ಗಾಂಧಿ ಲುಕ್ ನಲ್ಲಿ ಪಾದಯಾತ್ರೆ ಹೊರಟ ಶ್ರೀರಾಮ ಭಕ್ತ ಯಾರೀತಾ.? ಎಲ್ಲಿಂದ ಹೊರಟಿದ್ದಾನೆ.?
2000 KM ಪಾದಯಾತ್ರೆ ಹೊರಟ ವೃದ್ಧ ಏನಿದು ಭಕ್ತಿ.?
ರೋಣ ತಾಲೂಕಿನ ಅಜ್ಜನಿಂದ ಅಯೋಧ್ಯೆಗೆ ಪಾದಯಾತ್ರೆ
ಗಾಂಧಿ ಲುಕ್ ನಲ್ಲಿ ಪಾದಯಾತ್ರೆ ಹೊರಟ ಶ್ರೀರಾಮ ಭಕ್ತ
*ಮಲ್ಲಿಕಾರ್ಜುನ ಮುದ್ನೂರ
ವಿವಿ ಡೆಸ್ಕ್ಃ ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟಗಿ ಗ್ರಾಮದ ವೃದ್ಧನೋರ್ವ ಶ್ರೀರಾಮ ಮಂದಿರ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾನೆ.
ಹೌದು ಈತ ನೋಡಲು ಥೇಡ್ ಮಹಾತ್ಮ ಗಾಂಧೀಜಿ ತರಹ ಇದ್ದಾರೆ. ಕೈಯಲ್ಲಿ ಶ್ರೀರಾಮ ಭಾವಚಿತ್ರಗಳು ಹೊಂದಿದ್ದ ಮತ್ತು ಅದರಲ್ಲಿ ಉತ್ತಮ ಸಂದೇಶ, ಶ್ಲೋಗನ್ ಗಳನ್ನು ಬರೆದುಕೊಂಡು ಕೈಯಲ್ಲಿಡಿದು ಶ್ರಿರಾಮ ಜಪ ಮಾಡುತ್ತಾ ತೆರಳುತ್ತಿರುವದು ಎಂಥವರಿಗೂ ನೋಡಿದರೆ ಅಬ್ಭಾ ಏನಿದು ಸಾಹಸ ಎನಿಸದೆ ಇರದು.
ಈ ವೃದ್ಧ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಿಂದ ಅಂದಾಜು ಅಯೋಧ್ಯ 2000 km ( ಎರಡು ಸಾವಿರ ಕೀ.ಮೀ) ಇದೆಯಂತೆ ಕಳೆದ ಡಿಸೆಂಬರ್ 9 ರಂದು ಈತ ಪಾದಯಾತ್ರೆ ಆರಂಭಿಸಿದ್ದಾನೆ. ನಿತ್ಯ 40, 50 ಹೆಚ್ಚು ಅಂದ್ರೆ 60 ಕೀ.ಮೀ ನಡೆಯುತ್ತಿದ್ದಾನಂತೆ.
ಈಗಾಗಲೇ ಈತ ಅಯೋಧ್ಯ ಸಮೀಪ ವಿದ್ದು, ಇನ್ನೇನು 20 ಕೀ.ಮೀ.ಉಳಿದಿದೆ ಎನ್ನಲಾಗಿದೆ.
ಮಣ್ಣು, ನೀರು ಉಳಿಸಿ, ಮನೆ ಬಿಟ್ಡು ಹೋದರು ಪರವಾಗಿಲ್ಲ ನಿಮ್ಮ ಲಕ್ಷ ಓದಿನಡಿ ಒಳ್ಳೆಯ ವ್ಯಕ್ತಿತ್ವರೂಪಿಸಿಕೊಳ್ಳುವಡಿ ಇರಲಿ ಎನ್ನುವ ಸಂದೇಶ ನೀಡುತ್ತಿದ್ದಾನೆ.
ಯಾರೀತಾ.? ಈ ವೃದ್ಧ ಕರ್ಕಿಕಟ್ಡಿ ಗ್ರಾಮ ನಿವಾಸಿಯಾಗಿದ್ದು, ಮುತ್ತಣ್ಣ ತಿರ್ಲಾಪುರ ಈತ ಕಳೆದ 15 ವರ್ಷದಿಂದ ಜನಜಾಗೃತಿಗಾಗಿ ಕಾಲ್ನಡಿಗೆ ಮೂಲಕ ದೇಶಸುತ್ತಿದ್ದಾನೆ. ಅದರಂತೆ ಈ ವರ್ಷ ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆ ಅಯೋಧ್ಯೆಗೆ ಕಾಲ್ನಡಿಗೆ ಮೂಲಕವೇ ಹೊರಟಿದ್ದಾನೆ.
ಅಲ್ಲದೆ ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಹತ್ತಾರು ಉತ್ತಮ ಶ್ಲೊಗನ್ ಗಳನ್ನು ಹೊತ್ತು ವಿಶೇಷವಾಗಿ ಶಾಲಾ ಕಾಲೇಜು ಯುವಜನತೆ ಗಮನ ಸೆಳೆಯಬೇಕಿದೆ ಇದನ್ನು ಅರಿತು ಯುವ ಜನ ಮುಂದೆ ಸಾಗಬೇಕಿದೆ ಎನ್ನುತ್ತಾರೆ ಪಾದಯಾತ್ರೆಯ ಅಜ್ಜ.
ಸುಮಾರು 38 ದಿನಗಳಿಂದ ಪಾದಯಾತ್ರೆ ಹೊರಟಿದ್ದೇನೆ. ಶ್ರೀರಾಮ ಮಂದಿರ ನಿರ್ಮಾಣದ ಕನಸು ನನಸಾಗಿದೆ. ತುಂಬಾ ಖುಷಿಯಾಗಿದೆ. ಈ ಸಂದರ್ಭದಲ್ಲಿ ಶ್ರೀರಾಮನ ದರ್ಶನಕ್ಕಾಗಿಹೊರಟಿರುವೆ. ಮಾರ್ಗ ಮಧ್ಯ ಎಲ್ಲಾ ರಾಜ್ಯಗಳ ಜನರಿಂದ ಭವ್ಯ ಸ್ವಾಗತ, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಖುಷಿ ಎನಿಸಿದೆ.
– ಮುತ್ತಣ್ಣ ತಿರ್ಲಾಪುರ. ಕರ್ಕಿಕಟ್ಟಿ (ಅಯೋಧ್ಯಗೆ ಪಾದಯಾತ್ರೆ ಹೊರಟ ಅಜ್ಜ)