ಪ್ರಮುಖ ಸುದ್ದಿವಿನಯ ವಿಶೇಷ

ರೌಡಿ ಸೀಟರ್ ಅಭಿಷೇಕ್ ಕೊಲೆ – ಎರಡು ಗ್ಯಾಂಗ್‍ಗಳ ನಡುವೆ ಇತ್ತಾ ದ್ವೇಷ.!

ರೌಡಿ ಸೀಟರ್ ಅಭಿಷೇಕ್ ಕೊಲೆ

ಕಲ್ಬುರ್ಗಿಃ ಸಾಗರ ಮತ್ತು ಅಭಿಷೇಕ್ ಎರಡು ಗ್ಯಾಂಗ್‍ಗಳಿದ್ದು, ವರ್ಷಗಳಿಂದ ದ್ವೇಷ ಕಟ್ಟಿಕೊಂಡಿದ್ದರು, ಎರಡು ರೌಡಿ ಸೀಟರ್ ಗಳಲ್ಲಿ ಹೆಸರಿದ್ದು, ಈಚೆಗೆ ಅಭಿಷೇಕ್ ಬೆಂಗಳೂರು ಸೇರಿದ್ದ, ಆತ ಕಲ್ಬುರ್ಗಿ ಬರುವದನ್ನೆ ಕಾಯ್ದು ಕುಳಿತಿದ್ದ ಹಂತಕರ ಗ್ಯಾಂಗ್ ಅಭಿಷೇಕ್ ಹಬ್ಬದ ನಿಮಿತ್ತ ಬಂದಿರುವದನ್ನು ಖಚಿತ ಪಡಿಸಿಕೊಂಡು ಆತನನನ್ನು ಹಿಂಬಾಲಿಸಿದ್ದಾರೆ.
ಎರಡು ಮೂರು ದಿನದಿಂದ ಕಲ್ಬುರ್ಗಿಗೆ ಬಂದಿದ್ದ ಅಭಿಷೇಕ್, ಇಂದು ಗುರುವಾರ ಬೆಳಗ್ಗೆ ಜಿಮ್ ಗೆ ಹೊರಟಿರುವದನ್ನು ಮನಗಂಡು ಆತನ ಫಾಲೋ ಮಾಡಿದ್ದಾರೆ. ಅಭಿಷೇಕ್ ಅನುಮಾನ ಬಂದಿದ್ದು, ಜನನಿಬಿಡ ಪ್ರದೇಶ ಬಸ್ ನಿಲ್ದಾಣದತ್ತ ದಡಬಡಾಯಿಸಿ ಹೋಗಲು ಯತ್ನಿಸಿದ್ದಾನೆ.

ಆದಾಗ್ಯು ಬೆಂಬಿಡದ ಹಂತಕರು ತಮ್ಮ ಪಲ್ಸರ್ ಬೈಕ್ ಮೂಲಕ ಆತನ ಸ್ಕೂಟಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾರೆ. ಆಗಲೇ ಆತ ಕೊಲೆ ಮಾಡಲು ಬಂದಿದ್ದಾರೆ ಎಂಬುದನ್ನು ಕಂಡುಕೊಂಡು ಬಸ್ ನಿಲ್ದಾಣದತ್ತ ಓಡಿ ಹೋಗಿದ್ದಾನೆ. ಆದಾಗ್ಯು ಬಿಡದ ನಾಲ್ವರು ಹಂತಕರ ತಂಡ ಆತನನ್ನು ಅಟ್ಟಾಡಿಸಿ ಕೊಲೆಗೈದಿದ್ದಾರೆ. ಬೆಳ್ಳಂಬೆಳಗ್ಗೆ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಹಂತಕರು ಮನಸ್ಸೋ ಇಚ್ಛೆ ಮಾರಾಕಾಸ್ತ್ರದಿಂದ ಕೊಲೆ ಮಾಡುವದನ್ನು ನೋಡಿ ಆತಂಕಗೊಂಡಿದ್ದಾರೆ.

ಅಭಿಷೇಕ್ ಉಸಿರು ಬಿಟ್ಟಿರುವದನ್ನು ಮನಗಂಡೇ ಅಲ್ಲಿಂದ ತಕ್ಷಣ ಹಂತಕರು ಕಾಲ್ಕಿತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಭಿಷೇಕ್ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಂತಕರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಸಾಗರ ಮತ್ತು ಆತನ ಗ್ಯಾಂಗ್ ಹತ್ಯೆಗೈದಿರುವದನ್ನು ಪತ್ತೆ ಮಾಡಿದ್ದು, ತನಿಖೆ ಕೈಗೊಂಡಿದೆ. ಇಷ್ಟರಲ್ಲಿ ಹಂತರಕನ್ನು ಬಂಧಿಸುವದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮಗನಾಗಿದ್ದ ಅಭಿಷೇಕ್..!

ಅಭಿಷೇಕ್ ನಂದೂರ ನಗರದಲ್ಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಓರ್ವ ಪೇದೆಯ ಮಗನಾಗಿದ್ದಾನೆ. ಅಭಿಷೇಕ್ ನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆ ಸೇರಿದಂತೆ ಹಲವಡೆ ಪ್ರಕರಣಗಳು ದಾಖಲಾಗಿವೆ. ಅಭಿಷೇಕ್ ಮತ್ತು ಸಾಗರ ಎರಡು ಗ್ಯಾಂಗ್ ಗಳು ಅಪರಾಧ ಪ್ರಕರಣಗಳಲ್ಲಿ ಭಾಘಿಯಾಗಿದ್ದು, ಎರಡು ಗ್ಯಾಂಗ್‍ಗಳು ನಡುವೆ ವಾರ್ ನಡೆದಿದ್ದವು ಎನ್ನಲಾಗಿದೆ. ಸಂಪೂರ್ಣ ಪೊಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ಹೊರಬರಬೇಕಿದೆ.

Related Articles

Leave a Reply

Your email address will not be published. Required fields are marked *

Back to top button