ಕಾರ್ಣಿಕ ನುಡಿ ಕುರಿತು ವಿನಯವಾಣಿ ವಿಶ್ಲೇಷಣೆ ಏನು.?

ಎರೆ ದೊರೆ ಆಯಿತಲೆ ದೈವ ದರ್ಬಾರ್ ಆಯಿತಲೆ ಪರಾಕ್ಃ ಕಾರ್ಣಿಕ ಭವಿಷ್ಯ
ಹಾವೇರಿಃ “ಎರೆ ದೊರೆ ಆಯಿತಲೆ, ದೈವ ದರ್ಬಾರ್ ಆಯಿತಲೆ ಪರಾಕ್” ಎಂದು ಗೊರವಯ್ಯ ನಾಗಪ್ಪಜ್ಜ ಜಿಲ್ಲೆಯ ರಾಣೆಬೆಣ್ಣೂರ ತಾಲೂಕಿನ ದೇವರಗುಡ್ಡದ ಮಾಲತೇಶ ದೇವರ ಸನ್ನಿಧಿಯಲ್ಲಿ ದಸರಾ ಅಂಗವಾಗಿ ಬಿಲ್ಲು ಏರಿ ಕಾರ್ಣಿಕ ನುಡಿದಿದ್ದಾರೆ.
ಈ ಕುರಿತು ಹಲವಾರು ವಿದ್ವಾಂಸರು ನಾನಾ ಅರ್ಥಗಳನ್ನು ಹೇಳುತ್ತಿದ್ದಾರೆ.
ಕಾರ್ಣಿಕ ನುಡಿ ಕುರಿತು ವಿನಯವಾಣಿ ವಿಶ್ಲೇಷಣೆ ಏನು.?
ಕಾರ್ಣಿಕ ನುಡಿಯಂತೆ “ಎರೆ ದೊರೆ ಆಯಿತಲೆ” ಅಂದರೆ ಎರೆ ಅಂದರೆ (Lure Attractive) ದೊರೆ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋದು ‘ರಾಜ’ ಎನ್ನಬಹುದು. ಎರೆ ದೊರೆ ಆಯಿತಲೆ ಅಂದ್ರೆ ಈ ದೇಶ ಆಳುವ ರಾಜ (ದೊರೆ) ಎಲ್ಲರಿಗೂ ಆಕರ್ಷಕವಾಗಿ ಕಾಣುವ ಉತ್ತಮ ವ್ಯಕ್ತಿತ್ವ ದೊಂದಿಗೆ ನಾಡಿಗೆ ಜಗಕ್ಕೆ ಸುಪರಿಚಿತನಾಗುತ್ತಾನೆ ಎಂದು ಅರ್ಥೈಸಿಕೊಳ್ಳಬಹುದು.
ಇನ್ನೂ “ದೈವ ದರ್ಬಾರ್ ಆಯಿತಲೇ ಪರಾಕ್” ಅಂದ್ರೆ “the devine Darbar” ದೈವದ ದರ್ಬಾರ್ ನಡೆಯಲಿದೆ. ನ್ಯಾಯ ಸಮ್ಮತವಾದ ನಡೆ ಎಲ್ಲಡೆ ಕಾಣಲಿದೆ. ದೈವದ ಕಹಳೆ ಜೋರಾಗಲಿದೆ.
ಸತ್ಯ ಎಲ್ಲಡೆ ರಾರಾಜಿಸಲಿದೆ. ನ್ಯಾಯಯುತವಾದ ಚರ್ಚೆ ಪ್ರಚಾರ ದೈವದ ಕೋರ್ಟ್ ನಡೆದಂತೆ ಭಾಸವಾಗಲಿದೆ. ಸಕರಾತ್ಮಕ ಧೋರಣೆ ಗಾಳಿ ಬೀಸಿ ಸತ್ಯಕ್ಕೆ ಸಕರಾತ್ಮಕ ಬೆಂಬಲ ದೊರೆಯಲಿದೆ.
ಕೋರ್ಟ್ ನಲ್ಲಿ ನ್ಯಾಯಕ್ಕೆ ಹೆಚ್ಚು ಮಹತ್ವ ದೊರೆತು ವಿಜೃಂಭಿಸಲಿದೆ ಎಂದು ವಿನಯವಾಣಿ ಬಳಗ ವಿಶೇಷವಾಗಿ ಅರ್ಥ ಹುಡುಕಿ ಕೊಟ್ಟಿದೆ. ಯಾವುದಕ್ಕೂ ಕಾಲವೇ ಉತ್ತರಿಸಬೇಕಿದೆ. ಈ ಮೇಲಿನಂತೆ ಅರ್ಥೈಸಿಕೊಳ್ಳಬಹುದು.
ಅಲ್ಲದೆ ಎರೆ ದೊರೆ ಆಯಿತಲೆ ಅಂದ್ರೆ ಎರೆ ಹೊಲ ಜಮೀನು ಮಾಲೀಕರು ದೊರೆಯಾದರೂ ಅಂದ್ಕೊಂಡರೆ. ಎರೆ ಭೂಮಿಯ ಬೆಳೆ ಉತ್ತಮವಾಗಿ ಬೆಳೆದು ರೈತರಿಗೆ ಕೈ ತುಂಬ ಲಾಭವಾಗಿ ರಾಜನಾಗಬಹುದು ಎಂದು ಅಂದ್ಕೊಳ್ಳಬಹುದು.
ದೈವ ದರ್ಬಾರ್ ಆಯಿತಲೆ ಅಂದ್ರೆ ರೈತರ ದೈವ ಖುಲಾಯಿಸಿತು. ಮುಂದೆ ಯಾವ ತೊಂದರೆ ಇಲ್ಲ ಅಂದ್ಕೊಳ್ಳಬಹುದು. ವಿನಯವಾಣಿ ಈ ಕುರಿತು ಸಹ ವಿಶ್ಲೇಷಣೆ ನೀಡಿದೆ. ನಾಗರಿಕರು ಭಕ್ತಾಧಿಗಳು ಕಾರ್ಣಿಕವನ್ನು ಯಾವ ರೀತಿ ಸ್ವೀಕರಿಸುತ್ತಾರೋ ಅವರಿಗೆ ಬಿಟ್ಟಿದ್ದು. ಒಟ್ಟಾರೆ ದೇಶಕ್ಕೆ ರೈತರಿಗೆ ಸೈನಿಕರಿಗೆ ಮೊದಲು ಒಳಿತಾದರೆ ಸಾಕು.
– ಮಲ್ಲಿಕಾರ್ಜುನ ಮುದನೂರ.
– *ಸಂಪಾದಕರು ವಿನಯವಾಣಿ.*