ಸೌತೆಕಾಯಿಯ ಆರೋಗ್ಯ ಪ್ರಯೋಜನ
ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸುತ್ತದೆ . ಇಂತಹ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುವ ಆಹಾರ ಪದಾರ್ಥ ಸೇವನೆ ಒಳ್ಳೆಯದು. ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಹೇಳಿ ಮಾಡಿಸಿರುವಂತಹದ್ದು. ಬೇಸಿಗೆಯಲ್ಲಿ ಸೌತೆಕಾಯಿ ಸಲಾಡ್ ಸೇವನೆ ಮಾಡಬೇಕು. ವಿಟಮಿನ್ ಎ, ಬಿ 1, ಬಿ 6, ಸಿ, ಪೊಟ್ಯಾಸಿಯಮ್, ಫಾಸ್ಪರಸ್, ಕಬ್ಬಿಣ ಅಂಶಗಳು ಇದರಲ್ಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸೌತೆಕಾಯಿ ನೆರವಾಗುತ್ತದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳಿವೆ. ಸೌತೆಕಾಯಿಯಲ್ಲಿ ಶೇಕಡಾ 96 ರಷ್ಟು ನೀರು ಇರುತ್ತದೆ. ನಿರ್ವಿಶೀಕರಣ ಮತ್ತು ನಿರ್ಜಲೀಕರಣವನ್ನು ತಡೆಯಲು ಅವು ಸೂಕ್ತವಾಗಿವೆ. ಸೌತೆಕಾಯಿಗಳು ಫೈಟೊನ್ಯೂಟ್ರಿಯೆಂಟ್ಸ್ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿವೆ. ಅವು ಪ್ಯಾಂಟೊಥೆನಿಕ್ ಆಮ್ಲ ಮತ್ತು ಮಾಲಿಬಿನಮ್‌ನ ಉತ್ತಮ ಮೂಲವಾಗಿದೆ. ಅವು ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ, ರಂಜಕ, ಮೆಗ್ನಿಸಿಯಮ್ ಮತ್ತು ವಿಟಮಿನ್ ಬಿ 1 ಅನ್ನು ಸಹ ಹೊಂದಿರುತ್ತವೆ. ಆದಾಗ್ಯೂ ಸೌತೆಕಾಯಿ ಪೌಷ್ಟಿಕಾಂಶವು ಹೈದ್ರೀಕರಿಸಿದ ಮತ್ತು ಪೋಷಣೆಯನ್ನು ಉಳಿಸಿಕೊಳ್ಳಲು ಸರಳವಾದ ಆದರೆ ಪರಿಣಾಮಕಾರಿ ಮಾರ್ಗವನ್ನು ನೀಡುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪ್ರತಿದಿನ ಸೌತೆಕಾಯಿ ಸೇವನೆ ಮಾಡಿದರೆ ದೇಹಕ್ಕೆ ಬೇಕಾದ ನೀರಿನಾಂಶವನ್ನು ಇದು ಒದಗಿಸುತ್ತದೆ. ಇದ್ರಲ್ಲಿ ನೀರಿನಂಶ ಜಾಸ್ತಿ ಇರುವುದರಿಂದ ದೇಹದಲ್ಲಿರುವ ಕೊಳಕನ್ನು ಕೂಡ ಇದು ಹೋಗಲಾಡಿಸುತ್ತದೆ.ಸೌತೆಕಾಯಿಗಳು ಪೊಟ್ಯಾಸಿಯಮ್, ಮೆಗ್ನಿಸಿಯಮ್ ಮತ್ತು ಡಯಟರಿ ಫೈಬರ್‌ನ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೌತೆಕಾಯಿಗಳು ನಮ್ಮ ಹೊಟ್ಟೆಗೆ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ. ಸೌತೆಕಾಯಿಯಲ್ಲಿರುವ ಕರಗುವ ಫೈಬರ್ ನಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವು ನಮ್ಮ ಮಲವನ್ನು ಮೃದುಗೊಳಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ನಮ್ಮ ಕರುಳಿನ ಚಲನೆಯನ್ನು ಕ್ರಮಬದ್ಧವಾಗಿರಿಸುತ್ತದೆ. ತಲೆನೋವು ಹಾಗೂ ಆಲಸ್ಯ: ಸೌತೆಕಾಯಿಯಲ್ಲಿ ವಿಟಮಿನ್ ಬಿ, ಸಕ್ಕರೆ ಹಾಗೂ ಎಲೆಕ್ಟೋಲೈಟ್ ಅಂಶವಿರುತ್ತದೆ. ಇದು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ತಲೆ ನೋವು ಅಥವಾ ಆಲಸ್ಯ ಕಾಣಿಸಿಕೊಳ್ಳುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೌತೆಕಾಯಿ ತಿಂದು ಮಲಗಿರಿ.ಆಮ್ಲದ ಮಟ್ಟ: ಪ್ರತಿದಿನ ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟ ನಿಯಂತ್ರಣದಲ್ಲಿರುತ್ತದೆ. ಕೀಲು ನೋವು: ಕೀಲು ನೋವಿನಿಂದ ಬಳಲುತ್ತಿದ್ದವರು ಸೌತೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸಬೇಕು. ಸೌತೆಕಾಯಿ ಜೊತೆ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ದೇಹದ ತಾಪಮಾನ ನಿಯಂತ್ರಣ : ಬೇಸಿಗೆಯಲ್ಲಿ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಇದರಿಂದ ಪದೇ ಪದೇ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೌತೆಕಾಯಿಯನ್ನು ಪ್ರತಿದಿನ ಸೇವಿಸುತ್ತ ಬನ್ನಿ. ಇದರಿಂದ ದೇಹದ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ. ಮುಟ್ಟಿನ ಸಮಸ್ಯೆ: ಮಹಿಳೆಯನ್ನು ಕಾಡುವ ಬಹು ದೊಡ್ಡ ಸಮಸ್ಯೆ ಇದು. ನೋವು ನಿವಾರಕವಾಗಿ ಸೌತೆಕಾಯಿ ಕೆಲಸ ಮಾಡುತ್ತದೆ. ಮೊಸರು, ಇಂಗು, ಉಪ್ಪು, ಕಪ್ಪು ಮೆಣಸು, ಜೀರಿಗೆಯನ್ನು ಸೌತೆಕಾಯಿ ಜೊತೆ ಸೇರಿಸಿ ರಾಯ್ತಾ ಮಾಡಿ ಸೇವನೆ ಮಾಡುವುದರಿಂದ ಸ್ವಲ್ಪ ನೆಮ್ಮದಿ ಕಾಣಬಹುದು. ಸೌತೆಕಾಯಿಯು ಕಣ್ಣುಗಳಿಗೆ ಪ್ರಯೋಜನವನ್ನು ನೀಡುತ್ತದೆ, ಸೌತೆಕಾಯಿಯ ಚೂರುಗಳನ್ನು ಕಣ್ಣುಗಳ ಮೇಲೆ ಸುಮಾರು 10 ನಿಮಿಷಗಳ ಕಾಲ ಇರಿಸುವುದರಿಂದ ನಮ್ಮ ಕಣ್ಣುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಕಣ್ಣುಗಳ ಸುತ್ತ ಊತವನ್ನು ಕಡಿಮೆ ಮಾಡುತ್ತದೆ.