ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲು, ಸಾವಿನ ಸಂಖ್ಯೆ 10 ಕ್ಕೆ ಏರಿಕೆ
ದೋರನಹಳ್ಳಿ ದುರಂತಃ ಸಿಲಿಂಡರ್ ಸ್ಪೋಟಃ 10 ಸಾವು
ಗ್ಯಾಸ್ ಏಜೆನ್ಸಿ ಮಾಲಿಕರ ವಿರುದ್ಧ ಎಫ್.ಐ.ಆರ್ ದಾಖಲು, ಸಾವಿನ ಸಂಖ್ಯೆ 10 ಕ್ಕೆ ಏರಿಕೆ
ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಮನೆಯಲ್ಲಿ ಸಿಲಿಂಡರ್ ಅಡುಗೆ ಅನಿಲ ಸೋರಿಕೆಯಿಂದ ಅವಘಡ ಸಂಭವಿಸಿ 24 ಜನ ಗಾಯಗೊಂಡಿದ್ದು ಅದರಲ್ಲಿ ಬುಧವಾರ ಮತ್ತೆ ಐವರು ಕಲಬುರ್ಗಿಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ನೀಡದೆ ಮೃತಪಟ್ಟಿದ್ದಾರೆ.
ದೋರನಹಳ್ಳಿ ಗ್ರಾಮದ ಭೀಮರಾಯ (78), ವೀರಬಸಪ್ಪ(28), ಕಲ್ಲಪ್ಪ ಶರಣಪ್ಪ ಲಕ್ಕಶೆಟ್ಟಿ(50), ಚೆನ್ನವೀರ ಸಂಗಣ್ಣ ಮ್ಯಾಳಗಿ(30), ಚೆನ್ನಪ್ಪ ನರಸಪ್ಪ ಹಳ್ಳದ(50) ಮೃತಪಟ್ಟ ವ್ಯಕ್ತಿಗಳು. ಇದುವರೆಗೂ ಒಟ್ಟು 10 ಜನರು ಮೃತಪಟ್ಟಂತಾಗಿದೆ.
ಸಿಲಿಂಡರ್ ಅಡುಗೆ ಅನಿಲ ಸೋರಿಕೆಯಿಂದ ಮೃತಪಟ್ಟವರ ಸಂಖ್ಯೆ 10ಕ್ಕೆರಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಎಫ್.ಐ.ಆರ್. ದಾಖಲು:
ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಸಾಹೇಬಗೌಡ ಹಗರಟಗಿ ಮನೆಯಲ್ಲಿ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಪೋಟದಿಂದ ಶ್ಯಾಮಿನಿಗೆ ಬೆಂಕಿ ಹತ್ತಿದ್ದರಿಂದ 10 ಜನ ಮೃತಪಟ್ಟಿದ್ದು, 20-25 ಜನ ಗಾಯಾಳುಗಳು ಕಲಬುರ್ಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಇಲ್ಲಿಯವರೆಗೆ 10 ಜನ ಮೃತಪಟ್ಟಿದ್ದಾರೆ. ತನಿಖೆಯ ವಿಚಾರಣೆಯಿಂದ ಶಹಾಪುರ ವಿಜಯ ಗ್ಯಾಸ್ ಏಜೆನ್ಸಿ ಮಾಲೀಕ ಮತ್ತು ಇಂಡಿಯನ್ ಗ್ಯಾಸ ವಿತರಕರ ವಿರುದ್ಧ ಅಪರಾಧ ಕಲಂ 304(ಎ) ಅಪಘಾತ ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಎಸ್ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.