Home

ಹಿಜಾಬ್ V/S ಕಾನೂನು, ಪ್ರಾಂಶಪಾಲ, ಡಿಡಿಪಿಐ ಮನವಿಗೂ ಕ್ಯಾರೆ ಅನ್ನದೆ ವಿದ್ಯಾರ್ಥಿನಿಯರು

ಕೋರ್ಟ್ ಆದೇಶ ಪಾಲನೆಗೆ ಒಪ್ಪದ ಹಿಜಾಬ್

ಶಿವಮೊಗ್ಗಃ ಹಿಜಾಬ್ ತೆಗೆಯಲ್ಲ, ಪರೀಕ್ಷೆಗೆ ಹಾಜರಾಗದೆ ಹೊರ‌ನಡೆದ ವಿದ್ಯಾರ್ಥಿನಿಯರು

ಕೋರ್ಟ್ ಆದೇಶ ಉಲ್ಲಂಘನೆ

ಶಿವಮೊಗ್ಗಃ 13 ಜನ ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿ ಪೂರ್ವ ಪರೀಕ್ಷೆ ಬರೆಯಲು ಹಿಜಾಬ್ ಧರಿಸಿಯೇ ಆಗಮಿಸಿ, ತರಗತಿಗೆ ಹಾಜರಾಗಿದ್ದು, ಪ್ರೌಢ ಶಾಲಾ ಪ್ರಾಂಶುಪಾಲರು, ಹಿಜಾಬ್ ಮತ್ತು ಬುರ್ಖಾ ತೆಗೆದಿಟ್ಟು ಪರೀಕ್ಷೆ ಬರೆಯಲು ತಿಳಿ ಹೇಳಿದರೂ ಕ್ಯಾರೆ ಅನ್ನದ ವಿದ್ಯಾರ್ಥಿನಿಯರು ಬುರ್ಖಾ,‌ ಹಿಜಾಬ್ ತೆಗೆದಿಡಲು ಒಪ್ಪದ ಕಾರಣ ಕೆಲ ನಿಮಿಷ ಬಿಗಿ ವಾತಾವರಣ‌ ನಿರ್ಮಾಣವಾದ ಘಟನೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.

ನಂತರ ಸಮಸ್ಯ ಅರಿತು ಸ್ಥಳಕ್ಕೆ ಪೊಲಿಸರು ಆಗಮಿಸಿ ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಕಾನೂನುನ್ನು ಗೌರವಿಸಬೇಕೆಂದು ತಿಳಿಸಿದರೂ ಕ್ಯಾರೆ ಎನ್ನದ ವಿದ್ಯಾರ್ಥಿನಿಯರು ನಾವು ತೆಗೆಯಕ್ಕಾಗಲ್ಲ ಹಾಗೇ ಹಿಜಾಬ್ ಧರಿಸಿಯೆ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಆಗ ಅನಿವಾರ್ಯವಾಗಿ ಪೊಲೀಸರು ವಿದ್ಯಾರ್ಥಿನಿಯರಿಗೆ ಹಿಜಾಬ್, ಬುರ್ಖಾ ತೆಗೆದು ಹಾಜರಾಗಿ ಇಲ್ಲವಾದಲ್ಲಿ ಮನೆಗೆ ತೆರಳಿ ಕಾನೂನು ಉಲ್ಲಂಘನೆ ಮಾಡುವಂತಿಲ್ಲ. ಕೋರ್ಟ್ ಆದೇಶ ಪಾಲನೆ ಮಾಡಲೇಬೇಕು. ಇಲ್ಲವಾದಲ್ಲಿ ಆದೇಶ ಉಲ್ಲಂಘನೆ ಯಡಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಪ್ರಾಂಶುಪರು ಪರಿಪರಿಯಾಗಿ ಮನವಿ ಮಾಡಿದರೂ ಸೆಡ್ಡು ಹೊಡೆದು ವಿದ್ಯಾರ್ಥಿನಿಯರನ್ನು ಹೊರ ಹಾಕಲು ಪೊಲೀಸರೇ ಬರಬೇಕಾದ ಸ್ಥಿತಿ ನಿರ್ಮಾಣವಾಗಿ ಪಾಲಕರಲ್ಲಿ ಗೊಂದಲ ಮೂಡಿದ ಹಿನ್ನೆಲೆ‌ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಪೊಲೀಸರು ಕಟ್ಟೆಚ್ಚರವಹಿಸಿ‌ ಶಾಂತಿ ಸುವ್ಯವಸ್ಥೆಗೆ ಸೂಕ್ತ ಕ್ರಮಕೈಗೊಂಡಿದ್ದಾರೆ.

ರಾಜ್ಯದಾದ್ಯಂತ ಹಿಜಾಬ್ ಕಿರಿಕ್

ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿಯೇ ಎಲ್ಲಡೆ ಶಾಲೆಗೆ ಹಾಜರಾದ ವಿದ್ಯಾರ್ಥಿನಿಯರು. ಕಾನೂನು ಉಲ್ಲಂಘನೆ ಮಾಡುತ್ತಿರುವದು‌ ಕಂಡು ಬರುತ್ತಿದೆ.

ಕೋರ್ಟ್ ಅಂತಿಮ ಆದೇಶದ ವರೆಗೆ ಸಮವಸ್ತ್ರ ಮಾತ್ರ ಧರಿಸಿ ಶಾಲೆಗೆ ಹಾಜರಾಗಲು ಕೋರ್ಟ್ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳ ಜೀವನದಲ್ಲಿ ಹಿಜಾಬ್ ಕರಿನೆರಳು ಛಾಯೆ ಮೂಡಿಸುತ್ತಿದೆ.ಇದು ಅವರ ಮುಂದಿನ ಭವಿಷ್ಯಕ್ಕೆ ಪರಿಣಾಮ ಬೀರಲಿದೆ. ಎಸ್ಸೆಸ್ಸೆಲ್ಸಿ ಪೂರ್ವ ಪರೀಕ್ಷೆ‌ ಇರುವ ಕಾರಣ ಮಧ್ಯಂತರ ಆದೇಶ ನೀಡಿದ್ದು, ಅದರ ಪಾಲನೆ‌ ಪ್ರತಿಯೊಬ್ಬರ ಕರ್ತವ್ಯ. ಕಾನೂನಿಗೆ ಗೌರವ ‌ಕೊಡಬೇಕಿದೆ.

ಆದರೆ ಎಲ್ಲಡೆ ಕಾನೂನು ಮೀರಿ ವರ್ತನೆ ನಡೆಯುತ್ತಿರುವ ದೇಶದ ಒಗ್ಗಟ್ಟಿಗೆ‌ ‌ಇದು ಮಾರಕ,‌ ರಾಯಚೂರಿನಲ್ಲಿ ಶಿಕ್ಷಕಿಯೋರ್ವಳು ಹಾಜಾಬ್ ಹಾಕಿಕೊಂಡೆ ಪಾಠ ಮಾಡುವ ಹಠ ಹಿಡಿದಿದ್ದು,‌ಡಿಡಿಪಿಐ ಬಂದು ಹೇಳಿದರೂ‌ ಶಿಕ್ಷಕಿ ಹಿಜಾಬ್ ತೆಗೆಯಲು ಒಪ್ಪದೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಘಟನೆಯೂ ಜರುಗಿದೆ.

ಮುಂದೆ ಯಾವ ದಿಕ್ಕಿನತ್ತ ತಿರುಗಲಿದೆ ‌ಕಾದು ನೋಡಬೇಕು. ಆದರೆ ಯಾವ ಶಾಲೆಯಲ್ಲೂ ಕೇಸರಿ ಶಾಲು ಧರಿಸಿ ಕಿರಿಕ್ ಮಾಡದ ಘಟನೆಗಳು ಇಂದು ಕಂಡು ಬರೆದಿರುವದು ನೋಡಿದರೆ, ಹಿಂದೂ ಪಾಲಕರು‌ತಮ್ಮ ಮಕ್ಕಳಿಗೆ ಮನೆಯಲ್ಲಿ ಕಾನೂನು ಉಲ್ಘನೆ ಮಾಡದಿರಲು‌ ಸೂಚಿಸಿರುವದು ಅರ್ಥೈಸಿದುತ್ತದೆ. ನಮ್ಮ ದೇಶದ ಕಾನೂನಿಹೆ ಗೌರವ ಕೊಡಬೇಕೆಂಬುದು ದೇಶಪ್ರೇಮಿಗಳಿಗೆ,‌ ದೇಶವಾಸಿಗಳಿಗೆ, ದೇಶ ಅಭಿಮಾನ ಹೊಂದಿದವರಿಗೆ ಮಾತ್ರ‌ ಗೊತ್ತಿರಲು ಸಾಧ್ಯ ಎಂದು ಹಿಂದೂ ಸ್ವಾಮೀಜಿ‌ ಒಬ್ಬರು‌ ವಿನಯವಾಣಿಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button