ಹಸಿ ಮೆಣಸಿನಕಾಯಿ ಬೆಳೆ ವಿಮೆಗೆ ಅರ್ಜಿ ಆಹ್ವಾನ
ಹಸಿ ಮೆಣಸಿನಕಾಯಿ ಬೆಳೆ ವಿಮೆಗೆ ಅರ್ಜಿ ಆಹ್ವಾನ
ಯಾದಗಿರಿ; 2021-22ನೇ ಸಾಲಿನ ಯಾದಗಿರಿ ಜಿಲ್ಲೆ ಯಾದಗಿರಿ ತಾಲ್ಲೂಕಿನ 5 ಗ್ರಾಮ ಪಂಚಾಯತ ಶಹಾಪೂರ ತಾಲ್ಲೂಕಿನ 28 ಗ್ರಾಮ ಪಂಚಾಯತ ಹಾಗೂ ಸ್ಥಳೀಯ ಸಂಸ್ಥೆ ಮತ್ತು ಸುರಪುರ ತಾಲ್ಲೂಕಿನ 26 ಗ್ರಾಮ ಪಂಚಾಯತ ಸ್ಥಳೀಯ ಸಂಸ್ಥೆಗಳು ನೀರಾವರಿ ಹಸಿರು ಮೆಣಸಿನಕಾಯಿ ಬೆಳೆ ಮುಂಗಾರು ಹಂಗಾಮಿನ ಅವಧಿಗೆ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಗೊಳಿಸಲಾಗಿದ್ದು ಬೆಳೆ ವಿಮೆ ಪಡೆಯಲು ಅರ್ಹ ರೈತರು ಅರ್ಜಿ ಸಲ್ಲಿಸಬಹುದು.
ಜಿಲ್ಲೆಯಲ್ಲಿ ಹಸಿ ಮೆಣಸಿನ ಕಾಯಿ(ನೀರಾವರಿ) ಬೆಳೆದಂತ ಅರ್ಹ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೆಳೆಸಾಲ ಪಡೆದ ಹಾಗೂ ಪಡೆಯದ ರೈತರು ಅರ್ಜಿ ಸಲ್ಲಿಸಲು ಸೂಚಿಸಿದೆ.
ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ, 71000 ರೂಪಾಯಿಗಳಲ್ಲಿ ಹಸಿ ಮೆಣಸಿನ ಕಾಯಿ(ನೀರಾವರಿ) ರೈತರು ಪಾವತಿಸಬೇಕಾದ ವಿಮಾಕಂತಿನ ದರ ಶೇಕಡ.5 ರೂಪಾಯಿಗಳಲ್ಲಿ 3550 ರೂಪಾಯಿಗಳು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ 2021ರ ಜೂನ್ 30ರೊಳಗೆ ವಿಮಾ ಮೊತ್ತ ಪಾವತಿಸಿ ಯೋಜನೆಯ ಲಾಭ ಪಡೆಯಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ರೈತ ಸಂಪರ್ಕ ಕೇಂದ್ರ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಯಾದಗಿರಿ ದೂರವಾಣಿ ಸಂಖ್ಯೆ;08473-253747,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಶಹಾಪೂರ ದೂರವಾಣಿ ಸಂಖ್ಯೆ; 8217490621, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸುರಪುರ, ದೂರವಾಣಿ ಸಂಖ್ಯೆ; 9844204636 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಯಾದಗಿರಿ ದೂರವಾಣಿ ಸಂಖ್ಯೆ; 9164570011 ಸಂಪರ್ಕಿಸುವ0ತೆ ಪ್ರಕಟಣೆಗೆ ತಿಳಿಸಿದರು.