ಸರ್ಕಾರದಿಂದ ಬಂತು ರೈತರು ಸೇರಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್!
(Zero Interest Loan) ಶೂನ್ಯ ಬಡ್ಡಿ ದರದಲ್ಲಿ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಯಾವ ಯೋಜನೆಗಳಿಗೆ, ಎಷ್ಟು ಸಾಲ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಶೂನ್ಯ ಬಡ್ಡಿ ದರದಲ್ಲಿ ಆನೇಕಲ್ ತಾಲೂಕಿನ ಬಿಡಿಸಿಸಿ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ನೀಡಲಿದ್ದು, ಗೃಹ ನಿರ್ಮಾಣ, ವಾಹನ ಖರೀದಿಗೂ ಸಾಲ ನೀಡಲಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ನಿರ್ದೇಶಕ ವಿ.ಹೆಚ್. ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.
ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂನ್ಯ ಬಡ್ಡಿ ದರದಲ್ಲಿ ವಾರ್ಷಿಕ ಬೆಳೆಗಳಿಗೆ 5 ಲಕ್ಷ ರೂ., ಹೈನುಗಾರಿಕೆ ನಿರ್ವಹಣೆಗೆ 2 ಲಕ್ಷ ರೂ., ಮೀನುಗಾರಿಕೆಗೆ 3 ಲಕ್ಷ ರೂ, ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ಸಾಲ ನೀಡಲಾಗುವುದು.
ವಾರ್ಷಿಕ ಶೇಕಡ 3ರ ಬಡ್ಡಿ ದರದಲ್ಲಿ ನೇಕಾರಿಕೆಗೆ 5 ಲಕ್ಷ ರೂ., ಕೋಳಿ, ಕುರಿ, ಹಂದಿ ಸಾಕಾಣಿಕೆಗೆ 15 ಲಕ್ಷ ರೂ., ಹಸು ಸಾಕಾಣಿಕೆಗೆ 10 ಲಕ್ಷ ರೂ. ಸ್ಥಿರಾಸ್ತಿ ಭದ್ರತೆಯ ಮೇಲೆ ಒಒಡಿ ಸಾಲ, ಚಿನ್ನಾಭರಣ ಸಾಲ, ಕಟ್ಟಡ ನಿರ್ಮಾಣ, ಖರೀದಿಗೆ ಸಾಲ ಸೌಲಭ್ಯ ಇದೆ. ಅಲ್ಲದೆ, ರಸಗೊಬ್ಬರಗಳನ್ನು ವಿಎಸ್‌ಎಸ್‌ಎನ್ ಸೊಸೈಟಿ ಮೂಲಕ ಸರ್ಕಾರದ ನಿಗದಿತ ಬೆಲೆಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಇದರ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.