ಚಿನ್ನದ ವರ ಪಡೆದ ಮೈದಾಸನ ಕಥೆ ಓದಿ
ಚಿನ್ನದ ವರ ಪಡೆದ ಮೈದಾಸನ ಕಥೆ ಓದಿ
ಮೈದಾಸನೆಂಬ ದೊರೆಗೆ ಚಿನ್ನವೆಂದರೆ ಪ್ರಾಣ. ಒಂದು ದಿನ ಆತ ಧ್ಯಾನಕ್ಕೆ ಕುಳಿತು ದೇವರನ್ನು ಕರೆದ. ತಕ್ಷಣ ದೇವರ ವಾಣಿ ಕೇಳಿದಂತಾಯಿತವನಿಗೆ.
“ನಿನ್ನಿಷ್ಟ ಏನು ಹೇಳು ಮೈದಾಸ ?” ಎಂಬುದಾಗಿ, ತಕ್ಷಣವೇ ಅವನೆಂದ ₹ನಾನು ಮುಟ್ಟಿದ್ದೆಲ್ಲವೂ ಬಂಗಾರವಾಗುವಂತಿದ್ದರೆ ಎಷ್ಟೊಂದು ಚೆನ್ನಾಗುತ್ತಿತ್ತು” ಎಂದು ಮೊರೆದ. ತಕ್ಷಣವೇ ದೇವರು “ನಾಳೆ ಬೆಳಗ್ಗಿನಿಂದ ನಿನ್ನ ಆಶ ಈಡೇರುತ್ತದೆ” ಎಂದೇ ವರದಾನ ಮಾಡಿದ. ಮೈದಾಸನಿಗೆ ಖುಷಿಯೋ ಖುಷಿ. ಆತ ರಾತ್ರಿಯನ್ನೆಲ್ಲ ನಿದ್ರೆಯಿಲ್ಲದೆ ಕಳೆದ. ಬೆಳಗಾಗುತ್ತಲೇ ಮೇಲೆದ್ದು ತನ್ನ ಮಂಚವನ್ನು ಮುಟ್ಟಿದ ತಕ್ಷಣವೇ ಅದು ಚಿನ್ನವಾಯಿತು.
ಉದ್ಯಾನದ ಗಿಡಮರಗಳನ್ನೆಲ್ಲ ಅಲುಗಿಸಿದ. ಅವೆಲ್ಲವೂ ಬಂಗಾರವಾದವು. ಅವನ ಮೈಮೇಲಿನ ಬಟ್ಟೆಗಳೆಲ್ಲ ಚಿನ್ನವಾಗಿ ಹೊರಲು ಭಾರವಾಯಿತು. ಊಟದ ಮನೆಗೆ ಬಂದು ಉಪಾಹಾರಕ್ಕೆಂದು ಕುಳಿತ, ತಿಂಡಿಯನ್ನೆತ್ತಿಕೊಂಡು ನೋಡುತ್ತಾನೆ ಅದೂ ಚಿನ್ನದ ಉಂಡೆಯಾಗಿದೆ. ಹಾಲನ್ನು ಕುಡಿಯಲು ಹೋದರೆ ಅದೂ ಬಂಗಾರವೇ ! ಈಗ ಆತ ಕಂಗಾಲಾದ, ಅಳಲು ಆರಂಭಿಸಿದ.
ಅಳುವನ್ನು ಕೇಳಿ ಅವನ ಮುದ್ದು ಮಗಳು ಓಡಿ ಬಂದು. ಅಪ್ಪಾ, ಎಂದು ತಬ್ಬಿದಳು. ತಕ್ಷಣವೇ ಮಗುವೂ ಚಿನ್ನದ ಪ್ರತಿಮೆಯಾಯಿತು. ಆಗ ಮೈದಾಸ ಗೋಳೋ ಎಂದು ಬೊಬ್ಬೆ ಇಟ್ಟ. ಆಗ ತಾನು ಧ್ಯಾನಿಸಲು ಕುಳಿತು ಪುನಃ ದೇವರಲ್ಲಿ ಅಂಗಲಾಚಿ ಬೇಡಿದ, ಆ ವರವನ್ನು ಹಿಂತೆಗೆದುಕೊಳ್ಳಿ ದೇವಾ. ಹೊಟ್ಟೆಗೆ ತಿನ್ನಲಾಗದ ಬಂಗಾರ ಇದ್ದೇನು ಪ್ರಯೋಜನ ?
ದ … ಮ್ಮ …. ಯ್ಯಾ .. ‘ ಎಂದು ಹೊರಳಾಡಿದ. ತಕ್ಷಣವೇ ದೇವರ ವಾಣಿ ಕೇಳಿತು – “ದೇವರ ಪೂಜೆಯ ತೀರ್ಥವನ್ನು ಸೇವಿಸಿ. ಒಂದು ಸಾಷ್ಟಾಂಗ ಹಾಕಿ ತಪ್ಪಾದ ಬಗ್ಗೆ ಕ್ಷಮೆ ಕೇಳು. ಎಲ್ಲವೂ ಮೊದಲಿನ ರೂಪ ತಳೆಯುತ್ತವೆ” ಎಂಬುದಾಗಿ. ಮೈದಾಸ ನಲಿವಿನಿಂದಲೇ ಚುರುಕಾದ. ನೆಮ್ಮದಿಯಿಂದ ಹೊಸಬಾಳ್ವೆಗೆ ಮುಂದಾದ. ನೀತಿ :– ದೇವರು ಸಿಕ್ಕಿದರೆ ನೀವು ಯಾವ ವರ ಕೇಳುವಿರಿ ? ಜಗತ್ತಿನಲ್ಲಿರುವ ಅತ್ಯಮೂಲ್ಯ ಆಭರಣ ಅನ್ನ ಚಿನ್ನವಲ್ಲ.
🖊️ಸಂಗ್ರಹ🖋️ ಡಾ.ಈಶ್ವರಾನಂದ ಸ್ವಾಮೀಜಿ. 📞 – 9341137882.