ಪ್ರಮುಖ ಸುದ್ದಿ
ಜೈನಮುನಿಗಳ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಲ್ಲ – ಜಿ.ಪರಮೇಶ್ವರ
ಅಪೇಕ್ಷೆ ಇಲ್ಲದ ಬದುಕು ಸಾಗಿಸುತ್ತಿದ್ದ ಓರ್ವ ಸಂತನ ಹತ್ಯೆ ಕಳವಳಕಾರಿ - ಗೃಹಸಚಿವ ಪರಮೇಶ್ವರ

ಜೈನಮುನಿಗಳ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಲ್ಲ – ಜಿ.ಪರಮೇಶ್ವರ
ಅಪೇಕ್ಷೆ ಇಲ್ಲದ ಬದುಕು ಸಾಗಿಸುತ್ತಿದ್ದ ಓರ್ವ ಸಂತನ ಹತ್ಯೆ ಕಳವಳಕಾರಿ – ಗೃಹಸಚಿವ ಪರಮೇಶ್ವರ
ವಿವಿ ಡೆಸ್ಕ್ಃ ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವದಿಲ್ಲ. ರಾಜ್ಯದ ಪೊಲೀಸರು ದುರ್ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈಗಾಗಲೇ ತನಿಖೆ ಶುರುವಾಗಿದೆ. ಯಾರೊಬ್ಬರು ಉದ್ರೇಕಗೊಂಡು ಪ್ರತಿಭಟನೆಯಾಗಲಿ, ಆತಂಕವಾಗಲಿ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಓರ್ವ ಸ್ಚಾಮೀಜಿ, ಸಂತ ಯಾವುದೇ ಅಪೇಕ್ಷೆಯಿಲ್ಲ ಬದುಕು ಕಟ್ಟಿಕೊಂಡು ಧರ್ಮನಿಷ್ಠರಾಗಿ ಪಾರಂಪರಿಕ ಜೀವನ ಸವೆಸುತ್ತಿದ್ದ ಸಂತನನ್ನು ಹತ್ಯೆಗೈದ ಆರೋಪಿಗಳಿಗೆ ಕಾನೂನುನಡಿ ಶಿಕ್ಷೆ ಆಗಲಿದೆ. ಸಮುದಾಯದ ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ. ಧರ್ಮಪ್ರಚಾರಕ್ಕಾಗಿ ನಡೆದುಕೊಂಡು ಸಂಚರಿಸುವ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವದು ಎಂದರು.