ಪ್ರಮುಖ ಸುದ್ದಿ
ಶಹಾಪುರಃ 3 ನೇ ವರ್ಷದ ಜನ ಔಷಧಿ ದಿನಾಚರಣೆ
ಉಚಿತ ಆರೋಗ್ಯ ತಪಾಸಣೆ, ಒಂದಿಷ್ಟು ಉಚಿತ ಔಷಧಿ ವಿತರಣೆ
ಶಹಾಪುರಃ ಜನ ಔಷಧಿ ಮಳಿಗೆಗಳು ಆರಂಭಗೊಂಡು ಮೂರು ವರ್ಷಗಳು ಉರುಳಿದವು. ಮೂರನೇಯ ವರ್ಷದ ದಿನಾಚರಣೆಯನ್ನು ನಗರದ ಕುಬೇರ ಬಾರ್ ಹಿಂದುಗಡೆ (ಸಂಗಮೇಶ್ವರ ಕಾಂಪ್ಲೆಕ್ಸ್) ಜನ ಔಷಧಿ ಮಳಿಗೆಯಲ್ಲಿ ಸೋಮವಾರ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಹಲವಾರು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲದೆ ಕೆಲವು ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.
ಬಡವರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಔಷಧಿ ದೊರೆಯಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರು ವರ್ಷಗಳ ಹಿಂದೆ ಜನ ಔಷಧಿ ಮಳಿಗೆಗೆ ಚಾಲನೆ ನೀಡಿದರು.
ಜನ ಔಷಧಿ ಮಳಿಗೆಗಳಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ. ಸುಲಭ ದರದಲ್ಲಿ ಔಷಧಿ ದೊರೆಯುತ್ತಿರುವದರಿಂದ ಬಡ ಜನರ ಆರೋಗ್ಯ ಆಶಾ ಕಿರಣವಾಗಿದ್ದು, ಆರೋಗ್ಯ ಸುಧಾರಣೆಗೆ ಇದು ಬಹು ಉಪಯುಕ್ತವಾಗಿದೆ ಎಂದು ಜನ ಔಷಧಿ ಮಳಿಗೆ ಮಾಲೀಕ ಮನೋಹರ ಬಿ. ತಿಳಿಸಿದ್ದಾರೆ.