ಪ್ರಮುಖ ಸುದ್ದಿ
ಮತಾಂತರ ನಿಷೇಧ ಕಾಯ್ದೆ ಜಾರಿಗೆ ಡಿಕೆಶಿ ವಿರೋಧ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಡಿಕೆಶಿ ವಿರೋಧ
ಬ್ರಿಟಿಷ್, ಮೊಗಲ್ ರು ಆಳುವಾಗೇ ಮತಾಂತರ ನಡೆದಿಲ್ಲ – ಡಿಕೆಶಿ
ಬೆಳಗಾವಿಃ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವದು ಸರಿಯಲ್ಲ. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಸಿದ್ಧವಾದಂತಿದೆ ಇದನ್ನು ನಾವು ವಿರೋಧಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಮೊಗಲ್ ರಾಜರು, ಬ್ರಿಟಿಷರು ಆಳಿದಾಗಲೇ ಮತಾಂತರ ನಡೆದಿಲ್ಲ. ಇವಾಗೆಲ್ಲಿ ಬಲವಂತದ ಮತಾಂತರ ನಡೆಯುತ್ತವೆ ಎಂದು ಪ್ರಶ್ನಿಸಿದ ಅವರು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸುವದು ಸರಿಯಲ್ಲ ಎಂದರು.