ಪ್ರಮುಖ ಸುದ್ದಿಬಸವಭಕ್ತಿ
ಕಾರ್ತಿಕ ಮಾಸ ಸಂಪನ್ನಃ ಅನ್ನ ಸಂತರ್ಪಣೆ

ಕಾರ್ತಿಕ ಮಾಸ ಸಂಪನ್ನಃ ಅನ್ನ ಸಂತರ್ಪಣೆ
yadgiri, ಶಹಾಪುರಃ ಇಲ್ಲಿನ ವೆಂಕಟೇಶ್ವರ ನಗರ ನೂತನ ಬಲಭಿಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಪೂಜಾ ಸಮಾಪನೆ ಅಂಗವಾಗಿ ಶ್ರೀಪ್ರತಿಮೆಗೆ ವಿಶೇಷ ಎಲೆ ಪೂಜೆ, ಅಭಿಷೇಕ ಜರುಗಿತು. ದರ್ಶನಕ್ಕೆ ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮವು ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳು ಸೇರಿದಂತೆ ಶ್ರೀದೇವರ ಹಾಡುಗಳನ್ನು ಸ್ತುತಿಸಲಾಯಿತು. ದರ್ಶನಕ್ಕೆ ಬಂದ ಭಕ್ತರು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಪುನೀತರಾದರು. ಸಂಗೀತದ ಸುಸ್ರಾವ್ಯ ಹಾಡುಗಳನ್ನು ಕೇಳಿ ಆನಂದಿಸಿದರು.
ದೇವಸ್ಥಾನದ ಅರ್ಚಕ ಸಿದ್ದಯ್ಯ ಸ್ವಾಮಿ ಪಡದಳ್ಳಿ ಸಾನ್ನಿಧ್ಯವಹಿಸಿದ್ದರು. ಬಡಾವಣೆ ಮುಖಂಡರಾದ ಕಲ್ಲಯ್ಯ ಸ್ವಾಮಿ, ಶಿವಶರಣಪ್ಪ ಕನ್ನೊಳ್ಳಿ, ಗೌರಿ ಶಂಕರ ಎತ್ತಿನಮನಿ, ಶಂಕರ ಚವ್ಹಾಣ, ಹನುಮೇಗೌಡ ಮರಕಲ್, ಬಸವರಾಜ ಹೂಗಾರ ಸೇರಿದಂತೆ ಇತರರು ಇದ್ದರು. ಬಡಾವಣೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.