ಶಹಾಪುರಃ ನೆಲಕ್ಕುರುಳಿದ್ದ ವಿದ್ಯುತ್ ಕಂಬ ದುರಸ್ತಿ ಪೂರ್ಣ
ದುರಸ್ತಿ ಕಾರ್ಯ ಪೂರ್ಣ ಃ ವಿದ್ಯುತ್ ಪೂರೈಕೆ
ಶಹಾಪುರಃ ನೆಲಕ್ಕುರುಳಿದ್ದ ವಿದ್ಯುತ್ ಕಂಬ ದುರಸ್ತಿ ಪೂರ್ಣ
ದುರಸ್ತಿ ಕಾರ್ಯ ಪೂರ್ಣ ಃ ವಿದ್ಯುತ್ ಪೂರೈಕೆ
yadgiri, ಶಹಾಪುರಃ ಇದೇ ಮೇ.26 ರಂದು ಭಾರಿ ಮಳೆ ಮತ್ತು ಗಾಳಿಗೆ ವಿದ್ಯುತ್ ಕಂಬಗಳು ಗಿಡ ಮರಗಳ ಸಮೇತ ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಲವಡೆ ತೊಂದರೆ ಉಂಟಾಗಿತ್ತು. ಆದರೆ ಎರಡು ದಿನಗಳಲ್ಲಿ ರಾತ್ರಿ ಹಗಲು ಎನ್ನದೆ ಶಹಾಪುರ ಜೆಸ್ಕಾಂ ತಂಡ ಮತ್ತು ಗುತ್ತಿಗೆದಾರರ ತಂಡ ದುರಸ್ತಿ ಕಾರ್ಯಾಚರಣೆ ಕೈಗೊಂಡು ವಿದ್ಯುತ್ ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಹಾಪುರ ಜೆಸ್ಕಾಂ ಶಾಖಾ ಅಧಿಕಾರಿ ಮರೆಪ್ಪ ಕಡೆಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಡಿಗೇರಾ ವ್ಯಾಪ್ತಿ ಮರಮಕಲ್, ನಾಯ್ಕಲ್, ಬಲಕಲ್, ಕುರಕುಂದಾ ಸೇರಿದಂತೆ ಶಹಾಪುರ ವ್ಯಾಪ್ತಿಯ ದರ್ಶನಾಪುರ, ಮದ್ರಿಕಿ, ಭೀಗುಡಿ, ಗೋಗಿ, ಹೋತಪೇಠ, ದಿಗ್ಗಿ, ಟೊಕಾಪುರ, ಗುಂಡುಗುರ್ತಿ, ಮುಡಬೂಳ, ಹತ್ತಿಗೂಡೂರ, ಸೈದಾಪುರ, ಹುಲಕಲ್, ಸಗರ, ಶಾರದಹಳ್ಳ, ಚಟ್ನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕದಲ್ಲಿ ತೊಂದರೆ ಎದುರಾಗಿತ್ತು. ಪ್ರಸ್ತುತ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಪುನರದುರಸ್ತಿಗೊಳಿಸಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 250 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿದ್ದು ದುರಸ್ತಿ ಕಾರ್ಯ ಮಾಡಲಾಗಿದೆ. ನಾಗರಿಕರ ಸಹಕಾರಕ್ಕೆ ಕೃತಜ್ಞತೆಗಳನ್ನು ಅವರು ತಿಳಿಸಿದ್ದಾರೆ. ಅಲ್ಲದೆ ಇನ್ನುಳಿದ ಯಾವುದಾದರೂ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತೊಂದರೆಯಾಗಿದ್ದರೆ, ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದ್ದಾರೆ.
—-