ಕಥೆ

ಓದು (ವಿದ್ಯೆ) ಎಲ್ಲವನ್ನೂ ಕಲಿಸುವುದಿಲ್ಲ.!

ಟಿ.ಎನ್.ಶೇಷನ್ ಅವರ ಅನುಭವದ ಕಥೆ ಓದಿ

ದಿನಕ್ಕೊಂದು ಕಥೆ

ಓದು (ವಿದ್ಯೆ) ಎಲ್ಲವನ್ನೂ ಕಲಿಸುವುದಿಲ್ಲ.!

ಟಿ.ಎನ್ ಶೇಷನ್ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಒಮ್ಮೆ ಪತ್ನಿಯೊಂದಿಗೆ ವಿಹಾರಕ್ಕೆಂದು ಹೋಗುತ್ತಿದ್ದರು. ಮಾರ್ಗಮಧ್ಯದಲ್ಲಿ ರಸ್ತೆ ಬದಿಯಲ್ಲಿದ್ದ ತೋಟವೊಂದರಲ್ಲಿ ಹಕ್ಕಿಗಳ ಗೂಡುಗಳಿoದ ತುಂಬಿದ ದೊಡ್ಡ ಮಾವಿನ ಮರವನ್ನು ನೋಡಿದರು.

ಅವನ್ನು ನೋಡಿ ಮನಸೋತ ಶೇಷನ್ ಪತ್ನಿ ಒಂದೆರಡು ಗೂಡುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂದುಕೊಳ್ಳುತ್ತಾರೆ. ಸಮೀಪದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಒಬ್ಬ ಯುವಕನನ್ನು ತಮ್ಮೊಡನೆ ಬಂದಿದ್ದ ಪೊಲೀಸ್ ಎಸ್‌ಕಾರ್ಟ್‌ನವರಿಂದ ಕರೆಸಿ ಆ ಗೂಡನ್ನು ಕೊಟ್ಟರೆ, 10 ರೂ. ಕೊಡುವೆವೆಂದು ಹೇಳಿದರು. ಅದಕ್ಕೆ ಅವನು ಒಪ್ಪದಿದ್ದಾಗ, ದರ ಹೆಚ್ಚಿಸಿ 50 ರೂಪಾಯಿ ಕೊಡುವೆನೆಂದರು ಶೇಷನ್. ಜೊತೆಗೆ ಇದ್ದ ಪೊಲೀಸರು ಕೂಡ ಆ ಗೂಡುಗಳನ್ನು ಕೊಡುವಂತೆ ಆದೇಶಿಸಿದರು.

ಆದರೂ ಹೆದರದ ಬೆದರದ ಆ ಯುವಕ ರೂ.50 ಅಲ್ಲ ನೀವು ಎಷ್ಟೇ ಕೊಟ್ಟರೂ ಆ ಗೂಡುಗಳನ್ನು ನಿಮಗೆ ನೀಡಲಾರೆ ಎಂದ. “ನೀವು ಕೊಡುವ ದುಡ್ಡಿನ ಆಸೆಗೆ ಆ ಗೂಡುಗಳನ್ನು ತೆಗೆದುಕೊಟ್ಟರೆ ಆ ಗೂಡುಗಳಲ್ಲಿರುವ ಪುಟ್ಟ ಹಕ್ಕಿ ಮರಿಗಳಿಗೆ ತೊಂದರೆಯಾಗುವುದಿಲ್ಲವೇ? ಅಲ್ಲದೆ ಆ ತಾಯಿ ಹಕ್ಕಿ ಸಂಜೆ ವಾಪಸು ಬಂದಾಗ ತನ್ನ ಮರಿಗಳನ್ನು ಕಾಣದೆ ಅದೆಷ್ಟು ತೊಳಲಬಹುದಲ್ಲವೇ?” ಎಂದ. ಇದನ್ನು ಕೇಳಿದ ಶೇಷನ್ ದಂಪತಿಗಳು ಶಾಕ್ ಆದರು.

ನನ್ನ ಸ್ಥಾನ, ನನ್ನ ಹುದ್ದೆ, ನನ್ನ ಓದು, ನನ್ನ service, ನನ್ನ ಐ.ಎ.ಎಸ್., ಎಲ್ಲವೂ ಕೂಡ ಆ ಯುವಕನ ಆ ಪುಟ್ಟ ಜೀವಿಗಳ ಬಗೆಗಿನ ಕಾಳಜಿಯ ಎದುರು ನನ್ನದು ಏನು ಅಲ್ಲ ಎನಿಸಿತು. ಮನೆಗೆ ಮರಳಿ ಬಂದ ನಂತರ ಬಹಳ ದಿನಗಳವರೆಗೂ ಈ ಘಟನೆಯ ಕುರಿತಾಗಿ ತಮ್ಮಲ್ಲಿ ಅಪರಾಧೀಭಾವ ಕಾಡುತ್ತಲೇ ಇತ್ತು.

ಮಾನವತ್ವದ ಎದುರು ಯಾವುದು ಸಮವಾಗಲಾರದು. ಮ್ಯಾನೇಜ್‌ಮೆಂಟ್ ಸೆಮಿನಾರ್‌ನಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಟಿ.ಎನ್ ಶೇಷನ್ ಹೇಳಿದ ಒಂದು ದೊಡ್ಡ ಅನುಭವದ ಮಾತು ಇದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button