ಆರೋಗ್ಯ ವೃದ್ಧಿಗೆ ನಿತ್ಯ ವ್ಯಾಯಾಮ, ಯೋಗ, ಧ್ಯಾನ ರೂಢಿಸಿಕೊಳ್ಳಿ – ಡಾ.ಉಪ್ಪಿನ್
ರೋಗ ನಿರೋಧಕ ಶಕ್ತಿ ಹೆಚ್ವಿಸುವ ಮಾತ್ರೆ ವಿತರಣೆ
ಶಹಾಪುರಃ ಕೊರೊನಾ ಮಹಾಮಾರಿಗೆ ಇಡಿ ವಿಶ್ವವೇ ತಲ್ಲಣಗೊಂಡಿದ್ದು, ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುದ್ಧ ಆಹಾರ ಸೇವನೆ ನಿತ್ಯ ವ್ಯಾಯಾಮ, ಯೋಗ ಧ್ಯಾನ ಮಾಡುವ ಜೊತೆಗೆ ಶ್ರೀಶ್ರೀ ತತ್ವದ ಕಬಾಸುರ ಕುದನೀರ್ ಆಯುರ್ವೇದಿಕ್ ಮಾತ್ರೆ ಸೇವಿಸಿ ಎಂದು ಖ್ಯಾತ ವೈದ್ಯ ಡಾ.ಜಗಧೀಶ ಉಪ್ಪಿನ್ ತಿಳಿಸಿದರು.
ನಗರದ ವೃದ್ಧಾಶ್ರಮವೊಂದರಲ್ಲಿ
ಶ್ರೀಶ್ರೀ ರವಿಶಂಕರ ಗುರೂಜೀ ಕೃಪಾಶೀರ್ವಾದದಿಂದ ಆರ್ಟ್ ಆಫ್ ಲೀವಿಂಗ್ ಫೌಂಡೇಶನ್ ವತಿಯಿಂದ ನಡೆದ ಕಬಾಸುರ ಕುದನೀರ್ ಆಯುರ್ವೇದಿಕ್ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಆಯುರ್ವೇದಿಕ್ ಮಾತ್ರೆಗಳು ರೋಗನಿರೋಧಕ ಶಕ್ತಿ ಹೆಚ್ಷಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದು, ಎಲ್ಲರೂ ಸೇವಿಸುವ ಮೂಲಕ ಕೊರೊನಾ ತಡೆಗೆ ಶಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಆರ್ಟ್ ಆಫ್ ಲೀವಿಂಗ್ ಫೌಂಡೇಶನ್ ಅತ್ಯುತ್ತಮ ಜನೋಪಕಾರಿ ಕಾರ್ಯ ಮಾಡುತ್ತಿದೆ. ಆರೋಗ್ಯ, ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವೃದ್ಧಾಶ್ರಮದ ಶೋಭಾ ದಂಪತಿಗಳು, ಆರ್ಟ್ ಲೀವಿಂಗ್ ನ ಎಸ್.ಎಚ್.ರಡ್ಡಿ, ಸಂತೋಷ, ಭೀಮರಾಯ, ಸಂಗಮೇಶ, ಶ್ರೀಶೈಲ್ ಆನೇಗುಂದಿ, ಸಂತೋಷ ವನದುರ್ಗ ಇತರರು ಇದ್ದರು. ಆಶ್ರಮದ ಎಲ್ಲಾ ವೃದ್ಧರಿಗೆ ಮಾತ್ರೆಗಳನ್ನು ವಿತರಿಸಲಾಯಿತು.