
ದಿನಕ್ಕೊಂದು ಕಥೆ
ನಕಾರಾತ್ಮಕ ಮಾತಿಗೆ ಕಿವುಡಾಗಿ
ಕಪ್ಪೆಗಳ ಗುಂಪೊಂದು ಕಾಡಿನಲ್ಲಿ ಪಯಣ ಹೊರಟಿತ್ತು. ನಡೆಯುವಾಗ ಎರಡು ಕಪ್ಪೆಗಳು ಜಾರಿ ಹೊಂಡದಲ್ಲಿ ಬಿದ್ದವು. ಅವೆರಡೂ ಮೇಲೆ ಹಾರುವ ಪ್ರಯತ್ನದಲ್ಲಿ ತೊಡಗಿದವು.
ಮೇಲಿನಿಂದ ನೋಡಿದ ಕಪ್ಪೆಗಳೆಲ್ಲ ಹೊಂಡ ಬಹಳ ದೊಡ್ಡದಿದ್ದು, ನೀವು ಮೇಲೆ ಬರಲಾಗುವುದಿಲ್ಲ, ಸಾಯುವುದು ಖಚಿತ ಎಂದು ಪದೇ ಪದೇ ಹೇಳುತ್ತಿದ್ದವು. ಇವುಗಳ ಮಾತು ಕೇಳಿದ ಒಂದು ಕಪ್ಪೆ ತನ್ನ ಪ್ರಯತ್ನ ನಿಲ್ಲಿಸಿ, ಹೊಂಡದೊಳಗೇ ಸಾವಿಗೆ ಶರಣಾಯಿತು. ಇನ್ನೊಂದು ಕಪ್ಪೆ ಮಾತ್ರ ಪ್ರಯತ್ನ ಬಿಡದೆ ಹಾರುತ್ತಲೇ ಇತ್ತು.
ಕೊನೆಗೊಂದು ಬಾರಿ ಮೇಲೆ ಜಿಗಿಯುವಲ್ಲಿ ಸಫಲವಾಯಿತು. ಉಳಿದ ಕಪ್ಪೆಗಳೆಲ್ಲ ಕೇಳಿದವು. ನಾವೆಲ್ಲ ಹೇಳಿದ್ದು ನಿನಗೆ ಕೇಳಲಿಲ್ಲವೇ ? ಅದಕ್ಕೆ ಕಪ್ಪೆ ಎಂದಿತು. ಇಲ್ಲ ನನಗೆ ಅಷ್ಟಾಗಿ ಕಿವಿ ಕೇಳಿಸುವುದಿಲ್ಲ, ನೀವೆಲ್ಲ ಕೈ, ಬಾಯಿ ಆಡಿಸುತ್ತಿದ್ದುದರಿಂದಾಗಿ ನನ್ನನ್ನು ಹುರಿದುಂಬಿಸುತ್ತಿದ್ದೀರೆಂಬುದು ತಿಳಿಯಿತು. ಅದೇ ಮೇಲೆ ಬರಲು ಸ್ಫೂರ್ತಿ ನೀಡಿತು ಎಂದಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882