Homeಅಂಕಣಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ರುಚಿಕರವಾದ ‘ಕೇಸರಿ ಪಿಸ್ತಾ ಕೀರ್’ ಮಾಡಿ ಸವಿಯಿರಿ…
ಬೇಕಾಗುವ ಪದಾರ್ಥಗಳು…
ತುಪ್ಪ- ಅರ್ಧ ಬಟ್ಟಲು
ಬಾಸುಮತಿ ಅಕ್ಕಿ- ಒಂದು ಬಟ್ಟಲು
ಹಾಲು- ಅರ್ಧ ಲೀಟರ್
ದ್ರಾಕ್ಷಿ- ಸ್ವಲ್ಪ
ಗೋಡಂಬಿ-ಸ್ವಲ್ಪ
ಏಲಕ್ಕಿ 2-3
ಕೇಸರಿ- ಸ್ವಲ್ಪ
ಸಕ್ಕರೆ- ಒಂದೂವರೆ ಬಟ್ಟಲು
ಪಿಸ್ತಾ- 10-15
ಮಾಡುವ ವಿಧಾನ…
ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ನಂತರ ಇದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ.
ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಹಾಗೂ ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾವನ್ನು ಹಾಕಿ. ನಂತರ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಫ್ರಿಡ್ಜ್ ನಲ್ಲಿಟ್ಟು, ತಣ್ಣನೆಯ ಕೀರನ್ನು ಸವಿಯಿರಿ.