
ಕಾಲ ಕೂಡಬೇಕು
ಯುವಕನೊಬ್ಬ ಅಸಾಮಾನ್ಯ ಗುರುವೊಬ್ಬರ ಗುಲಾಮನಾಗುವ ನಿರೀಕ್ಷೆಯಲ್ಲಿದ್ದ. ಅದೇ ಸಮಯದಲ್ಲಿ ಆತನಲ್ಲಿಗೆ ಬಂದ ಮಧ್ಯವಯಸ್ಕನ ಬಳಿ ಕೇಳಿದ. ನೀವು ಇಷ್ಟೆಲ್ಲ ಪ್ರಪಂಚ ಸುತ್ತಿದ್ದೀರೆಂದು ತಿಳಿಯಿತು. ನನಗೆ ಎಲ್ಲವನ್ನೂ ಬಲ್ಲ ಗುರು ಬೇಕು ಎಲ್ಲಿಯಾದರೂ ಕಂಡಿರುವಿರಾ.?
ಮಧ್ಯವಯಸ್ಕ ಆತನಿಗೆ ಒಂದಿಷ್ಟು ವಿಳಾಸಗಳನ್ನು ನೀಡಿ ಕಳುಹಿಸಿದ. ಯುವಕ ದೇಶ ದೇಶಗಳ ದಾಟಿ ಹೋದ. ಎಲ್ಲಿ ಹೋದರೂ ಆತನ ನಿರೀಕ್ಷೆಯಂಥ ದೊಡ್ಡ ಗುರು ಆತನಿಗೆ ಸಿಗಲಿಲ್ಲ. ಹೀಗೆ ಗುರುವಿನ ಅನ್ವೇಷಣೆಯಲ್ಲಿ ತಿರುಗುತ್ತಾ ತಿರುಗುತ್ತಾ 30 ವರ್ಷಗಳ ನಂತರ ತನ್ನೂರಿಗೆ ಹಿಂದಿರುಗಿದ.
ಮರದ ಕೆಳಗೆ ಕುಳಿತ ಮುದುಕನನ್ನು ನೋಡಿದಾಗ, ಈತನೇ ನಿಜವಾದ ಗುರು ಎಂದು ಜ್ಞಾನೋದಯವಾಯಿತು. ಆತ 30 ವರ್ಷಗಳ ಹಿಂದ ಬಂದ ಅಲೆಮಾರಿಯೇ ಆಗಿದ್ದ. ಮೊದಲೇ ಏಕೆ ಹೇಳಲಿಲ್ಲ ಎಂದು ಯುವಕ ಕೇಳಿದ ಎಲ್ಲದಕ್ಕೂ ಸಮಯವೆಂಬುದಿದೆ. ಮೊದಲು ನಿನ್ನಲ್ಲಿ ಗುರುತಿಸುವಷ್ಟು ಅನುಭವವಿರಲಿಲ್ಲ ಎಂದ ಗುರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.