ಕಥೆ

ಶ್ರೀಕೃಷ್ಣನ ತಲೆನೋವಿಗೆ ಭಕ್ತರ ಪಾದಧೂಳಿ ಏನಿದು ರಹಸ್ಯ ಓದಿ

ದಿನಕ್ಕೊಂದು ಕಥೆ

ತಲೆನೋವಿನ ರಹಸ್ಯ

ಶ್ರೀಕೃಷ್ಣನೊಮ್ಮೆ ನಿಜವಾದ ಭಕ್ತಿಯ ರಹಸ್ಯವನ್ನು ಬಯಲು ಮಾಡಿದನು. ಇದ್ದಕ್ಕಿದ್ದಂತೆ ಅವನಿಗೆ ಅಸಹನೀಯ ತಲೆನೋವೆಂದು ಚಡಪಡಿಸಲಾರಂಭಿಸಿದನು.

ಆತನ ಪತ್ನಿಯರು ಹಾಗೂ ನಾರದರು ತಕ್ಷಣ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿ ಔಷಧೋಪಚಾರವೂ ನಡೆಯಿತು. ಅಸಾಧ್ಯ ತಲೆನೋವು ಏರುತ್ತಲೇ ಹೋಯಿತು. ಆಗ ನಾರದರೇ ಶ್ರೀ ಕೃಷ್ಣನ ಬಳಿ ಏನೆಲ್ಲ ಮಾಡಿದರೆ ಈ ತಲೆನೋವು ವಾಸಿಯಾದೀತೆಂದು ಕೇಳುತ್ತಾನೆ.

ಆಗ ದೊರೆತ ಉತ್ತರವಿದು – “ನನ್ನ ಭಕ್ತರ ಪಾದಧೂಳಿಯನ್ನು ನನ್ನ ಹಣೆಗೆ ಹಚ್ಚಿದೊಡನೆ ನನ್ನ ತಲೆನೋವು ವಾಸಿಯಾಗುತ್ತೆ” ಯಾರಾದರೂ ಬೇಗ ತಯಾರಾಗಿ. ಇದನ್ನು ಕೇಳಿ ಎಲ್ಲರೂ ಭಯಭೀತರಾದರು.

ಏಕೆಂದರೆ ಭಕ್ತರು ಭಗವಂತನ ಪಾದಧೂಳಿಯನ್ನು ಶಿರದಲ್ಲಿ ಧರಿಸಿದರೆ ಪಾವನರಾಗುತ್ತಾರೆ. ಆದರೆ ಭಗವಂತನೇ ಭಕ್ತರ ಪಾದಧೂಳಿಯನ್ನು ಧರಿಸಿದಾಗ ಆ ಭಕ್ತರು ಘೋರ ನರಕಕ್ಕೆ ಹೋಗುತ್ತಾರೆಂಬ ಪ್ರತೀತಿ ಇದೆ. ನಾರದರೂ ಸೇರಿದಂತೆ ಎಲ್ಲರೂ ಇದರಿಂದ ವಿಮುಖರಾದರು. ಆಗ ಶ್ರೀ ಕೃಷ್ಣನೇ ಹೇಳಿದ – “ನೀವು ವೃಂದಾವನದ ಗೋಪಿಯರ ಬಳಿಯೂ ವಿಚಾರಿಸಿ ನೋಡಿ, ನಾರದರು ಓಡಿದರು, ಮನಬಿಚ್ಚಿ ಎಲ್ಲ ಯಾತನೆಯ ವಿವರಣೆ ಮಾಡಿದರು.

ತಕ್ಷಣ ಗೋಪಿಯರೆಂದರು ಅಷ್ಟೇ ತಾನೇ, ನಮ್ಮಲ್ಲಿ ನಿಜವಾದ ಭಕ್ತರಾರು ಎಂದು ಗುರುತಿಸಲು ಸಮಯವಿಲ್ಲ. ಆದರೆ ನಮಗೆ ಒಂದೇ ಒಂದು ದಾರಿ ಉಳಿದಿದೆ ಎನ್ನುತ್ತಲೇ ಉತ್ತರೀಯವೊಂದನ್ನು ತೆಗೆದು ನೆಲದ ಮೇಲೆ ಹಾಸಿ, ಅದರ ಮೇಲೆ ಎಲ್ಲ ಗೋಪಿಯರೂ ತಮ್ಮ ಪಾದವನ್ನಿಟ್ಟರು, ಅದನ್ನೇ ಮಡಚಿ ತಂದು ನಾರದರ ಬಳಿ ನೀಡಿ“ ತಕ್ಷಣವೇ ಭಗವಂತನಿಗೆ ಇದನ್ನು ಕೊಂಡೊಯ್ದಿರಿ. ಇದು ನಮ್ಮೆಲ್ಲರ ಪಾದಧೂಳಿಯಿಂದ ತುಂಬಿದೆ. ಖಂಡಿತವಾಗಿಯೂ ಅವರ ನೋವು ಇದರಿಂದ ವಾಸಿಯಾಗುತ್ತೆ. ಈಗ ಎಂದರು .

ನಾರದರೆಂದರು ನೀವೇನು ಮಾಡಿರುವಿರೆಂಬುದು ಗೊತ್ತೇ ನಿಮಗೆ ? ನಿಮಗಿದರಿಂದಾಗಿ ಪಾಪ ಬರುತ್ತೆ ಘೋರ | ನರಕಕ್ಕೇ ನೀವು ಹೋಗಬೇಕಾಗುತ್ತದೆ …. ಜೋಕೆ ! ಎಂಬುದಾಗಿ, ಅದಕ್ಕೆ ಗೋಪಿಯರೆಂದರು ನಾವು ನರಕಕ್ಕೆ ಹೋಗುವುದು ಮುಖ್ಯವಲ್ಲ. ನಮ್ಮ ನೆಚ್ಚಿನ ಕೃಷ್ಣ ತಲೆನೋವಿನಿಂದ ಪಾರಾದರೆ ಅದೇ ನಮಗೆ ದೊಡ್ಡ ಹಬ್ಬ ….’

ನಾರದರು ಓಡೋಡಿ ಬಂದು ಶ್ರೀ ಕೃಷ್ಣನಿಗೆ ಅದನ್ನು ನೀಡಿದರು. ಆಗ ಎಲ್ಲರಿಗೂ ಗೋಪಿಯರ ಶ್ರೇಷ್ಠವಾದ ಭಕ್ತಿಯ ಅರಿವಾಯಿತು.

ನೀತಿ :– ದೈವೇಚ್ಛೆಯ ಹಿರಿಮೆ, ದೈವಲೀಲೆ ಅರಿಯಲು ಭಕ್ತರಿಂದಲೇ ಸಾಧ್ಯ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button