ಪ್ರಮುಖ ಸುದ್ದಿ
ಗೋಪಾಲಪ್ಪ ಟೊಣಪೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..
ದಿವಂಗತ ಶ್ರೀ ಗೋಪಾಲಪ್ಪ ಟೊಣಪೆ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ……
ಸಾಕಷ್ಟು ವಿಚಾರಗಳಲ್ಲಿ ಶಾಲೆ ಕಲಿಸುವ ಶಿಕ್ಷ ಣಕ್ಕಿಂತ ಹಸಿವು ಕಲಿಸುವ ಶಿಕ್ಷಣವೇ ಹೆಚ್ಚಾಗಿರುತ್ತದೆ. ಇದಕ್ಕೆ ನೈಜ ಉದಾಹರಣೆ ಶ್ರೀ ಗೋಪಾಲಪ್ಪ ಟೊಣಪೆ.
ಹೌದು, ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ 40 ವರ್ಷಗಳಿಂದ ಕೃಷಿಯನ್ನೇ ಜೀವನಾಧಾರವಾಗಿ ಆರಂಭಿಸಿರುವ ಸಮಗ್ರ ಕೃಷಿಯಲ್ಲಿ ಅಚಲವಾದ ಸಾಧನೆ ಮಾಡಿದ್ದಾರೆ.
ಇವರು ತಮ್ಮ ಮಗನಿಗೆ ಸಮಗ್ರ ಕೃಷಿ ಹಾಗೂ ಮಿಶ್ರ ಕೃಷಿ ಬಗ್ಗೆ ಮಾಹಿತಿಯನ್ನು ಬಾಲ್ಯದಿಂದಲೇ ತಿಳಿಸುವಲ್ಲಿ ಸಫಲರಾದರು.
ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿದರು. ಬಳಿಕ 40 ವರ್ಷದ ಸುದೀರ್ಘ ಅವಧಿಯಲ್ಲಿ ಮೇರು ಕೃಷಿಕನಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದರು.
ಇವರ ಈ ಅಭೂತಪೂರ್ವ ಸಾಧನೆಗೆ,
ಜಿಲ್ಲಾ ಮಟ್ಟದ ರೈತ ಪ್ರಶಸ್ತಿ, ಕೃಷಿ ಇಲಾಖೆಯಿಂದ ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ, ಕೃಷಿ ಪಂಡಿತ, ಪ್ರಶಸ್ತಿ ದೊರೆತಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ..
-ಪ್ರವೀಣ ಫಿರಂಗಿ. ಶಹಾಪುರ.