ ಜೋಸೆಫ್ ಏನ್ ಹೇಳಿದ

ಏಸುಕ್ರಿಸ್ತನಾಗಬೇಕಾದರೆ ಏನು ಮಾಡಬೇಕು.?
ಹೆರಿಕ್ ಎಂಬ ರಾಜನಿಗೆ ಒಂದು ದಿನ ವಿಚಿತ್ರವಾದ ಆಲೋಚನೆ ಹುಟ್ಟಿತು. ಅವನು ತನ್ನ ಸಮಸ್ಯೆಯನ್ನು ಸಭೆಯ ಮುಂದೆ ಇಟ್ಟನು. ನಾನು ಏಸುಕ್ರಿಸ್ತನಂತೆ ಆಗಬೇಕಾದರೆ ಏನು ಮಾಡಬೇಕು. ನೀವು ಕೊಡುವ ಉತ್ತರ ನನಗೆ ಹಿಡಿಸದಿದ್ದರೆ ಹತ್ತು ಚಡಿ ಏಟು ತಿನ್ನಬೇಕು ಎಂದು ಹೇಳಿ ತನ್ನ ಬಳಿಯೇ ಇದ್ದ ಮಂತ್ರಿಗೆ ಮೊದಲು ಉತ್ತರ ಹೇಳೆಂದು ಆದೇಶವಿತ್ತನು.
ಮಂತ್ರಿಯು ಪ್ರಭು ಏಸು ಸ್ವಾಮಿಯು ಭಗವಂತನ ಮಗ. ಅಂತಹವನಾಗಲು ಮನುಷ್ಯರಿಗೆ ಸಾಧ್ಯವಿಲ್ಲ ಎಂದನು. ಮಂತ್ರಿಗೆ ಹತ್ತು ಚಡಿ ಏಟು ಶಿಕ್ಷೆಯಾಯಿತು.
ಆಗ ರಾಜನ ಅರಮನೆಯ ಪುರೋಹಿತರಲ್ಲಿ ಒಬ್ಬನಾದ ಜೋಸೆಫ್ ಎಂಬಾತ ಸಭೆಗೆ ಬಂದು ಪರಿಸ್ಥಿತಿಯನ್ನರಿತು ರಾಜನಿಗೆ ಹೋಗಿ ನಿನ್ನ ಪ್ರಶ್ನೆಯೇನು? ಎಂದು ಕೇಳಿದನು. ರಾಜನು ತನ್ನ ಪ್ರಶ್ನೆಯನ್ನು ಹೇಳಿದನು. ಕೂಡಲೆ ಜೋಸೆಫ್ ಗುರುವು ಹೆರಿಕ್ ರಾಜನ ಒಂದು ಕೆನ್ನೆಗೆ ಹೊಡೆದನು. ರಾಜನು ಉಗ್ರವಾಗಿ ಈ ರಾಜ ದ್ರೋಹಿಯನ್ನು ಶೂಲಕ್ಕೇರಿಸಿ ಎಂದು ಆಜ್ಞೆಯಿತ್ತನು.
ಆಗ ಜೋಸೆಫ್‌ನು ಜೋರಾಗಿ ನಗುತ್ತಾ ಮಹಾರಾಜ, ಮೊದಲು ನೀನು ಕೋಪ ಬಿಡಬೇಕು. ಕೋಪವು ಮನುಷ್ಯನನ್ನು ಹೀನ ಸ್ಥಿತಿಗೆ ಎಳೆಯುತ್ತದೆ. ಕೋಪಕ್ಕೆ ಬದಲಾಗಿ, ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಪ್ರೀತಿಯು ಅವನನ್ನು ಉನ್ನತ ಮಟ್ಟಕ್ಕೇರಿಸುತ್ತದೆ.
ಏಸು ಸ್ವಾಮಿಯ ಮುಖ್ಯ ಸೂಕ್ತಿ ಏನೆಂದರೆ ನಿನ್ನ ಒಂದು ಕೆನ್ನೆಗೆ ಹೊಡೆದವನಿಗೆ ಇನ್ನೊಂದು ಕೆನ್ನೆಯನ್ನೂ ಕೊಡು ಎಂದು. ಅದಷ್ಟನ್ನು ನಡೆಸಲಾಗದ ತಾವು ಏಸು ಸ್ವಾಮಿಯಾಗಲು ಸಾಧ್ಯವೆ ಎಂದು ಕೇಳಿದನು. ರಾಜನು ಆ ಮಾತಿಗೆ ತಲೆದೂಗಿ ಜೋಸೆಫ್‌ನನ್ನು ಕ್ಷಮೆಯಾಚಿಸಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.