ದಿನಕ್ಕೊಂದು ಕಥೆ
ಗುರುವಿಗೂ ದೇವರಿಗೂ ಪ್ರಿಯವಾದುದೇ ಸಹಜ ಭಕ್ತಿ
ನರಸಿಂಹ ಮೆಹತಾರವರು ದೊಡ್ಡ ಸಂತರಾಗಿದ್ದರು. ಅವರು ಬಾಲಕರಾಗಿದ್ದಾಗ ಒಂದು ಘಟನೆ ನಡೆಯಿತು. ಆಗ ಅವರು ಅಣ್ಣನ ಬಳಿ ಇರುತ್ತಿದ್ದರು. ಮನೆಯಲ್ಲಿ ಅತ್ತಿಗೆ ಬಾಲಕನಿಗೆ ವಿಪರೀತ ಕೆಲಸ ಕೊಡುತ್ತಿದ್ದಳು. ಹಗಲು ರಾತ್ರಿ ಮಾಡಿದರೂ ಕೆಲಸ ಮುಗಿಯುತ್ತಿರಲಿಲ್ಲ. ಬಾಲಕ ಏನೇ ಮಾಡಿದರೂ ಅತ್ತಿಗೆಗೆ ಸರಿ ಬರುತ್ತಿರಲಿಲ್ಲ. ಬಾಲಕನಿಗೆ ಸದಾ ಬೈಯ್ಯುತ್ತಿದ್ದಳು.
ಒಂದು ದಿನ ಬಾಲಕನು ರಾತ್ರಿ ಹತ್ತು ಗಂಟೆಯವರೆಗೆ ಮನೆಗೆಲಸ ಮಾಡಿ ಮಲಗಿದನು. ವಿಪರೀತ ದಣಿದ ದೇಹಕ್ಕೆ ನಿದ್ರೆ ಬರಲಿಲ್ಲ. ಮನದಲ್ಲಿಯೇ ದೇವನಿಗೆ ಪ್ರಾರ್ಥಿಸಿದನು, ದೇವಾ, ಹೇಗಾದರೂ ಮಾಡಿ, ನನ್ನ ಕಷ್ಟವನ್ನು ಕಳೆದು ಕಾಪಾಡು. ಮುಗ್ಧ ಬಾಲಕನ ಭಕ್ತಿಗೆ ದೇವನು ಪ್ರತ್ಯಕ್ಷನಾದನು. ಬಾಲಕನಿಗೆ ಅತ್ಯಂತ ಸಂತೋಷವಾಯಿತು.
ದೇವನು “ಬಾಲಕನೆ, ನಿನ್ನ ನಿಃಸ್ವಾರ್ಥ ದುಡಿಮೆಗೆ ಮೆಚ್ಚಿದ್ದೇನೆ ನಿನಗೆ ಇನ್ನೇನು ವರ ಬೇಕು ಬೇಡು, ಕೊಡುತ್ತೇನೆ !”ಎಂದು ಕೇಳಿದ. ಬಾಲಕ “ದೇವಾ ನಿನಗೆ ಏನು ಪ್ರಿಯವೋ ಅದನ್ನೇ ಕರುಣಿಸು. ಎಂದ. ದೇವ ”ನನಗೆ ಭಕ್ತಿಯೊಂದೇ ಪ್ರಿಯವಾದುದು, ಮಗು” ಎಂದ. ಬಾಲಕ “ಆಗಲಿ, ಅದನ್ನೇ ಕರುಣಿಸು ತಂದೆ.” ಎಂದ.
ಬಾಲಕನ ಶ್ರದ್ಧೆಗೆ ಮೆಚ್ಚಿದ ದೇವರು ಸಹಜ ಪ್ರೇಮರೂಪ ಭಕ್ತಿಯನ್ನೇ ಆತನಿಗೆ ಕರುಣಿಸಿದ. ಮುಂದೆ ಅದೇ ಬಾಲಕ ಬೆಳೆದು ಪ್ರೇಮದ ಸಂತನಾಗಿದ್ದ. ಹೀಗೆ ಗುರುವಿಗೂ ದೇವರಿಗೂ ಪ್ರಿಯವಾದುದೇ ಸಹಜ ಭಕ್ತಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.