ಕಥೆ

ಹಿರಿಯರ ಮಾತು ಕೇಳಬೇಕೆನ್ನುವದು ಯಾತಕೆ.? ಇದನ್ನೋದಿ

ಬುದ್ಧಿವಂತ ಹಂಸ

ಒಂದು ವಿಶಾಲವಾದ ಮರದ ಮೇಲೆ ಸಾವಿರಾರು ಹಂಸ ಪಕ್ಷಿಗಳಿರುತ್ತಿದ್ದವು. ಅದರಲ್ಲಿ ಒಂದು ಬುದ್ಧಿಮಾನ ಮತ್ತು ದೂರದರ್ಶಿ ಹಂಸವಿತ್ತು.

ಅದಕ್ಕೆ ಎಲ್ಲರೂ ಅದರದಿಂದ ’ತಾಊ’ ಎಂದು ಕರೆಯುತ್ತಿದ್ದರು. ಮರದ ಕೊಂಬೆಗೆ ಬಡ್ಡಿಯಿಂದ ಹತ್ತಿರುವ ಬಳ್ಳಿಯನ್ನು ನೋಡಿ ತಾಊ ಹೇಳಿತು “ಈ ಬಳ್ಳಿಯನ್ನು ಕಿತ್ತು ಹಾಕಿರಿ, ಇಲ್ಲವಾದರೆ ಮುಂದೆ ಒಂದು ದಿನ ನಮಗೇ ಕಷ್ಟವಾಗುವುದು”. ಆಗ ಅಲ್ಲಿರುವ ಯುವಹಂಸವೊಂದು ನಗುತ್ತಾ ಹೇಳಿತು “ಇಷ್ಟುಚಿಕ್ಕದಾದ ಬಳ್ಳಿಯು ನಮಗೆ ಹೇಗೆ ಕಷ್ಟದಾಯಕವಾಗುವುದು?”

ಆಗ ತಾಊ ತಿಳಿಸಿಹೇಳಿತು “ಮೆಲ್ಲ-ಮೆಲ್ಲನೆ ಈ ಬಳ್ಳಿಯು ಕೊಂಬೆಗೆ ಹತ್ತಿಕೊಂಡು ಒಂದು ದೊಡ್ಡರೂಪ ಧಾರಣ ಮಾಡಿ ಕೆಳಗಿನಿಂದ ಮೇಲಿನತನಕ ಮರದ ಮೇಲೆ ಏರಲು ಸಹಾಯಕಯಾಗುವುದು ಆಗ ನಮ್ಮ ಮೇಲೆ ಕಣ್ಣಿಟ್ಟಿರುವವರು ಸಹಜವಾಗಿ ನಮ್ಮನ್ನು ಕೊಲ್ಲಬಹುದು”. ಒಂದುಸಣ್ಣ ಬಳ್ಳಿ ಹೀಗೆ ಮೆಟ್ಟಿಲಿನಂತೆ ಆಗಬಹುದೆಂದು ಯಾರೂ ವಿಶ್ವಾಸಮಾಡಲಿಲ್ಲ.

ಸ್ವಲ್ಪ ಸಮಯ ಕಳೆದ ನಂತರ ತಾಊ ಹೇಳಿದ ಹಾಗೆ ನಡೆಯಲಾರಂಭಿಸಿತು. ಒಂದು ದಿನ ಎಲ್ಲ ಹಂಸಪಕ್ಷಿಗಳು ದನ-ಧಾನ್ಯ ತೆಗೆದುಕೊಂಡು ಬರಲು ಹೊರಗೆ ಹೋದಾಗ ಅಲ್ಲಿಗೆ ಒಬ್ಬ ಬೇಡನು ಬಂದನು.

ಮರದ ಮೇಲೆ ಲತೆಯಂತೆ ಇರುವ ಮೆಟ್ಟಿಲಿನಿಂದ ಮರದ ಮೇಲೆ ಏರಿ ಪಕ್ಷಿಗಳಿಗಾಗಿ ಬಲೆಯನ್ನು ಹಾಕಿ ಹೊರಟು ಹೋದನು. ಸಯಾಂಕಾಲ ಹಂಸಪಕ್ಷಿಗಳು ಮರದ ಮೇಲೆ ಬಂದು ಕೂರುತ್ತಿದ್ದಂತೆಯೇ ಬಲೆಯಲ್ಲಿ ಬಿದ್ದವು. ಆಗ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಯಿತು.

ಆಗ ಒಂದು ಹಂಸ ಪಕ್ಷಿಯು ತಾಊಗೆ “ನಮ್ಮಿಂದ ತಪ್ಪಾಯಿತು ನಮ್ಮನ್ನು ಕ್ಷಮಿಸು, ನಮ್ಮೆಲ್ಲರನ್ನು ಸಂಕಟದಿಂದ ದೂರ ಮಾಡಲು ಏನಾದರೂ ಉಪಾಯ ಹೇಳು”, ಎಂದಿತು. ಎಲ್ಲರೂ ತಮ್ಮ ತಪ್ಪನ್ನು ಸ್ವೀಕಾರ ಮಾಡಿದ ಮೇಲೆ ತಾಊ ಅವರಿಗೆ ಹೀಗೆ ಹೇಳಿತು “ನನ್ನ ಮಾತನ್ನು ಲಕ್ಷ್ಯಕೊಟ್ಟು ಕೇಳಿ.

ಮುಂಜಾನೆ ಬೇಟೆಗಾರನು ಬಂದಾಗ ನವೆಲ್ಲರೂ ಸತ್ತಂತೆ ನಟಿಸೋಣ ಆಗ ಬಲೆಗಾರನು ನಮ್ಮನ್ನು ಬಲೆಯಿಂದ ಹೊರತೆಗೆದು ನೆಲದ ಮೇಲೆ ಇಡುವನು, ಕೊನೆಯ ಹಂಸಪಕ್ಷಿ ಇಟ್ಟಾಗ ನಾನು ಸೀಟಿ ಊದುವೆನು ಆಗ ಎಲ್ಲರೂ ತಟ್ಟನೆ ಹಾರೋಣ ಎಂದಿತು.

ಮುಂಜಾನೆ ಆಗುತ್ತಲೆ ಬೇಟೆಗಾರನು ಬಂದು ಎಲ್ಲಾ ಪಕ್ಷಿಗಳು ಮೃತವಾಗಿದೆ ಎಂದು ತಿಳಿದು ಪಕ್ಷಿಗಳನ್ನು ಹೊರಗೆ ನೆಲದ ಮೇಲೆ ಇಟ್ಟನು. ಕೊನೆಯ ಪಕ್ಷಿಯನ್ನು ಇಟ್ಟಾಗ ತಾಊ ಸೀಟಿಯನ್ನು ಊದಿತು. ಎಲ್ಲ ಪಕ್ಷಿಗಳು ಒಮ್ಮೆಲೆ ಹಾರಿ ಹೋದವು. ಬೇಟೆಗಾರನು ಆಶ್ಚರ್ಯಚಕಿತನಾಗಿ ನೋಡುತ್ತ ನಿಂತನು.

ನೀತಿ :– ನಮ್ಮ ಹಿರಿಯರ ಮಾತನ್ನು ಗಾಂಭೀರ್ಯದಿಂದ ಪಾಲಿಸಬೇಕು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button