ಹೆಣ್ಣು ಬೆನ್ನೆಲುಬಾಗಿ ನಿಲ್ಲುವ ಮಮತಾಮಯಿ – BRP ಯರಗುಪ್ಪಿ ಬರಹ
ಹೆಣ್ಣು-ನಮಗೆ ಬೆನ್ನೆಲುಬಾಗಿ ನಿಲ್ಲುವ ಮಮತಾಮಯಿ
ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ, ಅವರ ದೇಶಗಳು ಬಲಿಷ್ಠವಾಗುತ್ತವೆ ಮತ್ತು ಹೆಚ್ಚು ಸಮೃದ್ಧವಾಗುತ್ತವೆ. ಪ್ರತಿಯೊಂದು ಹೆಣ್ಣು ಮಗುವಿನ ಶಿಕ್ಷಣದ ಕುರಿತಾಗಿ ಮಿಚೆಲ್ ಒಬಾಮ ಹೇಳಿರುವುದು ಬಹಳ ಸಮಂಜಸವಾಗಿದೆ. ಹೆಣ್ಣೂಬ್ಬಳು ತಾನು ಕಲಿತರೆ ತನ್ನ ಸುತ್ತಮುತ್ತಲಿನ ಜನರನ್ನು ಸುಶಿಕ್ಷಿತರನ್ನಾಗಿಸುತ್ತಾಳೆ. ಸನ್ಮಾರ್ಗದಲ್ಲಿ ನಡೆಸುತ್ತಾಳೆ.
ಪ್ರತಿಯೊಬ್ಬರ ಜೀವನವು ರೂಪುಗೊಳ್ಳುವ ಹೆಣ್ಣುಮಕ್ಕಳ ಪಾತ್ರ ಅಗಾಧವಾಗಿದೆ.ನನ್ನ ಜೀವನದಲ್ಲೂ ಅಮ್ಮ,ದೊಡ್ಡಮ್ಮ,ಅತ್ತೆ,ಅಕ್ಕ ತಂಗಿ ಅತ್ತಿಗೆ ಹೀಗೆ ಎಲ್ಲರೂ ಒಂದಿಲ್ಲೊಂದು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಬಹುದು.
ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು “ರಾಷ್ಟ್ರೀಯ ಹೆಣ್ಣು ಮಕ್ಕಳ” ದಿನವನ್ನು ಆಚರಿಸಲಾಗುತ್ತದೆ. ಇದನ್ನು 2008 ರಲ್ಲಿ ‘ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ’ ಭಾರತೀಯ ಸಮಾಜದ ಜನರಲ್ಲಿ ತಮ್ಮ ಜೀವನವನ್ನು ಉತ್ತಮಗೊಳಿಸಲು ಸಮಾಜದಲ್ಲಿ ಹುಡುಗಿಯರ ಸ್ಥಾನವನ್ನು ಉತ್ತೇಜಿಸಲು ಮತ್ತು ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಈ ದಿನಕ್ಕೆ ಮಹತ್ವವನ್ನು ಸಾರಲು ಪ್ರಾರಂಭಿಸಿತು.
ಹೆಣ್ಣು ಮಗುವನ್ನು ಉಳಿಸಿ,ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣುಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಒಳಗೊಂಡಂತೆ ಸಂಘಟಿತ ಕಾರ್ಯಕ್ರಮಗಳೊಂದಿಗೆ ದಿನವನ್ನು ಆಚರಿಸಲಾಗುತ್ತದೆ .
*ಉದ್ದೇಶ:*
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಹಿಂದಿನ ಉದ್ದೇಶವು ದೇಶದ ಹೆಣ್ಣುಮಕ್ಕಳಿಗೆ ಎಲ್ಲಾ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವುದು.
ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವುದು ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಮತ್ತು ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು.ದೇಶದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.ಸ್ತ್ರೀ ಶಿಕ್ಷಣ ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಕುರಿತು ಅರಿವು ಹೆಚ್ಚಿಸುವುದು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವುದು ಹೇಗೆ?:
ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಜನರಲ್ಲಿ ಪ್ರಜ್ಞೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ಹಲವಾರು ಅಭಿಯಾನಗಳನ್ನು ಆಯೋಜಿಸುತ್ತದೆ.
ಈ ಅಭಿಯಾನದ ಮೂಲಕ, ಭಾರತ ಸರ್ಕಾರವು ಹೆಣ್ಣು ಮಗುವಿಗೆ ಸಂಬಂಧಿಸಿದ ಅಸಮಾನತೆಗಳು ಮತ್ತು ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ.
ಸಮಾಜದಲ್ಲಿ ಶಿಕ್ಷಣ,ಸ್ಥಾನ, ಸಮಾನ ಸ್ಥಾನಮಾನ ಇತ್ಯಾದಿಗಳನ್ನು ಉತ್ತೇಜಿಸಲು ಹೆಣ್ಣು ಮಕ್ಕಳ ದಿನವನ್ನು ಆಚರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಅಲ್ಲದೆ, ಟಿವಿ ಚಾನೆಲ್ಗಳು, ಸ್ಥಳೀಯ ಪತ್ರಿಕೆಗಳು ಮತ್ತು ರೇಡಿಯೊ ಕೇಂದ್ರಗಳಲ್ಲಿ *”ಹೆಣ್ಣು ಮಗುವನ್ನು ಉಳಿಸಿ ಓದಿಸಿ-ಬೇಟಿ ಬಚಾವೋ-ಬೇಟಿ* *ಪಢಾವೋ”ಎಂಬ* ಸಂದೇಶವನ್ನು ಸಾರುವ ಮೂಲಕ ಸರ್ಕಾರವು ಹಲವಾರು ಜಾಹೀರಾತುಗಳನ್ನು ನೀಡುತ್ತದೆ.
ಎನ್ಜಿಒ ಅಥವಾ ಸರ್ಕಾರೇತರ ಸಂಸ್ಥೆಗಳು ಸಹ ಆಚರಣೆಯಲ್ಲಿ ಭಾಗವಹಿಸುತ್ತವೆ ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಲು ಮತ್ತು ಅವರಿಗೆ ಶಿಕ್ಷಣ ನೀಡಲು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ಈಗ ಜಾರಿಗೆ ಹಂತದಲ್ಲಿರುವ “ರಾಷ್ಟ್ರೀಯ ಶಿಕ್ಷಣ ನೀತಿ”(NEP)-2020 ರಲ್ಲಿ ಹೆಣ್ಣು ಮಗುವಿನ ಅಭಿವೃದ್ಧಿಯನ್ನು ಗುರಿಯಾಗಿಸಲು ಲಿಂಗ ಸೇರ್ಪಡೆ ನಿಧಿಯನ್ನು ಪರಿಚಯಿಸಿದೆ. ಎಲ್ಲಾ ಹುಡುಗಿಯರಿಗೆ ಗುಣಮಟ್ಟದ ಮತ್ತು ಸಮಾನ ಶಿಕ್ಷಣವನ್ನು ಒದಗಿಸಲು ಭಾರತ ಸರ್ಕಾರವು”ಲಿಂಗ ಸೇರ್ಪಡೆ ನಿಧಿ” ಯನ್ನು ರೂಪಿಸುತ್ತದೆ.
ನಿಧಿಯು ಶಾಲಾ ಶಿಕ್ಷಣದಲ್ಲಿ 100% ಬಾಲಕಿಯರ ದಾಖಲಾತಿ ಮತ್ತು ಉನ್ನತ ಶಿಕ್ಷಣದಲ್ಲಿ ದಾಖಲೆಯ ಭಾಗವಹಿಸುವಿಕೆಯ ಪ್ರಮಾಣವನ್ನು ಖಾತ್ರಿಪಡಿಸುವುದು.
ಸಮಗ್ರ ಶಿಕ್ಷಾ ಅಡಿಯಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು,ವಿವಿಧ ಮಧ್ಯಸ್ಥಿಕೆಗಳನ್ನು ಈ ಕೆಳಗಿನಂತೆ ಗುರಿಪಡಿಸಲಾಗಿದೆ.
*ರಾಜ್ಯವು ವ್ಯಾಖ್ಯಾನಿಸಿದಂತೆ ನೆರೆಹೊರೆಯಲ್ಲಿ ಶಾಲೆಗಳನ್ನು ತೆರೆಯುವುದು.
*8ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಪೂರೈಕೆ.
* 8 ನೇ ತರಗತಿವರೆಗಿನ ಎಲ್ಲಾ ಹುಡುಗಿಯರಿಗೆ ಸಮವಸ್ತ್ರ ವಿತರಣೆ, ಎಸ್ಸಿ, ಎಸ್ಟಿ ಮಕ್ಕಳು ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮಕ್ಕಳಿಗೂ ವಿಸ್ತರಣೆ.
*ಎಲ್ಲಾ ಶಾಲೆಗಳಲ್ಲಿ ಲಿಂಗ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸುವುದು.
*ಬಾಲಕಿಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶಿಕ್ಷಕರ ಸಂವೇದನಾ ಕಾರ್ಯಕ್ರಮಗಳು.
*VI ರಿಂದ XII ತರಗತಿಗಳ ಹುಡುಗಿಯರಿಗೆ ಆತ್ಮರಕ್ಷಣೆಯ ತರಬೇತಿಗೆ ಅವಕಾಶ.
*CWSN ಹುಡುಗಿಯರಿಗೆ I ರಿಂದ ತರಗತಿ XII ವರೆಗಿನ ಸ್ಟೈಫಂಡ್ ನೀಡುವುದು.
ವಸತಿ ಶಾಲೆಗಳು
ದೂರದ/ಗುಡ್ಡಗಾಡು ಪ್ರದೇಶಗಳಲ್ಲಿ/ಕಠಿಣ ಪ್ರದೇಶವಿರುವ ಪ್ರದೇಶಗಳಲ್ಲಿ ಶಿಕ್ಷಕರಿಗೆ ವಸತಿ ಸಮುಚ್ಚಯ ನಿರ್ಮಾಣ.
ಇದರ ಜೊತೆಗೆ ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡಲು ಮತ್ತು ಹಿಂದುಳಿದ ವರ್ಗಗಳ ಹುಡುಗಿಯರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು, ಸಮಗ್ರ ಶಿಕ್ಷಾ ಅಡಿಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ತಾಲೂಕುಗಳಲ್ಲಿ (ಇಬಿಬಿ) ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳನ್ನು (ಕೆಜಿಬಿವಿ) ಮಂಜೂರು ಮಾಡಲಾಗಿದೆ.
ಒಟ್ಟಾರೆಯಾಗಿ ನಾವು ನಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆ ಪಡೋಣ ಹಾಗೂ ಹೆಣ್ಣು ಮಗುವಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ.ಹೆಣ್ಣು ಮಗುವನ್ನು ಉಳಿಸುವುದು, ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣು ಮಗುವಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಜಾಗೃತಿ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಈ ದಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ.
ಇಂದಿನ ಶಾಲಾ ಶಿಕ್ಷಣದಲ್ಲಿ 100% ಬಾಲಕಿಯರ ದಾಖಲಾತಿ ಮತ್ತು ಉನ್ನತ ಶಿಕ್ಷಣದಲ್ಲಿ ಭಾಗವಹಿಸುವಿಕೆಯ ಪ್ರಮಾಣವನ್ನು ಖಾತ್ರಿಪಡಿಸಿ ಹೆಚ್ಚಿಸುವುದು.
ಎಲ್ಲಾ ಹಂತಗಳಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡುವುದು, ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಒಳಗೊಳ್ಳುವಿಕೆಯನ್ನು ಅಭ್ಯಾಸ ಮಾಡುವುದು ಮತ್ತು ಸಕಾರಾತ್ಮಕ ನಾಗರಿಕ ಸಂವಾದಗಳ ಮೂಲಕ ಹುಡುಗಿಯರ ನಾಯಕತ್ವದ ಸಾಮರ್ಥ್ಯವನ್ನು ಸುಧಾರಿಸುವುದರಿಂದ ಸಾಧ್ಯತೆಗಳು ಇರುತ್ತವೆ.ಅದಕ್ಕೆ ಹೇಳೋದು ‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’ ಅಂತಾ ಹಿರಿಯರ ಮಾತೂ ಸತ್ಯ.ಹೀಗಾಗಿ ಹೆಣ್ಣು ಕುಟುಂಬದ ಕಣ್ಣು.
ಅಮ್ಮ, ಅಕ್ಕ-ತಂಗಿ ಅತ್ತೆ, ಅಜ್ಜಿ, ಪತ್ನಿ,ಸ್ನೇಹಿತೆ..ಹೀಗೆ ಹಲವಾರು ಮಹತ್ವಪೂರ್ಣ ಸ್ಥಾನಗಳಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುವವಳು ಮಮತಾಮಯಿ ಹೆಣ್ಣು ಸ್ತ್ರೀ ಎಂದ ತಾನು ಉರಿದು ಜಗವನೆಲ್ಲ ಬೆಳಗುವ ಬತ್ತಿಯಂತೆ.
ತಾನು ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವವಳು ಹೆಣ್ಣು. ಈ ದಿನದಂದು ಕೇಂದ್ರ ಸರ್ಕಾರ *”Selfie With Daughter”* ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
– ಬಸವರಾಜ ಎಮ್ ಯರಗುಪ್ಪಿ
ಬಿ.ಆರ್ ಪಿ ಶಿರಹಟ್ಟಿ.
ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ
ದೂರವಾಣಿ 9742193758
ಮಿಂಚಂಚೆ basu.ygp@gmail.com