ಪ್ರಮುಖ ಸುದ್ದಿ
ಮರೆಯಾದ ‘ಚಾಂದ್ ಕಾ ತುಕಡಾ’ : ನಟಿ ಶ್ರೀದೇವಿ ವಿಧಿವಶ!
ಮೋಹಕ ತಾರೆ, ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಮದುವೆ ಸಮಾರಂಭಕ್ಕಾಗಿ ದುಬೈಗೆಗೆ ತೆರಳಿದ್ದರು. ಆದರೆ, ನಿನ್ನೆ ರಾತ್ರಿ 11:30 ರ ಸುಮಾರಿಗೆ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
1963 ಆಗಷ್ಟ 13 ರಂದು ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ನಾಲ್ಕು ವರ್ಷದವರಿದ್ದಾಗಲೇ ಬಾಲನಟಿಯಾಗಿ ಕಲಾ ಪಯಣ ಆರಂಭಿಸಿದ್ದರು. ಬಳಿಕ ಜೂಲಿ ಸಿನೆಮಾ ಮೂಲಕ ನಟಿಯಾಗಿದ್ದರು. ಸುಮಾರು 264ಚಿತ್ರಗಳಲ್ಲಿ ನಟಿಸಿದ್ದರು. ಆರು ಕನ್ನಡ ಚಿತ್ರಗಳಲ್ಲೂ ಸಹ ನಟಿಸಿದ್ದರು.
ಹಿಂದಿ, ಕನ್ನಡ, ತೆಲುಗು, ಮಲಯಾಳಿ ಸೇರಿದಂತೆ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ಧ ಶ್ರೀದೇವಿ ಬಹುಭಾಷಾ ನಟಿಯಾಗಿ ಜನರ ಮನಸೂರೆಗೊಂಡಿದ್ದರು. ಇತ್ತೀಚೆಗೆ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ತಮ್ಮ 54 ನೇ ವರ್ಷದಲ್ಲಿ ಜೀವನ ಪಯಣ ಮುಗಿಸಿದ್ದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ.




