ಯಾರ ಮೇಲೆ ನಂಬಿಕೆ ಇದನ್ನೋದಿ
ಯಾರ ಮೇಲೆ ನಂಬಿಕೆ
ನೆರೆಮನೆಯವನು ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಾಗ, ಮುಲ್ಲಾ ಅವನನ್ನು ಭೇಟಿ ಮಾಡಿ ಏನು ಸಮಾಚಾರವೆಂದು ವಿಚಾರಿಸಿದನು.
ನೆರೆಮನೆಯವನು “ಮುಲ್ಲಾ ಇವತ್ತು ನಿಮ್ಮ ಕತ್ತೆಯನ್ನು ನನಗೆ ನೀಡಬಹುದೇ, ನಾನು ಕೆಲವು ವಸ್ತುಗಳನ್ನು ಬೇರೆ ನಗರಕ್ಕೆ ಸಾಗಿಸಬೇಕಾಗಿದೆ” ಎಂದು ಕೇಳಿದಾಗ ಮುಲ್ಲಾ ತನ್ನ ಕತ್ತೆಯನ್ನು ಅವನಿಗೆ ಕೊಡಲು ಬಯಸಲಿಲ್ಲ. ನನ್ನನ್ನು “ಕ್ಷಮಿಸಿ, ನಾನು ಇಂದು ಬೆಳಿಗ್ಗೆ ನನ್ನ ಕತ್ತೆಯನ್ನು ಕೆಲವರಿಗೆ ಕೊಟ್ಟಿದ್ದೇನೆ” ಎಂದು ಮುಲ್ಲಾ ಸುಳ್ಳು ಹೇಳಿದನು.
ಮುಲ್ಲಾ ತನ್ನ ಮಾತುಗಳನ್ನು ಇನ್ನು ಮುಗಿಸಿರಲಿಲ್ಲ ಅಷ್ಟರಲ್ಲಿ ಒಳಗಿನಿಂದ ಡೆಂಚು-ಡೆಂಚು ಎಂದು ಕತ್ತೆಯ ಧ್ವನಿ ಬರಲಾರಂಭಿಸಿತು. ಆಗ ನೆರೆಮನೆಯವನು “ಆದರೆ ಮುಲ್ಲಾ, ಕತ್ತೆಯು ಒಳಗೆ ಕಿರುಚುತ್ತಿದೆ.” ಆಶ್ಚರ್ಯದಿಂದ ಕೇಳಿದನು.
ಮುಲ್ಲಾ ಗಾಬರಿಯಿಲ್ಲದೆ, “ನೀನು ಯಾರನ್ನು ನಂಬುತ್ತಿ?”, “ಕತ್ತೆಗೋ ಅಥವಾ ನಿನ್ನ ಮುಲ್ಲಾಗೋ?” ನೆರೆಹೊರೆಮನೆಯವನು ಸದ್ದಿಲ್ಲದೆ ಹಿಂದಕ್ಕೆ ಹೋದನು.
ನೀತಿ :– ಸತ್ಯ ಮರೆ ಮಾಡಲು ಹೂಡಿದ ಉಪಾಯ. ಸುಳ್ಳು ಸತ್ಯದ ತಲೆಯ ಮೇಲೆ ಹೊಡೆದಂತಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.