ಹೀಗೊಂದು ಪ್ರಸಂಗ ಇದನ್ನೋದಿ
ದಿನಕ್ಕೊಂದು ಕಥೆ
ಅತ್ತೆಯೊಬ್ಬಳಿಗೆ ತನ್ನ ಅಳಿಯಂದಿರಿಗೆ ತನ್ನ ಮೇಲಿರುವ ಪ್ರೀತಿ ಎಷ್ಟು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು.
ಕೂಡಲೇ ಆಕೆ ಮನೆಯ ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು.
ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು ಓಡಿ ಬಂದರು.
ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ.
ಹಿರಿಹಿರಿ ಹಿಗ್ಗಿದ ಅತ್ತೆಮ್ಮ ಅವನಿಗೆ ತನ್ನ ಕಾರ್ ಕೊಟ್ಟುಬಿಟ್ಟಳು.
ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್ ಕೊಟ್ಟಳು.
ಮೂರನೆಯ ಅಳಿಯನನ್ನು ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು.ಮೂ ರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು ಅಂದುಕೊಂಡ: ‘ಇನ್ನೇನು ಮನೆಯಲ್ಲಿ ಹಳೆಯ ಸೈಕಲ್ ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್‌ಗಾಗಿ ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. ಅತ್ತೆ ಸತ್ತೇಹೋದಳು.
ಆದರೂ ಮರುದಿನ ಈ ಮೂರನೇ ಅಳಿಯನಿಗೆ ಮರ್ಸಿಡಿಸ್ ಕಾರು ಸಿಕ್ಕಿತು. ಹೇಗೆ ಗೊತ್ತಾ?
ಮಾವ ತಂದು ಕೊಟ್ಟ!!!
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882