ಪ್ರಮುಖ ಸುದ್ದಿ

BREAKING ಸರ್ಕಾರ ಪತನ ಗ್ಯಾರಂಟಿ, ಡಿಕೆಶಿಗೆ ಜೈಲು ಪರ್ಮನಂಟು – ಕುಮಾರಸ್ವಾಮಿ ವಾಗ್ದಾಳಿ

ನಮಗೆ ಹಾಸನಗೆ ಕಳಸಬಹುದು ತಿಹಾರ ಜೈಲಿಗೆ ಕಳಸಲಿಕ್ಕೆ ಆಗುತ್ತಾ - HDK

ಸರ್ಕಾರ ಪತನ ಗ್ಯಾರಂಟಿ, ಡಿಕೆಶಿಗೆ ಜೈಲು ಪರ್ಮನಂಟು – ಕುಮಾರಸ್ವಾಮಿ ವಾಗ್ದಾಳಿ

ನಮಗೆ ಹಾಸನಗೆ ಕಳಸಬಹುದು ತಿಹಾರ ಜೈಲಿಗೆ ಕಳಸಲಿಕ್ಕೆ ಆಗುತ್ತಾ – HDK

ವಿವಿ ಡೆಸ್ಕ್ಃ ಡಿಕೆಶಿಯಿಂದಲೇ ಸರ್ಕಾರ ಪತನವಾಗಲಿದೆ. ಅಲ್ಲದೆ ಡಿಕೆಶಿ ಪರ್ಮನೆಂಟ್ ಆಗಿ ತಿಹಾರ ಜೈಲಿಗೆ ಹೋಗುವ ಸಾಧ್ಯತೆ ಇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ಬಾಂಬ್ ನ್ನು ಕುಮಾರಸ್ವಾಮಿ ಸಿಡಿಸಿದ್ದಾರೆ.

ನಮ್ಮನ್ನ ಮರಳಿ ಹಾಸನಗೆ ಕಳಿಸಬಹುದು ಆದರೆ ತಿಹಾರ ಜೈಲಿಗೆ ಕಳುಹಿಸಲಾಗುತ್ತಾ.? ಎಂದು ಹಸನ್ಮುಖಿಯಾಗಿಯೇ ವಾಗ್ದಾಳಿ ನಡೆಸಿದ ಅವರು,

ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಡಿಕೆಶಿ ಕಾರಣವೆಂಬುದು ತಮಗೆಲ್ಲ ತಿಳಿದ ವಿಷಯ.

ನನ್ನ ಕೈ ಹಿಡಿದು ಮೆಲೆತ್ತಿ ನಾವೆಲ್ಲ ಒಂದಾಗಿದ್ದೀವಿ ಜೋಡೆತ್ತು ಎಂದು ಇತ್ತ ಪ್ರಚಾರ ಪಡೆದು ಅತ್ತ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯದಲ್ಲಿ ಕೈ ಹಾಕಿ ತಮ್ಮದೇ ಪಕ್ಷದಲ್ಲಿದ್ದ ರಮೇಶ ಜಾರಕಿಹೊಳಿ ಅವರನ್ನು ಹೆದರಾಕೊಂಡು ಮೈತ್ರಿ ಸರ್ಕಾರ ಬೀಳಿಸಲು ಕಾರಣವಾಯಿತು.

ಕಣ್ಣೆದುರಿಗೆ ಸರ್ಕಾರ ಬೀಳ್ತಿದೆ ಕುಮಾರಸ್ವಾಮಿ ಅವರ ಜತೆಗಿದ್ದೆವೆ ಎಂದು ಹೇಳಿಕೆ ಕೊಡೋದು ಇದು ಈ ಮಣ್ಣಿನಲ್ಲಿ ನಿಂತು ಹೇಳ್ತಿರುವೆ ಸುಳ್ಳಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯಾರು ಎಲ್ಲಿಗೆ ಹೋಗ್ತಾರೆ ನೋಡೋಣ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button