ಶಹಾಪುರಃ ಅಗ್ನಿ ಅವಘಡ 4 ಅಂಗಡಿಗಳಿಗೆ ಬೆಂಕಿ ಅಪಾರ ನಷ್ಟ
ಅಗ್ನಿ ದುರಂತ - ನಾಲ್ಕು ಅಂಗಡಿಗಳು ಬೆಂಕಿಗಾಹುತಿ ವ್ಯಾಪಕ ಹಾನಿ
ಶಹಾಪುರಃ ಅಗ್ನಿ ಅವಘಡ 4 ಅಂಗಡಿಗಳಿಗೆ ಬೆಂಕಿ ಅಪಾರ ನಷ್ಟ
ಅಗ್ನಿ ದುರಂತ – ನಾಲ್ಕು ಅಂಗಡಿಗಳು ಬೆಂಕಿಗಾಹುತಿ ವ್ಯಾಪಕ ಹಾನಿ
ಶಹಾಪುರಃ ನಗರ ಗ್ಯಾರೇಜ್ ಲೈನ್ ನ ಫ್ಲೈವುಡ್ ವರ್ಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿ ಸುಮಾರು ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಶಹಾಪುರ ನಗರದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ನಾಗರಿಕರ ಕರೆ ಮೇರೆಗೆ ಬೆಂಕಿ ನಂದಿಸಲು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ನಿಯಂತ್ರಣಕ್ಕೆ ತರಯವಷ್ಟರಲ್ಲಿ ನಾಲ್ಕು ಅಂಗಡಿಯ ಅಪಾರ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ.
ಫ್ಲೈವುಡ್ ವರ್ಕರ್ ಅಂಗಡಿ, ಪೂರ್ಣಿಮಾ ಹೊಟೇಕ್ ಸೇರಿದಂತೆ ಬೈಕ್ ದುರಸ್ತಿ ಗ್ಯಾರೇಜ್ ಮತ್ತು ರೇಡಿಯಂ ವರ್ಕ್ಸ್ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದ್ದು ಅಪಾರ ಹಾನಿಯಾಗಿದೆ.
ಗ್ಯಾರೇಜ್ ನಲ್ಲಿ ಒಂದು ಬುಲೆಟ್ ಹಾಗೂ ನಾಲ್ಕು ಇತರೆ ಬೈಕ್ ಗಳು ಸುಟ್ಟು ಕರಕಲಾಗಿವೆ. ಅದೇ ರೀತಿ ಇತರೆ ಅಂಗಡಿಗಳಲ್ಲಿರುವ ಸಾಮಾಗ್ರಿಗಳು ಸುಟ್ಟು ಅಪಾರ ನಷ್ಟವಾಗಿರುವ ಕುರಿತು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಅಗ್ನಿ ಶಾಮಕ ದಳದವರಿಗೆ ಅನುವು ಮಾಡಿಕೊಟ್ಟರು. ಬೆಂಕಿ ಧಗಧಗಿಸುವದನ್ನು ನೋಡಿ ನಗರದ ಜನತೆ ಗಾಬರಿಯೊಳಗಾಗಿದ್ದರು. ಅದೃಷ್ಟವಶಾತ್ ತಾವುದೇ ಪ್ರಾಣಪಾಯವಾಗಿರುವದಿಲ್ಲ.
ಕಳೆದ ಬಾರಿಯು ಇದೇ ತರಹ ಇದೇ ಅಂಗಡಿಗಳಿಗೆಯೇ ಬೆಂಕಿ ಹೊತ್ತು ಉರಿದಿತ್ತು ಎಂಬುದು ಗಮನಾರ್ಹ ವಾಗಿದೆ.