ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿ – ಕುಲಪತಿ ದಯಾನಂದ ಅಗಸರ್
ಮಡಿವಾಳ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿ – ಕುಲಪತಿ ಅಗಸರ್
ಮಡಿವಾಳ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
ಯಾದಗಿರಿ, ಶಹಾಪುರಃ ಪಾಲಕರು ಮೊದಲು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ಕೊಡಬೇಕು. ಸಂಸ್ಕಾರ, ಶಿಕ್ಷಣ ಹೊಂದಿದ ಮಕ್ಕಳು ಸಾಧನೆಯ ಮಾರ್ಗ ಕಂಡುಕೊಳ್ಳಲಿದ್ದಾರೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ದಯಾನಂದ ಅಗಸರ್ ತಿಳಿಸಿದರು.
ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಮಡಿವಾಳ ಮಾಚಿದೇವ ಸಂಘ(ರಿ) ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅತಿ ಹಿಂದುಳಿದ ಸಮಾಜ ನಮ್ಮದಾಗಿದ್ದು, ಅಲ್ಲದೆ ಅತಿ ಕಡಿಮೆ ಜನಸಂಖ್ಯೆ ಹೊಂದಿದ್ದು, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಶಕ್ತಿ ಇಲ್ಲದಿರುವದು ಇನ್ನಷ್ಟು ಶೋಷಿತಕೂಪಕ್ಕೆ ಸಮಾಜ ನಲುಗುತ್ತಿದೆ. ಇದೆಲ್ಲ ಸಮಸ್ಯೆಗಳಿಂದ ಹೊರ ಬರಬೇಕಾದರೆ ಶಿಕ್ಷಣ ಬಲು ಮುಖ್ಯ, ಜೊತೆಗೆ ಸಂಸ್ಕಾರ ನೀಡುವದು ಅಷ್ಟೆ ಮುಖ್ಯ.
ಉತ್ತಮ ಸಂಸ್ಕಾರ, ಸನ್ನಡತೆ ಹೊಂದಿದ ಮಗು ಸಮಾಜದಲ್ಲಿ ತನ್ನ ಬದುಕನ್ನು ಚನ್ನಾಗಿ ರೂಪಿಸಿಕೊಳ್ಳಬಲ್ಲ. ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಳ್ಳಿ ಪ್ರಾಮಾಣಿಕವಾಗಿ ನಿಷ್ಠಿಯಿಂದ ಶಿರಸಾವಹಿಸಿ ದುಡಿದಲ್ಲಿ ಫಲ ಕಟ್ಟಿಟ್ಟಬುತ್ತಿ. ಯುವಕರು ಯಾವುದೇ ಚಟಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಹೊಂದಿರಬೇಕು. ಸಮಾಜದ ಏಳ್ಗೆಗೆ ಶ್ರಮಿಸಬೇಕು.
ಸಮಾಜದ ಹೆಸರಲ್ಲಿ ಎಷ್ಟೇ ಸಂಘಟನೆಗಳಾಗಲಿ ಯಾವುದೇ ಸಂಘಟನೆಯಾಗಿರಲಿ ಉತ್ತಮ ಉದ್ದೇಶದಿಂದ ಆ ಸಂಘಟನೆ ಕೆಸಲ ಮಾಡಿದ್ದಲ್ಲಿ ಅಉ ಯಶಸ್ವಿಯಾಗಲಿದೆ ಎಂಬುದು ನೆನಪಿರಲಿ. ಹೀಗಾಗಿ ಯಾರೇ ಆಗಲಿ ಸಂಘಟನಾತ್ಮಕವಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗುಲ್ಬರ್ಗಾ ಸಹಾಯಕ ಕುಲಸಚಿವ ಡಾ.ಅಜೀಮ್ ಪಾಷಾ, ನಗರಸಭೆ ಎಇಇ ನಾನಾಸಾಬ ಮಡಿವಾಳ ಮಾತನಾಡಿದರು.
ಮದ್ರಿಕಿ ಹಿರೇಮಠದ ಶಿಲವಂತ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸಪುರ, ತಾಲ್ಲೂಕು ಅಧ್ಯಕ್ಷ ಭೀಮರಾಯ ಮಡಿವಾಳ, ಯಾದಗಿರಿ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಭಾಗ್ಯಶ್ರೀ ಎಂ, ಸಾಯಬಣ್ಣ ಮಡಿವಾಳ, ನಗರಸಭೆ ಸದಸ್ಯ ಮಹೇಶ ಮಡಿವಾಳ, ಸಂತೋಷ ಮಡಿವಾಳ, ಚಂದ್ರಪ್ರಕಾಶ ಹಳಿಸಗರ, ನಾಗು ಮಡಿವಾಳ ಇತರರಿದ್ದರು.
ಉಪನ್ಯಾಸಕ ದೇವಿಂದ್ರಪ್ಪ ಮಡಿವಾಳ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಹಳಿಸಗರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂಪಾಪತಿ ಶಿರ್ಣಿ, ಮಲ್ಲಿಕಾರ್ಜುನ ಮುದ್ನೂರ, ರವಿ ಮಡಿವಾಳ ನಾಗಡದಿನ್ನಿ, ನಿಂಗಪ್ಪ ಅಗಸರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಹೊರ ದೇಶಗಳಲ್ಲಿ ನಡೆದ ಭರತ ನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿಜಯಪುರದ ಮಡಿವಾಳ ಸಮಾಜದ ಸಹೋದರಿಯರಿಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು.
————————–