ಹೆಣದ ಮೇಲೆ ದುಡ್ಡು ಮಾಡುವದು ಸರಿಯಲ್ಲ – ಹಳ್ಳಿಹಕ್ಕಿ ಬೇಸರ
ಜಿಲ್ಲಾಧಿಕಾರಿಗಳಿಗೆ ಹತ್ತು ಪೈಸೆ ಖರ್ಚು ಮಾಡುವ ಅಧಿಕಾರವಿಲ್ಲ – ಎಚ್.ವಿಶ್ವನಾಥ ಆರೋಪ
ಕೋವಿಡ್ ನಿರ್ವಹಣೆಗೆ ಪ್ರತಿ ಜಿಲ್ಲೆಗೆ 100 ಕೋಟಿ ಮಿಸಲಿಡಿ
ಮೈಸೂರಃ ಕೋವಿಡ್ ನಿಯಂತ್ರಿಸಲು ಆಯಾ ಜಿಲ್ಲಾಧಿಕಾರಿಗೆ ವ್ಯವಧಾನಕ್ಕೆ ಬಿಟ್ಟಿರುವದೇನು ಸರಿ ಆದರೆ ಅವರಿಗೆ ಖರ್ಚು ಮಾಡುವ ಅಧಿಕಾರವಿಲ್ಲ. ಅದೇನಿದ್ದರೂ ವಿಜಯೇಂದ್ರನಿಗೆ ಮಾತ್ರ ಮೀಸಲು. ಬಿಲ್ ಪ್ರತಿಗಳು ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿ ರಾಜ್ಯದ ಹಳ್ಳಿಗಳಿಗೆ ವ್ಯಾಪಿಸಿದೆ. ಗ್ರಾಮೀಣ ಭಾಗದ ಜನರ ಸ್ಥಿತಿ ಚಿಂತಾಜನಕವಾಗಿದೆ. ವ್ಯಾಕ್ಸಿನ್ ಮಾತ್ರ ಅಲ್ಲ ಮಾತ್ರೆಗಳಿಗಾಗಿಯೂ ಬೆಂಗಳೂರ ಕಡೆ ಮುಖ ಮಾಡಬೇಕಿದೆ.
ಒಬ್ಬರಲ್ಲಿಯೇ ಅಧಿಕಾರ ಕೇಂದ್ರಿಕೃತವಾಗಿರುವ ಕಾರಣ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹೆಣದ ಮೇಲೆ ದುಡ್ಡು ಮಾಡುವದು ಸರಿಯಲ್ಲ ಎಂದು ಖಾರವಾಗಿ ಹರಿಹಾಯ್ದರು.
ಕೋವಿಡ್ ಸಮರ್ಪಕವಾಗಿ ನಿರ್ವಹಿಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಪ್ರತಿ ಜಿಲ್ಲೆಗೆ ನಿಯೋಜಿಸಬೇಕು. ಅಲ್ಲದೆ ಅವರಿಗೆ ಸಂಪೂರ್ಣ ಅಧಿಕಾರ ನೀಡಿ ಪ್ರತಿ ಜಿಲ್ಲೆಗೆ 100 ಕೋಟಿ ಮಿಸಲಿಡಿ ಸರಿಯಾಗಿ ನಿರ್ವಹಣೆ ಆಗದಿದ್ದಲ್ಲಿ ಅಧಿಕಾರಿಗಳನ್ನು ಆಗ ಪ್ರಶ್ನಿಸಿ ಎಂದು ಸಲಹೆ ನೀಡಿದರು.