Home
ಜಾರಕಿಹೊಳಿ ಹೊಸ ಪಕ್ಷ ಕಟ್ಟಲಿದ್ದಾರೆಯೇ.? ಯತ್ನಾಳ್ ಏನಂದ್ರೂ
ಜಾರಕಿಹೊಳಿ ಹೊಸ ಪಕ್ಷ ಕಟ್ಟಲಿದ್ದಾರೆಯೇ.? ಯತ್ನಾಳ್ ಏನಂದ್ರೂ
ವಿಜಯಪುರಃ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ನಾನು ಸೇರಿಕೊಂಡು ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿ ಹರಡಿಸಿದ್ದು ಸಂಪೂರ್ಣ ಸುಳ್ಳು ವದಂತಿಯಾಗಿದೆ.
ಹೊಸ ಪಕ್ಷ ಕಟ್ಟಲು ಸುಮ್ನೆ ಅಲ್ಲ. ಅಂತಹ ದೇವೆಗೌಡರಿಂದಲೇ ಆಗ್ತಿಲ್ಲ. ಜೆಡಿಎಸ್ ಪಕ್ಷ ಮಲಗಿದೆ. ಇನ್ನೂ ನಾವೆಲ್ಲಿಂದ ಹೊಸ ಪಕ್ಷ ಕಟ್ಟುವ ಇದೆಲ್ಲ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಹಣ ಲೂಟಿ ಮಾಡಿದ್ದರೆ ಪಕ್ಷ ಕಟ್ಟಬಹುದು ನಮ್ನಲೇನು ಲೂಡಿ ಹೊಡೆದ ಹಣವಿಲ್ಲ ಹೊಸ ಪಕ್ಷ ಕಟ್ಟು ಎಂದು ಅವರು ಪರೋಕ್ಷವಾಗಿ ಬಿಎಸ್ ವೈ ವಿರುದ್ಧ ಹರಿಹಾಯ್ದರು.
ನಾನು ಜಾರಕಿಹೊಳಿ ಅವರನ್ನ ಭೇಟಿಯಾಗಿರುವದು ಬಿಜೆಪಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವದ್ಹೇಗೆ ಎಂದು ಅವರು ತಿಳಿಸಿದರು.