ಪ್ರಮುಖ ಸುದ್ದಿ
ಆಸ್ತಿ ವಿವಾದ : ತಂದೆ ಮತ್ತು ಇಬ್ಬರು ಮಕ್ಕಳ ಬರ್ಬರ ಹತ್ಯೆ
ಕಲಬುರಗಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಂದೆ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಸೇಡಂ ತಾಲೂಕಿನ ಮೋದಕ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ(60) , ಮಕ್ಕಳಾದ ಚನ್ನಪ್ಪ(27), ಶಂಕರಪ್ಪ(25) ಕೊಲೆಗೀಡಾದವರು ಎಂದು ತಿಳಿದು ಬಂದಿದೆ. ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದಾರೆ. ಮುದೋಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.