ಶಹಾಪುರಃ ಸಂಭ್ರಮದ ಈದ್ ಮಿಲಾದ್ ಆಚರಣೆ
ಸಂಭ್ರಮದ ಈದ್ ಮಿಲಾದ್ ಆಚರಣೆ
ಶಹಾಪುರಃ ಪ್ರವಾದಿ ಮಹ್ಮದ್ ಪೈಗಂಬರ ಅವರ ಜನ್ಮ ದಿನದಂದೆ ಮುಸ್ಲಿಂ ಬಾಂಧವರು ಇಂದು ತಾಲೂಕಿನಾದ್ಯಂತ ಈದ್ ಮಿಲಾದ ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸಿದರು. ಈದ್ ಮಿಲಾದ್ ಹಬ್ಬ ಅಂಗವಾಗಿ ನಗರದಲ್ಲಿ ಮುಸ್ಲಿಂಬಾಂಧವರಿಂದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮುಸ್ತಫಾ ದರ್ಬಾನ್, ಈದ್ ಮಿಲಾದ್ ಮುಸ್ಲಿಂ ಬಾಂಧವರಿಗೆ ಶ್ರೇಷ್ಠ ದಿನ. ಮುಸ್ಲಿಂರ ಅಂತಿಮ ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮ ದಿನ. ಪ್ರವಾದಿ ಪೈಗಂಬರ್ ಅವರು ಸಹೋದರತ್ವ ಹಾಗೂ ಸಹಾನುಭೂತಿ ಸಂದೇಶವನ್ನು ನೀಡಿದ್ದಾರೆ. ಅವರ ಸಂದೇಶ ಇಡಿ ವಿಶ್ವಕ್ಕೆ ಪ್ರೇರಣೆಯಾಗಿದೆ. ನಾವೆಲ್ಲ ಮಹ್ಮದ್‍ರ ಸಂದೇಶವನ್ನು ಅರಿತು ನಡೆಯಬೇಕಿದೆ ಎಂದರು.
ಮೆರವಣಿಗೆಯಲ್ಲಿ ಮುಸ್ಲಿಂ ಯುವ ಜನತೆ, ಹಿರಿಯರು ಮತ್ತು ಮಕ್ಕಳು ಸಂಭ್ರಮದಿಂದ ಸಡಗರದಿಂದ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಮುಸ್ತಫಾ ಮಕ್ಕಾ, ನಸೀರ್ ಲಲ್ಲೋಟಿ, ಇಬ್ರಾಹಿಂಸಾಬ ಶಿರವಾಳ, ಶಕೀಲ್ ಮುಲ್ಲಾ, ಪಾಶಾ ಪಾಟೇಲ್, ಅಜೀಮ್ ಜಮಾದಾರ, ರಫೀಕ್ ಕಂಠಿ, ಚಾಂದ ಪಟೇಲ್, ನುಮಾನ್ ಖಾಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಸಿಪಿಐ ಹನುಮರಡ್ಡೆಪ್ಪ ಮತ್ತು ಶ್ರೀನಿವಾಸ ಅಲ್ಲಾಪುರ ಇದ್ದರು.