ಪ್ರಮುಖ ಸುದ್ದಿ
ಪಾದಯಾತ್ರೆ ಮುಂದುವರೆಯಲಿದೆ ನಿಲ್ಲಲ್ಲ – ಡಿಕೆ ಸುರೇಶ

ಪಾದಯಾತ್ರೆ ಮುಂದುವರೆಯಲಿದೆ ನಿಲ್ಲಲ್ಲ – ಡಿಕೆ ಸುರೇಶ
ವಿವಿ ಡೆಸ್ಕ್ಃ ಪಾದಯಾತ್ರೆಗೆ ಸರ್ಕಾರವೇ ಅನುಮತಿ ನೀಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಸಂಸದ ಡಿ.ಕೆ.ಸುರೇಶ ಅಬ್ಬರಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೊಳಿಸಲಿ, ನಾವು ಸಾಮಾನ್ಯ ಜನರು ಸಾಮಾನ್ಯ ಜನರಿಗಾಗಿ ಜನರ ಹಕ್ಕಿಗಾಗಿ ನಾವು ಪಾದಯಾತ್ರೆ ಹೋರಾಟ ಆರಂಭಿಸಿದ್ದೇವೆ. ಮುಂದಿಟ್ಟ ಹೆಜ್ಜೆ ಹಿಂದೆ ಹಿಡಿಯಲು ಸಾಧ್ಯವಿಲ್ಲ. ನಮ್ಮ ಹೋರಾಟ, ಪಾದಯಾತ್ರೆಗೆ ಬೆಂಬಲ ದೊರೆಯುತ್ತಿರುವದರಿಂದ ಸರ್ಕಾರ ಪಾದಯಾತ್ರೆ ತಡೆಯಲು ಮುಂದಾಗುತ್ತಿದೆ. ಇದು ಸರಿಯಲ್ಲ.
ರಾತ್ರಿ 12 ಗಂಟೆಗೆ ಅಧಿಕಾರಿಗಳು ಪಾದಯಾತ್ರೆ ತಡೆಗೆ ನೋಟಿಸ್ ತಂದಿದ್ದರು.ಸರ್ಕಾರಕ್ಕೆ ಪ್ರತಿಷ್ಟೆ ಇದೆ. ಹಾಗಿದ್ರೆ ಮೇಕೆದಾಟು ಯೋಜನೆ ಜಾರಿಗೊಳಿಸಲಿ ಎಂದರು.
ಕೋವಿಡ್ ತೀವ್ರತೆ ಸಂದರ್ಭ ಪಾದಯಾತ್ರೆಯಂತ ಹೋರಾಟ ತಡೆಯದಿರುವ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ಛಾಟಿ ಬೀಸಿದ್ದು, ಸರ್ಕಾರ ಇದೀಗ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.