ಪ್ರಮುಖ ಸುದ್ದಿ

ಕಲಬುರ್ಗಿಃ ಬೃಹತ್ ಗಾತ್ರದ ತೊಗರಿ ಬ್ಯಾಳಿಯಿಂದ ತಯಾರಿಸಿದ ಶಿವಲಿಂಗು.!

ಬೃಹತ್ ಗಾತ್ರದ ತೊಗರಿ ಬ್ಯಾಳಿಯ ಶಿವಲಿಂಗು.!

ಕಲಬುರ್ಗಿಃ ತೊಗರಿ ಖಣಜ ಎಂದೇ ಖ್ಯಾತಿ ಪಡೆದ ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಶಿವರಾತ್ರಿಯನ್ನು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದವರು ವಿಶೇಷವಾಗಿ‌ ಆಚರಿಸುತ್ತಿದ್ದಾರೆ.
ಇಲ್ಲಿನ ಸೇಡಂ ರಸ್ತೆ‌ಯಲ್ಲಿರುವ ಅಮೃತ ಸರೋವರದಲ್ಲಿ ತೊಗರಿ ಬ್ಯಾಳಿಯಿಂದ ಬಹುದೊಡ್ಡ ಗಾತ್ರದ ಶಿವಲಿಂಗು ನಿರ್ಮಾಣ ಮಾಡಿದ್ದು, ಬರುವ ಭಕ್ತರಿಗೆ ವಿಶೇಷ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.

ಹೀಗಾಗಿ ಶಿವರಾತ್ರಿಗೆ ಈ ಬಾರಿ ತೊಗರಿ ಶಿವಲಿಂಗು ಆಕರ್ಷಿಸುತ್ತಿದ್ದು, ತೊಗರಿ ಬ್ಯಾಳಿಗಳಿಂದ ಬೃಹತ್ ಗಾತ್ರದ ಶಿವಲಿಂಗು ದರ್ಶನಕ್ಕೆ ಸಜ್ಜಾಗಿದೆ. ಜೊತೆಗೆ 12 ಜೋತಿರ್ಲಿಂಗಗಳನ್ನು ವಿವಿಧ ವಸ್ತುಗಳಿಂದ ಅಲಂಕರಿಸಲಾಗಿದ್ದು, ಶಿವರಾತ್ರಿ‌ ಜಾಗರಣೆ ದಿನ ಎಲ್ಲರಿಗೂ ದರ್ಶನ ಭಾಗ್ಯ ದೊರೆಯಲಿದೆ.‌

25 ಅಡಿ ಎತ್ತರ ಶಿವಲಿಂಗು ಸಿದ್ಧಗೊಂಡಿದ್ದು, ಇದಕ್ಕೆ 3 ಕ್ಚಿಂಟಲ್ ತೊಗರಿ ಬ್ಯಾಳಿ ಬಳಸಲಾಗಿದೆ ಎಂದು ಈಶ್ವರಿ‌ವಿವಿ‌ಯ ವಿಜಯ ಅಕ್ಕನವರು ತಿಳಿಸಿದ್ದಾರೆ. ಕಳೆದ ಬಾರಿ ಟೆಂಗಿನ ಕಾಯಿಯಿಂದ ತಯಾರಿಸಿದ್ದ ಶಿವಲಿಂಗು ದರ್ಶನ ಪಡೆದಿರುವದನ್ನು ಸ್ಮರಿಸಬಹುದು.

Related Articles

Leave a Reply

Your email address will not be published. Required fields are marked *

Back to top button