ಗೋಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ
ಮನುಷ್ಯರಿಗೆ ಆರೋಗ್ಯ ಬಹು ಮುಖ್ಯ – ಹೊಸಮನಿ
yadgiri, ಶಹಾಪುರಃ ಪ್ರತಿಯೊಬ್ಬರಿಗೂ ಆರೋಗ್ಯ ಬಹುಮುಖ್ಯವಾಗಿದೆ. ಸದೃಢ ಆರೋಗ್ಯ ಹೊಂದಿದ್ದಲ್ಲಿ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಹುಣಸಗಿ ಆಶೀರ್ವಾದ ಟ್ರಸ್ಟ್‍ನ ಅಧ್ಯಕ್ಷ ಡಾ.ವೀರಭದ್ರಗೌಡ ಹೊಸಮನಿ ತಿಳಿಸಿದರು.
ತಾಲೂಕಿನ ಗೋಗಿ (ಕೆ) ಗ್ರಾಮದ ಯಾದವ ಕಲ್ಯಾಣ ಮಂಟಪದಲ್ಲಿ ಆಶೀರ್ವಾದ ಟ್ರಸ್ಟ್ ಹುಣಸಗಿವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಆರೋಗ್ಯ ಚನ್ನಾಗಿದ್ದಲ್ಲಿ ಉಳಿದೆಲ್ಲವನ್ನು ಗಳಿಸಲು ಪೂರಕವಾಗಿರುತ್ತದೆ. ಆದರೆ ಆರೋಗ್ಯ ಹದಗೆಟ್ಟಲ್ಲಿ ಎಷ್ಟೇ ದುಡ್ಡಿದ್ದರೂ ಸಂಪತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದರು.
ಬಿಜೆಪಿ ಹಿರಿಯ ಮುಖಂಡ ಡಾ.ಮಲ್ಲನಗೌಡ ಉಕ್ಕಿನಾಳ ಜ್ಯೋತಿ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸ್ಥಳೀಯ ಶರಣಯ್ಯ ಸ್ವಾಮಿ ವಿಭೂತಿಮಠ ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಯಲ್ಲಯ್ಯ ನಾಯಕ ವನದುರ್ಗ, ಡಾ.ಮಲ್ಲಿಕಾರ್ಜುನ ಅಚ್ಚೊಳ್ಳಿ, ಚನ್ನಾರಡ್ಡಿ ದೇವಣಗಾಂವ, ಸುಭಾಶ್ ಮಂಟೋಳಿ, ಗುರುನಾಥ ಗಚ್ಚಿ, ಶಾಂತಗೌಡ ದಿಗ್ಗಿ ಉಪಸ್ಥಿತರಿದ್ದರು.
ಬೆಂಗಳೂರಿನ ಸಪ್ತಗಿರಿ ಹಾಗೂ ಸಂಜೀವಿನಿ ಆಸ್ಪತ್ರೆಯ ವಿವಿಧ ರೋಗಗಳ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿದರು. ಸುಮಾರು 418 ಜನರು ತಪಾಸಣೆ ಮಾಡಲಾಯಿತು. ಇದರಲ್ಲಿ ಕಿಡ್ನಿ ಹಾಗೂ ಹೃದಯ ಸಂಬಂತಿ ಖಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯ ಕಂಡು ಬಂದಲ್ಲಿ ಅಂಥವರಿಗೆ ಬೆಂಗಳೂರಿನ ಸಂಜೀವಿನ ಹಾಗೂ ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುವದು ಎಂದಯ ಆಯೋಜಕರು ತಿಳಿಸಿದ್ದಾರೆ.