ಕಡ ತಂದಿದ್ದ ಒಡವೆ ಮಾಯ, ವಾಪಸ್ ಕೊಡಿಸಲು ಸಾಲ ಮುಂದೇನಾಯ್ತು ಓದಿ
ದಿನಕ್ಕೊಂದು ಕಥೆ
ಕಾಸಿನ ಸರದಿಂದಾದ ಅನುಕೂಲ ಹಾಗೂ ಅನಾನುಕೂಲ
ಗೋಪಾಲ ಸಂತೃಪ್ತ ಜೀವನ ನಡೆಸುತ್ತಿದ್ದ. ಅವನಾಕೆ ಸರಸುಗೆ ಒಡವೆಗಳೆಂದರೆ ಪಂಚಪ್ರಾಣ. ಗಂಡನ ಸಂಪಾದನೆಯಲ್ಲಿ ಆಕೆಗೆ ಒಡವೆಗಳನ್ನು ಮಾಡಿಸಲು ಸಾಧ್ಯವಾಗಿರಲಿಲ್ಲ. ಒಮ್ಮೆ ಹತ್ತಿರದ ನೆಂಟರ ಮನೆಯ ಮದುವೆಗೆ ಆಕೆಗೆ ಹೋಗಲೇಬೇಕಾಯಿತು.
ನೆರಮನೆಯ ಕಾವೇರಮ್ಮನ ಬಳಿ ಹೋಗಿ ಕಾಸಿನ ಸರವನ್ನು ಎರವಲು ತಂದಳು. ಆಕೆಯೋ ಸಂತೋಷದಿಂದಲೇ ಕಾಸಿನಸರ ಕೊಟ್ಟು “ನಿಧಾನವಾಗಿ ಕೊಡಿ ಪರವಾಗಿಲ್ಲ. ನನ್ನ ಬಳಿ ಹೇರಳ ಒಡವೆಗಳಿವೆ” ಎಂದೂ ಒತ್ತಿ ಒತ್ತಿ ಹೇಳಿದಳು.
ಸರಸು ಆ ಸರ ಹಾಕಿಕೊಂಡು ಮದುವೆ ಮನೆಯಲ್ಲಿ ಓಡಾಡಿದ್ದೇ ಓಡಾಡಿದ್ದು. ಎಲ್ಲರೂ ಅವಳ ಸಂಭ್ರಮ ಕಂಡು ಹಿಗ್ಗಿದವರೇ, ಆದರೆ ಮದುವೆಯಾಗಿ ಮನೆಗೆ ಬಂದು ಕುತ್ತಿಗೆಯಿಂದ ಕಾಸಿನ ಸರ ತೆಗೆಯಬೇಕೆಂದಾಗ ಅಲ್ಲಿ ಸರವೇ ಇರಲಿಲ್ಲ. ಸರಸು ಗಾಬರಿಯಿಂದ ಸಾಕಷ್ಟು ಹುಡುಕಾಡಿದಳು, ಗೋಳೋ ಎಂದು ಅಳತೊಡಗಿದಳು.
ಮರುದಿನ ಗೋಪಾಲನು ಆಫೀಸಿನಿಂದ ಬರುವಾಗ ಸಾಲಮಾಡಿಕೊಂಡು ಬಂದನು. ಗಂಡ ಹೆಂಡತಿ ಇಬ್ಬರೂ ಚಿನ್ನದಂಗಡಿಗೆ ಹೋಗಿ ಅದೇ ರೀತಿಯ ಕಾಸಿನ ಸರವನ್ನು ಖರೀದಿಸಿಯೇ ಕಾವೇರಮ್ಮನಿಗೆ ಕೊಟ್ಟು ಬಂದರು.
ಸಾಲ ಜಾಸ್ತಿಯಾದುದರಿಂದ ಇವರಿಬ್ಬರೂ ಬಹಳ ಕಷ್ಟಪಟ್ಟರು. ಊಟ ತಿಂಡಿ ಬಿಟ್ಟರು. ಇಬ್ಬರೂ ತೆಳ್ಳಗಾಗುತ್ತ ಬಂದರು. ಇವರಿಬ್ಬರೂ ಸೊರಗಿದ್ದನ್ನು ಕಂಡು ಒಂದು ದಿನ ಕಾವೇರಮ್ಮನಿಗೋ ವ್ಯಥೆಯುಂಟಾಯಿತು. ಯಾಕೆ? ಮೈಲಿಯಲ್ಲಿ ಹುಷಾರಿಲ್ಲವೇ? ಎಂದು ಪದೇ ಪದೇ ಇಬ್ಬರನ್ನೂ ಕೆಣಕಲಾರಂಭಿಸಿದರು.
ಆಗ ಸರಸು ಅಳುತ್ತಾ ತಾನು ಸರ ಕಳಕೊಂಡ ಬಗ್ಗೆ ತಿಳಿಸಿ, ಅದಕ್ಕಾಗಿ ಸಾಲಮಾಡಿ ಹೊಸ ಸರ ತಂದು ಕೊಟ್ಟುದನ್ನು ತಿಳಿಸಿ ಆನಾಹುತದ ವಿವರಣೆ ಕೊಡುತ್ತಲೇ ಇದ್ದಳು, ತಕ್ಷಣವೇ ಕಾವೇರಮ್ಮ ಹೇಳಿದರು. “ಎಂಥ ಕೆಲಸ ಮಾಡಿಬಿಟ್ಟಿರಿ.
ನಾನು ನಿಮಗೆ ಕೊಟ್ಟಿದ್ದು ನಕಲೀ ಹಾರ. ಅಂಥವು ನನ್ನ ಬಳಿ ಬೇಕಾದಷ್ಟಿವೆ, ಹೋಗಲಿಬಿಡಿ, ನೀವಿಬ್ಬರೂ ಕಷ್ಟಪಟ್ಟಿದ್ದರಿಂದ ನಿಮಗೇ ಉಳಿತಾಯವಾಯಿತು. ಒಂದು ತಾಜಾ ಕಾಸಿನ ಸರವೇ ನಿಮ್ಮದಾಯಿತು” ಎಂದು ಹೇಳಿ ಒಳಗಿನಿಂದ ಕಾಸಿನ ಸರ ತಂದು ಕೊಟ್ಟೇ ಬಿಟ್ಟರು.
ನೀತಿ :– ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಚಿನ್ನದ ಮೇಲಿನ ಆಸೆಯಿಂದ ಕಷ್ಟ ಪಡಬೇಕಾಗುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.