ಸಂವಿಧಾನ ಬದ್ಧ ಹಕ್ಕಿಗಾಗಿ ಸ್ವಾಮೀಜಿ ಹೋರಾಟ – ಗುರು ಪಾಟೀಲ
ಶೇ.7.5 ಮೀಸಲಾತಿಃ ಧರಣಿ ಸ್ಥಳಕ್ಕೆ ಶಿರವಾಳ ಭೇಟಿ
ಶೇ.7.5 ಮೀಸಲಾತಿಃ ಧರಣಿ ಸ್ಥಳಕ್ಕೆ ಶಿರವಾಳ ಭೇಟಿ
ಸಂವಿಧಾನ ಬದ್ಧ ಹಕ್ಕಿಗಾಗಿ ಸ್ವಾಮೀಜಿ ಹೋರಾಟ – ಗುರು ಪಾಟೀಲ
yadgiri, ಶಹಾಪುರಃ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಕಳೆದ 223 ದಿನಗಳಿಂದ ನಿರಂತರವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಶ್ರೀಗಳನ್ನು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಂಗಳವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯ ಮೀಸಲಾತಿ ಕೇಳುತ್ತಿರುವದು ಸಂವಿಧಾನ ಬದ್ಧವಾಗಿದ್ದು, ಅದು ಅವರ ಹಕ್ಕು, ಸರ್ಕಾರ ಈ ಕುರಿತು ಗಮನ ಹರಿಸಬೇಕು. ಕಳೆದ 223 ದಿನಗಳಿಂದ ನಿರಂತರ ಚಳಿ, ಮಳೆಯೂ ಲೆಕ್ಕಿಸದೆ ಧರಣಿ ನಡೆಸುತ್ತಿರುವ ಶ್ರೀಗಳ ಬೇಡಿಕೆ ಕುರಿತು ಸರ್ಕಾರ ಸ್ಪಂಧಿಸಬೇಕಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಎಲ್ಲಾ ಸಮುದಾಯಗಳಿಗೆ ಸಾಮಾನ್ಯ ನ್ಯಾಯ ಒದಗಿಸುವ
ನಿಟ್ಟಿನಲ್ಲಿ ರಚಿಸಿದ್ದು, ಇಡಿ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನ ಬದ್ಧ ಹಕ್ಕನ್ನು ಕೇಳುವದರಲ್ಲಿ ಯಾವುದೇ ತಪ್ಪಿಲ್ಲ. 70 ವರ್ಷಗಳು ಕಳೆದರೂ ಇನ್ನೂ ಮೀಸಲಾತಿ ಸಮರ್ಪಕವಾಗಿ ಲಭ್ಯವಿರುವದಿಲ್ಲ ಹೀಗಾಗಿ ಹಲವಾರು ಸಮುದಾಯಗಳಿಗೆ ಮೀಸಲಾತಿ ಅಗತ್ಯವಿದೆ. ಅದನ್ನು ಮನಗಂಡು ಸರ್ಕಾರ ಈ ಕುರಿತು ಸಮಾಲೋಚನೆ ನಡೆಸಿ ಅನ್ಯಾಯಯಾಗದಂತೆ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಿ. ಈ ಕುರಿತು ಸಿಎಂ ಸೇರಿದಂತೆ ಸಂಬಂಧಿಸಿದ ಸಚಿವರಿಗೆ ಮತ್ತು ನಮ್ಮ ಬಿಜೆಪಿ ರಾಜ್ಯಧ್ಯಕ್ಷರ ಗಮನಕ್ಕೆ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವೆಂಕಟೇಶ ವನದುರ್ಗ, ಸುದೀರ ಚಿಂಚೋಳಿ, ಅಶೋಕ ನಾಯಕ ಹಳಿಸಗರ, ರಂಗಣ್ಣ ಇತರರು ಇದ್ದರು.