ಜನಮನವಿನಯ ವಿಶೇಷ

ಗೋವಾಃ ದೇವಿಂದ್ರ ಫಡ್ನವಿಸ್ ಮತ್ತು ಸಿ.ಟಿ.ರವಿ ರಣತಂತ್ರಕ್ಕೆ ಹ್ಯಾಟ್ರಿಕ್ ಸಾಧನೆಯ ಗರಿ

ಫಡ್ನವೀಸ್ & ಸಿ.ಟಿ.ರವಿ ಜೋಡಿ ರಣತಂತ್ರ ಗೋವಾ ಗೆಲುವಿಗೆ ಸಾಧನ

ಗೋವಾಃ ದೇವಿಂದ್ರ ಫಡ್ನವಿಸ್ ಮತ್ತು ಸಿ.ಟಿ.ರವಿ ರಣತಂತ್ರಕ್ಕೆ ಹ್ಯಾಟ್ರಿಕ್ ಸಾಧನೆಯ ಗರಿ

ಹಗಲು-ರಾತ್ರಿ ಶ್ರಮವಹಿಸಿದ ರವಿ & ಫಡ್ನವೀಸ್ ಜೋಡಿ

ಮಲ್ಲಿಕಾರ್ಜುನ ಮುದ್ನೂರ

ವಿವಿ ಡೆಸ್ಕ್ಃ ಗೋವಾ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವಲ್ಲಿ ಉಸ್ತುವಾರಿ ದೇವಿಂದ್ರ ಫಡ್ನವೀಸ್ ಮತ್ತು ಪ್ರಭಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ಜೋಡಿ ರಣತಂತ್ರಗಾರಿಕೆಯಿಂದ ಗೋವಾ ಹ್ಯಾಟ್ರಿಕ್ ಸಾಧನೆ‌ ಮಾಡುವ ಮೂಲಕ ಐತಿಹಾಸಿಕ ಗರಿ ತಲುಪಿದೆ.

ಹೌದು ಫಡ್ನವೀಸ್ ಮತ್ತು ಸಿ.ಟಿ.ರವಿ ಅವರು ಗೋವಾದಲ್ಲಿ ತಿಂಗಳುಗಳ ಕಾಲವಿದ್ದು ಹಗಲು ರಾತ್ರಿ ಎನ್ನದೇ ಅಷ್ಟೇ ಏಕೆ ಸಿ.ಟಿ.ರವಿ ಅವರ ತಂದೆ ನಿಧನ ಹೊಂದಿದಾಗಲೂ ಚುನಾವಣೆ ಸಭೆ ಮುಗಿಸಿ ಒಂದೇ ದಿನದಲ್ಲಿ ಅಂತ್ಯಸಂಸ್ಕಾರ ಮುಗಿಸಿ ಮತ್ತೆ ಪಕ್ಷ ನೀಡಿದ ಜವಬ್ದಾರಿ ನಿಭಾಯಿಸಲು ಹಾಜರಾಗಿದ್ದರು.

ಇಂತಹ ಪಕ್ಷ ನಿಷ್ಠರು, ಮೋದಿಜೀಯವರು ವಹಿಸಿದ್ದ ಕೆಲಸವನ್ನು ಅಕ್ಷರಸಹಃ ಪೂರ್ಣಗೊಳಿಸುವ ಸಮರ್ಥ ನಾಯಕರಿರುವದರಿಂದಲೇ ಬಿಜೆಪಿ ಸಂಘಟನಾತ್ಮಕವಾಗಿ ಚಯನಾವಣೆಯಲ್ಲಿ ಜಯಭೇರಿ ಬಾರಿಸುವದು‌
ಪ್ರಧಾನಿ ಅವರು ವರ್ಚಸ್ಸು, ಅವರ ಜನಪರ‌ ಕಾಳಜಿ,‌ ಯೋಜನೆಗಳನ್ನು ಜನರ‌ಮನೆ ಬಾಗಿಲಿಗೆ ತಲುಪಿಸುವದು ಮತ್ತು ಜನರಿಗೆ ಮನನ ಮಾಡುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.

ಅಲ್ಲದೆ ದಿವಂಗತ ಸಿಎಂ ಮನೋಹರ ಪರಿಕರ್ ಅವರ ಮಗ  ಉತ್ಪಲ್ ಪರಿಕರ್ ಅವರು ಬಿಜೆಪಿ‌ ತೊರೆದರೂ (ಟಿಕೆಟ್ ನೀಡದ ಕಾರಣ) ಕೆಲ ಸಂಕಟ ಎದುರಾದರೂ ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ಸಾಮೂಹಿಕವಾಗಿ ಚುನಾವಣೆ ಎದುರಿಸುವಲ್ಲಿ ಸಿ.ಟಿ.ರವಿ ಮತ್ತು ಫಡ್ನವೀಸ್ ಮತ್ತು ಸಿಎಂ ಸಾವಂತ ನೇತೃತ್ವದಲ್ಲಿ ಪಕ್ಷ ಅಧಿಕಾರದ ಗದ್ದುಗೆ‌ ಏರುವಲ್ಲಿ ಸುಲಭವಾಯಿತು.

ಸ್ಥಳೀಯ ಸಮಸ್ಯೆ ಕುರಿತು ಚರ್ಚಿಸಿ ರಾತ್ತಿ,‌ಹಗಲು ಶ್ರಮಿಸಿದ ಈ ತ್ರಿಮೂರ್ತಿಗಳ‌ ಶ್ರಮದಿಂದ ಗೋವಾ ಹ್ಯಾಟ್ರಿಕ್ ಸಾಧನೆ ಮಾಡುವಲ್ಲಿ ಮುನ್ನಡೆ ಸಾಧಿಸಿತು.

ಇದರಂತೆ ವಿಪಕ್ಷದಲ್ಲಿ ಒಗ್ಗಟ್ಟಾಗಿ ರಣತಂತ್ರ ಎಣೆದು ಹಗಲು ರಾತ್ರಿ ಚುನಾವಣೆ‌‌ ಎದುರಿಸುವಲ್ಲಿ ದುಡಿಯುವ ಸಮರ್ಥ ನಾಯಕರು ವಿಪಕ್ಷ‌ ಕಾಂಗ್ರೆಸ್ ನಲ್ಲಿ‌ ಇಲ್ಲ. ಪಂಚರಾಜ್ಯ ಚುನಾವಣೆ‌ ಫಲಿತಾಂಶ ಹೊರ‌ಬಿದ್ದ ಈ ಕ್ಷಣದಿಂದಾದರೂ ತನ್ನ ನಡೆ ಬದಲಾಯಿಸಬೇಕಿದೆ. ಯುವ ಪಡೆಗೆ ಜವಬ್ದಾರಿ ನೀಡಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ಮುಕ್ತ ಭಾರತ‌ ನಿಜವಾಗುವದು ಸನಿಹದಲ್ಲಿದೆ ಎಂದರೆ ತಪ್ಪಿಲ್ಲ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ……ಕಾದು ನೋಡೋಣ.

Related Articles

Leave a Reply

Your email address will not be published. Required fields are marked *

Back to top button