ಯಾವ ಮಹಾತ್ಮರ ಹಸ್ತದಲ್ಲಿ ಯಾವ ಶಕ್ತಿ ಇದೆ ತಿಳಿಯದು..!
ಒಮ್ಮೆ ಉಡುಪಿಯಲ್ಲಿ ನಿತ್ಯಾನಂದರು ಭಕ್ತರಿಗೆ ತೆಂಗಿನ ಕಾಯಿಯನ್ನು ನೀಡುತ್ತಿದ್ದರು. ಬಹಳಷ್ಟು ಭಕ್ತರು ಗುರುದೇವರ ಕರಗಳಿಂದ ಕಲ್ಪವೃಕ್ಷದ ಫಲ ಪ್ರಸಾದ ಪಡೆಯಲು ಶ್ರದ್ಧೆಯಿಂದ ನಿಂತಿದ್ದರು. ಒಬ್ಬೊಬ್ಬರಾಗಿ ಬಂದು ಗುರುದೇವರಿಂದ ತೆಂಗಿನ ಕಾಯಿಯನ್ನು ಸ್ವೀಕರಿಸಿದರು.
ವಿವಾಹಿತ ಸ್ತ್ರೀಯರು ಸಾಲಿನಲ್ಲಿದ್ದ ಮಹಿಳೆಯೊರ್ವಳು ತನ್ನ ಉಚ್ಚ ಜಾತಿ ಪ್ರತಿಷ್ಠೆ ಬಗ್ಗೆ ಚಿಂತಿಸಿದಳು. ಯಾವ ಜಾತಿಯೆಂದು ತಿಳಿಯದ ನಿತ್ಯಾನಂದರಿಂದ, ನಾನು ಪ್ರಸಾದ ಸ್ವೀಕರಿಸುವುದು ಸರಿಯೇ..! ಎನ್ನುವ ಕೀಳು ಭಾವನೆ ಅವಳ ಮನದೊಳಗೆ ಸುಳಿದಾಡಿತು.
ಮೇಲು ಕೀಳು ಎಂಬ ಜಾತಿ ಪಿಡುಗು ಇದ್ದ ಕಾಲವದು. ಸ್ವಾಮೀಜಿಯವರು ಅವಳಿಗೆ ಪ್ರಸಾದ ನೀಡಲೆಂದು ಕೈಯಲ್ಲಿ ತೆಂಗಿನ ಕಾಯಿ ಹಿಡಿದು ಕಾದರು. ಆದರೆ ಮಹಿಳೆ ಪ್ರಸಾದ ಸ್ವೀಕರಿಸದೆ ಹಿಂದೆ ಸರಿದಳು. ಗುರುದೇವರಿಗೆ ಮಹಿಳೆಯ ಅಂತರ್ಯದಲ್ಲಿ ಹುದುಗಿರುವ ಕಲ್ಮಶ ಭಾವನೆ ಅರ್ಥವಾಯಿತು. ತಕ್ಷಣ ತನ್ನ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ಅವರು ಎಸೆದು ಬಿಟ್ಟರು.
ಅವಳ ಬದುಕಿನಲ್ಲಿ ವಿಧಿ ಕಠೋರವಾಗಿ ವರ್ತಿಸಲಿದೆ. ಏಂದೋ.. ಏನೋ..! ವಿಷಾದದಿಂದ ಗುರುದೇವರು ಹಾಗೆ ಮಾಡಿದರೋ ಏನೋ..? ಕೆಲವು ತಿಂಗಳುಗಳಲ್ಲಿ ಸಣ್ಣ ಪ್ರಾಯದ ಮುತ್ತೈದೆ ವಿಧವೆಯಾಗುತ್ತಾಳೆ. ನಂತರದ ದಿನಗಳಲ್ಲಿ ಮಹಿಳೆಗೆ ತನ್ನ ತಪ್ಪಿನ ಅರಿವಾಗುತ್ತದೆ.
ನಾನು ನಿತ್ಯಾನಂದರಲ್ಲಿ ನಂಬಿಕೆ ಶ್ರದ್ಧೆ ಇಟ್ಟುಕೊಂಡು, ಅವರು ಕಲ್ಪವೃಕ್ಷ ಫಲದ ಪ್ರಸಾದ, ಸದ್ಗುರುವಿನ ಪ್ರಸಾದ ಎಂದು ಸ್ವೀಕರಿಸಬೇಕಿತ್ತು. ತನಗೆ ಸಣ್ಣ ಪ್ರಾಯದಲ್ಲಿ ಎದುರಾಗಿರುವ ವಿಧಾವ ವಿಧಿಯಿಂದ ಪಾರಾಗಬಹುದಿತ್ತೋ ಏನೋ..! ಎಂದು ಕೊರಗುವಂತಳಾಗುತ್ತಾಳೆ.
ನೀತಿ :– ಮಹಾತ್ಮು ಕೊಡುವ ಪ್ರಸಾದ ತಿರಸ್ಕರಿಸಬಾರದು. ಅದು ಕಲ್ಪವೃಕ್ಷ, ಕಾಮಧೇನುವಾಗಿ ಮುಂದೆ ಬರುವ ತೊಂದರೆಗಳಿಂದ ಪಾರಾಗಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.