ಪ್ರಮುಖ ಸುದ್ದಿ

ರುದ್ರಭೂಮಿ ಸ್ವಚ್ಛತೆಗೆ ಗುರು ಪಾಟೀಲ್ ಚಾಲನೆ, ‘ಹಸಿರು ಶಹಾಪುರ’ ನಿರ್ಮಾಣಕ್ಕೆ ಕರೆ

ರುದ್ರಭೂಮಿ ಸ್ವಚ್ಛತೆಗೆ ಗುರು ಪಾಟೀಲ್ ಚಾಲನೆ

ಸಸಿ ನೆಟ್ಟು ‘ಹಸಿರು ಶಹಾಪುರ’ ನಿರ್ಮಾಣಕ್ಕೆ ಶಿರವಾಳ ಕರೆ

yadgiri, ಶಹಾಪುರಃ ರುದ್ರಭೂಮಿ ಶಿವನ ಆಸ್ಥಾನ. ಅದು ಸ್ವಚ್ಛವಾಗಿ ಶಾಂತಿಧಾಮವಾಗಿರಬೇಕೆ ಹೊರತು ಶೌಚಾ ಮಾಡುವ ಕೇರಿಯಾಗಿರಬಾರದು. ಸರ್ವರೂ ಕೈಜೋಡಿಸುವ ಮೂಲಕ ರುದ್ರಭೂಮಿಯಲ್ಲಿ ಬೆಳೆದು ನಿಂತ ಜಾಲಿಕಂಠಿಗಳನ್ನು ಕಡಿದು ಕೆಂಪು ಮಣ್ಣು ಹಆಕಿ ಸ್ವಚ್ಛಗೊಳಿಸಿ ಸಸಿಗಳನ್ನು ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎಲ್ಲರೂ ಸಹಕಾರ ಬಹುಮುಖ್ಯ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.

ನಗರದ ದಿಗ್ಗಿ ಬೇಸ್ ಹೊರಭಾಗದಲ್ಲಿರುವ ಸಾರ್ವಜನಿಕ ಹಿಂದೂ ಮಹಾ ರುದ್ರಭೂಮಿ ಸ್ವಚ್ಛತೆ ಜೊತೆಗೆ ಸಸಿ ನೆಡುವ ಮೂಲಕ ‘ಹಸಿರು ಶಹಾಪುರ’ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಸಿರು ಶಹಾಪುರ ನಿರ್ಮಾಣದ ಸಂಕಲ್ಪವನ್ನು ನಾವೆಲ್ಲ ಮಾಡಬೇಕಿದೆ. ಆ ನಿಟ್ಟಿನಲ್ಲಿ ನಗರದ ವಿವಿಧಡೆ ಸಸಿಗಳನ್ನು ನೆಡಬೇಕು. ಪ್ರತಿಯೊಬ್ಬರು ಸಸಿ ನೆಟ್ಟು ಅದರ ಪಾಲನೆ ಪೋಷಣೆ ಮಾಡಬೇಕು. ಪ್ರತಿ ಮನೆ ಮುಂದೆ ಎರಡು ಸಸಿಗಳನ್ನು ನೆಡಬೇಕು. ಅಲ್ಲದೆ ಅರಣ್ಯ ಬೆಳೆಸುವಲ್ಲಿಯೂ ಯುವ ಸಮೂಹ ಕೈಜೋಡಿಸಬೇಕಿದೆ.

ಶಹಾಪುರಃ ಮಾವಿನ ಕರೆ ಒಡ್ಡಿನ ಬದಿ ಬೆಳೆದು ನಿಂತಿದ್ದ ಜಾಲಿಗಿಡಗಳನ್ನು ಲಾಕ್ ಡೌನ್ ವೇಳೆ ಸೇವಾ ಮನೋಭಾವದಿಂದ ಕಡಿದು ಸ್ವಚ್ಛಗೊಳಿಸಿದ್ದ ತಂಡದ ಪರವಾಗಿ ದೈಹಿಕ ಶಿಕ್ಷಕ ಬಸವರಾಜ ಚಲುವಾದಿಯವರನ್ನು ಗುರು ಪಾಟೀಲ್ ಶಿರವಾಳ ಗೌರವಿಸಿ ಅಭಿನಂದನೆ ತಿಳಿಸಿದರು.

ಮುಂದಿನ ಪೀಳಿಗೆಗೆ ಹಸಿರ ಶಹಾಪುರ ನಿರ್ಮಾಣ ಮಾಡುವ ಮೂಲಕ ಪರಿಶುದ್ಧ ಗಾಳಿ ಸೇವನೆಗೆ ಅನುಕೂಲ ಕಲ್ಪಿಸುವ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬರು ರುದ್ರಭೂಮಿಗಳಲ್ಲಿ, ಖಾಳಿ ಪ್ರದೇಶಗಳಲ್ಲಿ ಶಾಲಾ ಕಾಲೇಝು, ಪ್ರಮುಖ ರಸ್ತೆಗಳ ಬದಿ, ಮನೆ ಮುಂದೆ, ಹಿತ್ತಲ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮತ್ತು ಜಮೀನಿನಲ್ಲೂ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರ ಬಿಜೆಪಿ ಅಧ್ಯಕ್ಷ ದೇವು ಕೋನೇರ, ನಗರಸಭೆ ಸದಸ್ಯರಾದ ಅಪ್ಪಣ್ಣ ದಶವಂತ, ಮಲ್ಲಿಕಾರ್ಜುನ ಗಂಧದಮಠ, ರಾಘವೇಂದ್ರ ಯಕ್ಷಿಂತಿ, ಸಂತೋಷ ಭಾಸುತ್ಕರ, ಚಂದ್ರು ಯಾಳಗಿ, ಅಶೋಕ ತಳವಾರ, ರಾಜೂ ಪಂಚಭಾವಿ, ಸುಭಾಷ್ ತಳವಾರ, ಬಸವರಾಜ ಚಲವಾದಿ, ಶಕೀಲ್ ಮುಲ್ಲಾ ಇತರರಿದ್ದರು.

ಇದೇ ಸಂದರ್ಭದಲ್ಲಿ ಮಾವಿನ ಕೆರೆ ಒಡ್ಡಿನ ಬದಿಯಲ್ಲಿ ಬೆಳೆದು ನಿಂತ ಜಾಲಿಗಿಡಗಳನ್ನು ಲಾಕ್ ಡೌನ್ ವೇಳೆ ಸೇವಾ ಮನೋಭಾವದಿಂದ ಕಡಿದು ಸ್ವಚ್ಛಗೊಳಿಸಿದ್ದ ದೈಹಿಕ ಶಿಕ್ಷಕ ಬಸವರಾಜ ಚಲುವಾದಿ ಅವರನ್ನು ಸನ್ಮಾನಿಸಿ ಅವರ ತಂಡಕ್ಕೆ ಅಭಿನಂದನೆಗಳನ್ನು ಮಾಜಿ ಶಾಸಕ ಗುರು ಪಾಟೀಲ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button